ವಿರಾಟ್ ಕೊಹ್ಲಿ 
ಕ್ರಿಕೆಟ್

ಆರ್‌ಸಿಬಿ ತಂಡದ ನೂತನ ಲಾಂಛನ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು?

ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಕ್ಕಿನ್ನು ಇನ್ನೆರಡು ತಿಂಗಳುಗಳು ಮಾತ್ರ ಬಾಕಿ ಉಳಿದಿರುವಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನೂತನ ಲಾಂಛನವನ್ನು ಬಿಡುಗಡೆ ಮಾಡಿದೆ.

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 13ನೇ ಆವೃತ್ತಿಯ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ಆರಂಭಕ್ಕಿನ್ನು ಇನ್ನೆರಡು ತಿಂಗಳುಗಳು ಮಾತ್ರ ಬಾಕಿ ಉಳಿದಿರುವಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ನೂತನ ಲಾಂಛನವನ್ನು ಬಿಡುಗಡೆ ಮಾಡಿದೆ.

ಇದರೊಂದಗಿ ಹೊಸ ದಶಕದ ಆರಂಭದೊಂದಿಗೆ ಆರ್ ಸಿಬಿ ತಂಡವು ಹೊಸ ಹುರುಪಿನೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಯಾವುದೇ ಸದ್ದಿಲ್ಲದೆ ಆರ್ ಸಿಬಿ ಫ್ರಾಂಚೈಸಿಯು ಏಕಾಏಕಿ ಸಾಮಾಜಿಕ ಜಾಲತಾಣಗಳಿಂದ ಹಳೆಯ ಲೋಗೋ ಹಾಗೂ ಪೋಸ್ಟ್ ಗಳನ್ನು ಡಿಲೀಟ್ ಮಾಡಿರುವುದು ಗೊಂದಲ ಸೃಷ್ಟಿ ಮಾಡಲು ಕಾರಣವಾಗಿತ್ತು. ಈ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಮೈಕ್ ಹೆಸ್ಸನ್ ಕೂಡಾ ಆತಂಕವನ್ನು ವ್ಯಕ್ತಪಡಿಸಿದ್ದರು.

ಕೊನೆಗೂ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿರುವ ಆರ್ ಸಿಬಿ, ಪ್ರೇಮಿಗಳ ದಿನಾಚರಣೆಯಂದು ಹೊಸ ಲಾಂಛನವನ್ನು ಬಿಡುಗಡೆ ಮಾಡಿದೆ. ಇದೀಗ ಹೊಸ ಲೋಗೋ ನೋಡಿರುವ ನಾಯಕ ವಿರಾಟ್ ಕೊಹ್ಲಿ ಪುಳಕಿತಗೊಂಡಿದ್ದಾರೆ. ಈ ಬಗ್ಗೆ ಕ್ಯಾಪ್ಟನ್ ಕೊಹ್ಲಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಮಾತನಾಡುವುದು ಜನರ ಕೆಲಸವಾಗಿದೆ. ನಮ್ಮ ಹೊಸ ಲೋಗೋ ನೋಡಲು ಥ್ರಿಲ್ ಆಗಿದೆ. ಇದು ನಮ್ಮ ಆಟಗಾರರು ಮೈದಾನದಲ್ಲಿ ತರುವ ದಿಟ್ಟ ಹೆಮ್ಮೆ ಹಾಗೂ ಚಾಲೆಂಜರ್ ಮನೋಭಾವವನ್ನು ಸಾಕಾರಗೊಳಿಸುತ್ತದೆ. ಹೊಸ ಐಪಿಎಲ್ ಆವೃತ್ತಿ ಆರಂಭವಾಗುವ ತನಕ ಕಾಯಲು ಸಾಧ್ಯವಿಲ್ಲ ಎಂದು ಉಲ್ಲೇಖಿಸಿದ್ದಾರೆ. 

ಐಪಿಎಲ್ 2020ನೇ ಸಾಲಿಗೆ ಕಾಲಿಡುತ್ತಿರುವಂತೆಯೇ ರಾಯಲ್ ಚಾಲೆಂಜಸ್ ಬೆಂಗಳೂರು ತಂಡವು ಚೊಚ್ಚಲ ಕಿರೀಟದ ನಿರೀಕ್ಷೆಯಲ್ಲಿದೆ. ಈ ನಿಟ್ಟಿನಲ್ಲಿ ತಂಡದಲ್ಲಿ ಮಹತ್ವದ ಬದಲಾವಣೆ ತರಲಾಗಿದೆ. ಕೋಚಿಂಗ್ ಪ್ಯಾನೆಲ್ ನಲ್ಲಿ ಹೆಚ್ಚಿನ ಬದಲಾವಣೆ ತರಲಾಗಿದ್ದು, ಮೇಜರ್ ಸರ್ಜರಿ ಮಾಡಲಾಗಿದೆ. ಇದೀಗ ಆರ್ ಸಿಬಿ ಅದೃಷ್ಟ ಕೂಡಾ ಬದಲಾಗಿ ಚೊಚ್ಚಲ ಕನಸು ನನಸಾಗುವುದೇ ಎಂಬುದನ್ನು ಕಾದು ನೋಡಬೇಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಬಿಹಾರದ ವೈಶಾಲಿಯಲ್ಲಿ ದೋಣಿ ಮುಳುಗಿ ಕನಿಷ್ಠ 13 ಮಂದಿ ಸಾವು; ಪ್ರಧಾನಿ ಮೋದಿ ಸಂತಾಪ, ಪರಿಹಾರ ಘೋಷಣೆ; Video

ಬಿಹಾರದ ಯುವಕನ ಜೊತೆ ಪ್ರೀತಿ, ಮದುವೆಗೆ ಸಿದ್ಧತೆ; ತಾಯಿ ಸಲಹೆ ಬೆನ್ನಲ್ಲೇ ನಿರ್ಧಾರ ಬದಲಿಸಿದ ಬೆಂಗಳೂರು ಟೆಕ್ಕಿ.. ಆಗಿದ್ದೇನು?

'ಜಂತರ್ ಮಂತರ್‌'ಗೆ ಅಕ್ರಮ ಪ್ರವೇಶ ಆರೋಪ: ಮುನ್ನೆಚ್ಚರಿಕೆ ಕ್ರಮವಾಗಿ CJPಯ ರಂಕಾ, ದಾಸ್, ಶಿಂಧೆ ಬಂಧನ

‘ರಾಹುಲ್ ಗಾಂಧಿ ನನ್ನನ್ನು ಪಕ್ಕಕ್ಕೆ ತಳ್ಳಿಲ್ಲ,ಕಾಳಜಿ ವಹಿಸಿದರು, ಬಿಜೆಪಿಯವರಿಗೆ ನನ್ಮೇಲೆ ತುಂಬಾ ಪ್ರೀತಿ’: CM ಡಿ.ಕೆ. ಶಿವಕುಮಾರ್; Video