ಕ್ರಿಕೆಟ್

ಹ್ಯಾಮಿಲ್ಟನ್ ನಲ್ಲಿ ದಾಖಲೆ ಬರೆದ ಶತಕ ವೀರ ಶ್ರೇಯಸ್ ಅಯ್ಯರ್!

Srinivasamurthy VN

ಹ್ಯಾಮಿಲ್ಟನ್: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸುವ ಮೂಲಕ ಭಾರತದ ಸ್ಟಾರ್ ಬ್ಯಾಟ್ಸ್ ಮನ್ ಶ್ರೇಯಸ್ ಅಯ್ಯರ್ ದಾಖಲೆ ನಿರ್ಮಿಸಿದ್ದಾರೆ.

ಹೌದು.. ಇಂದು ಹ್ಯಾಮಿಲ್ಟನ್ ನ ಸೆಡಾನ್ ಪಾರ್ಕ್ ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ  ಭರ್ಜರಿ ಶತಕ ಸಿಡಿಸಿ ಭಾರತದ ಬೃಹತ್ ಮೊತ್ತಕ್ಕೆ ಕಾರಣರಾದ ಶ್ರೇಯಸ್ ಅಯ್ಯರ್ ಹ್ಯಾಮಿಲ್ಟನ್ ಕ್ರೀಡಾಂಗಣದಲ್ಲಿ ದಾಖಲೆ ಬರೆದಿದ್ದಾರೆ.

ಈ ಕ್ರೀಡಾಂಗಣದಲ್ಲಿ ಭಾರತದ ಪರ ಪಂದ್ಯವೊಂದರಲ್ಲಿ ಗರಿಷ್ಠ ರನ್ ದಾಖಲಿಸಿದ 2ನೇ ಆಟಗಾರ ಎಂಬ ಕೀರ್ತಿಗೆ ಅಯ್ಯರ್ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು 2009ರಲ್ಲಿ ವೀರೇಂದ್ರ ಸೆಹ್ವಾದ್ ಇದೇ ಕ್ರೀಡಾಂಗಣದಲ್ಲಿ 125 ರನ್ ಸಿಡಿಸಿದ್ದರು. ಇದು ಈ ವರೆಗಿನ ಭಾರತೀಯ ಬ್ಯಾಟ್ಸ್ ಮನ್ ಗಳ ಗರಿಷ್ಠ ವೈಯುಕ್ತಿಕ ರನ್ ಗಳಿಕೆಯಾಗಿತ್ತು. 2015ರಲ್ಲಿ ಐರ್ಲೆಂಡ್ ವಿರುದ್ಧ ಇದೇ ಕ್ರೀಡಾಂಗಣದಲ್ಲಿ ಶಿಖರ್ ಧವನ್ 100 ರನ್ ಸಿಡಿಸಿ 2ನೇ ಸ್ಥಾನದಲ್ಲಿದ್ದರು. ಆದರೆ ಇಂದು ಅಯ್ಯರ್ 103 ರನ್ ಗಳಿಸಿ ಧವನ್ ರನ್ನು 3ನೇ ಸ್ಥಾನಕ್ಕೆ ತಳ್ಳಿ ತಾವು 2ನೇ ಸ್ಥಾನಕ್ಕೇರಿದ್ದಾರೆ. ಇದೇ ಕ್ರೀಡಾಂಗಣದಲ್ಲಿ ಇಂದು ಕೆಎಲ್ ರಾಹುಲ್ ಅಜೇಯ 88 ರನ್ ಗಳಿಸುವ ಮೂಲಕ ಗರಿಷ್ಠ ರನ್ ಗಳಸಿದ 4ನೇ ಆಟಗಾರರಾಗಿದ್ದಾರೆ.

SCROLL FOR NEXT