ಭಾರತ-ಬಾಂಗ್ಲಾದೇಶ 
ಕ್ರಿಕೆಟ್

ಅಂಡರ್ 19 ವಿಶ್ವಕಪ್: ಭಾರತ ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ಬಾಂಗ್ಲಾ!

ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಭಾರತ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ.

ಪೊಚೆಫ್‌ಸ್ಟ್ರೂಮ್: ಅಂಡರ್ 19 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಭಾರತ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. 

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 47.2 ಓವರ್ ಗಳಲ್ಲಿ 177 ರನ್ ಗಳಿಗೆ ಆಲೌಟ್ ಆಯಿತು. 178 ರನ್ ಗಳ ಗುರಿ ಬೆನ್ನಟ್ಟಿದ ಬಾಂಗ್ಲಾ 23 ಎಸೆತ ಬಾಕಿರುವಂತೆ 3 ವಿಕೆಟ್ ಗಳಿಂದ ಗೆದ್ದು ಬೀಗಿತು. ಮಳೆ ಕಾಟದಿಂದ ಓವರ್ ಗಳಿಗೆ ಕತ್ತರಿ ಬಿದ್ದಿತು. ಡಕ್ವರ್ತ್ ಲೂಯಿಸ್ ನಿಯಮದಂತೆ ಬಾಂಗ್ಲಾ ಗೆಲುವಿಗೆ 46 ಓವರ್ ಗಳಲ್ಲಿ 170 ರನ್ ಗಳ ಗುರಿ ನಿಗದಿ ಪಡಿಸಲಾಯಿತು.

ಭಾರತ ತಂಡ ಅದಾಗಲೇ ನಾಲ್ಕು ಬಾರಿ ಅಂಡರ್ 19 ವಿಶ್ವಕಪ್ ಗೆದ್ದು ಬೀಗಿದ್ದು 5ನೇ ಬಾರಿ ಅವಕಾಶವನ್ನು ಕಳೆದುಕೊಂಡಿದೆ. 

ಭಾರತ ಪರ ಜೈಸ್ವಾಲ್ 88, ತಿಲಕ್ ವರ್ಮಾ 38, ಜುರೇಲ್ 22 ರನ್ ಬಾರಿಸಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!