ವಿರಾಟ್ ಕೊಹ್ಲಿ 
ಕ್ರಿಕೆಟ್

ಹಿಂದೆಂದೂ ಆಡದಷ್ಟು ಕಳಪೆ ಆಟದಿಂದಲೇ ಸರಣಿ ಸೋತೆವು: ವಿರಾಟ್ ಕೊಹ್ಲಿ

ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಐದು ವಿಕೆಟ್‌ಗಳ ಸೋಲಿನಿಂದ ಸರಣಿಯನ್ನು 0-3ರಿಂದ ಕಳೆದುಕೊಂಡಿರುವ ಭಾರತದ ನಾಯಕ ವಿರಾಟ್ ಕೊಹ್ಲಿ, ತಂಡ ಹಿಂದೆಂದೂ ಆಡದಷ್ಟು ಕಳಪೆ ಆಟವಾಡಿದೆ ಎಂದು ಹೇಳಿದ್ದಾರೆ.

ಮೌಂಟ್ ಮಾಂಗನೂಯಿ: ನ್ಯೂಜಿಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಐದು ವಿಕೆಟ್‌ಗಳ ಸೋಲಿನಿಂದ ಸರಣಿಯನ್ನು 0-3ರಿಂದ ಕಳೆದುಕೊಂಡಿರುವ ಭಾರತದ ನಾಯಕ ವಿರಾಟ್ ಕೊಹ್ಲಿ, ತಂಡ ಹಿಂದೆಂದೂ ಆಡದಷ್ಟು ಕಳಪೆ ಆಟವಾಡಿದೆ ಎಂದು ಹೇಳಿದ್ದಾರೆ.

ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ 3-0 ರಿಂದ ಭಾರತವನ್ನು ಸೋಲಿಸಿತು. ವಿರಾಟ್ ಪಂದ್ಯದ ನಂತರ, "ತಂಡವು ಈ ಮೊದಲು ಇಂತಹ ಕಳಪೆ ಆಟವನ್ನು ಪ್ರದರ್ಶಿಸಿರಲಿಲ್ಲ. ಆದರೆ ಅವಕಾಶಳನ್ನು ಬಳಸಿಕೊಳ್ಳುವಲ್ಲಿ ನಾವು ವಿಫಲವಾದೆವು. ಇದು ನಮ್ಮ ಸೋಲಿಗೆ ಕಾರಣವಾಗಿದೆ" ಎಂದಿದ್ದಾರೆ.

"ಸರಣಿಯನ್ನು ಒಮ್ಮೆ ಅವಲೋಕಿಸಿದಾಗ ಬ್ಯಾಟ್ಸ್ ಮನ್ ಗಳು ತಮ್ಮ ಕ್ಷಮತೆ ಪ್ರದರ್ಶಿಸಿದ್ದಾರೆ. ಮೇಲ್ಪಂಕ್ತಿಯ ಆಟಗಾರರು ರನ್ ಕಲೆ ಹಾಕುವಲ್ಲಿ ವಿಫಲವಾದಾಗ ಮಧ್ಯಮ ಕ್ರಮಾಂಕಿತರು ರನ್ ಕಲೆ ಹಾಕಿದ್ದಾರೆ. ಆದರೆ ನಾವು ಫೀಲ್ಡಿಂಗ್ ಮತ್ತು ಬೌಲಿಂಗ್ ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದೇವೆ” ಎಂದು ವಿರಾಟ್ ತಿಳಿಸಿದ್ದಾರೆ.

ಏಕದಿನ ಸರಣಿ ಗೆದ್ದ ಆತಿಥೇಯ ತಂಡ ಭಾರತ ತಂಡಕ್ಕಿಂತಲೂ ಉತ್ತಮ ಆಟವಾಡಿತು ಎಂಬುದನ್ನು ಒಪ್ಪಿಕೊಂಡ ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ, ಇದೀಗ ಫೆ. 21ರಂದು ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ