ಕ್ರಿಕೆಟ್

ಐಪಿಎಲ್ ಇತಿಹಾಸದಲ್ಲಿಯೇ ಮುಂಬೈ ಇಂಡಿಯನ್ಸ್ ಯಶಸ್ವಿ ತಂಡವಾಗಲು ಕಾರಣಗಳಿವು

Nagaraja AB

ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್ ಆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಇತಿಹಾಸದಲ್ಲಿಯೇ ಮುಂಬೈ ಇಂಡಿಯನ್ಸ್ ಅತ್ಯಂತ ಯಶಸ್ವಿ ತಂಡವಾಗಿ ಗುರುತಿಸಿಕೊಂಡಿದೆ. ನಾಲ್ಕು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿರುವುದೇ ಇದಕ್ಕೆ ಸಾಕ್ಷಿ. ಮುಂಬೈ ಇಂಡಿಯನ್ಸ್‌ ತಂಡದ ಯಶಸ್ವಿಗೆ ಹಲವು ಕಾರಣಗಳಿವೆ

ಮುಂಬೈ ಇಂಡಿಯನ್ಸ್‌ ತಂಡದ ಯಶಸ್ಸಿಗೆ ಅಂತಾರಾಷ್ಟ್ರೀಯ ಆಟಗಾರರ ಜತೆಗೆ ಹೆಚ್ಚಿನ ಯುವ ಆಟಗಾರರಿಗೆ ಅವಕಾಶ ನೀಡುವುದು ಪ್ರಮುಖ ಕಾರಣ ಎಂದೇ ಹೇಳಬಹುದು. ಹಾಲಿ ಚಾಂಪಿಯನ್‌ ಮುಂಬೈ, ನ್ಯೂಜಿಲೆಂಡ್ ಸ್ಟಾರ್ ವೇಗಿ ಟ್ರೆಂಟ್‌ ಬೌಲ್ಟ್‌ ಅವರ ಸೇವೆಯನ್ನು ಖಚಿತಪಡಿಸಿಕೊಂಡಿದೆ. 

ಆದಾಗ್ಯೂ, 2020ರ ಆವೃತ್ತಿಯ ಐಪಿಎಲ್ ಆವೃತ್ತಿಯ ಹರಾಜು ಪ್ರಕ್ರಿಯೆಯಲ್ಲಿ ನಥಾನ್ ಕೌಲ್ಟರ್ ನೈಲ್‌ ಹಾಗೂ ಕ್ರಿಸ್ ನೈಲ್‌ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ತಂಡವನ್ನು ಇನ್ನಷ್ಟು ಬಲಿಷ್ಠ ಮಾಡಿಕೊಂಡಿದೆ.

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್‌ ಶರ್ಮಾ ಅವರಿಗೆ ಅಂತಿಮ ೧೧ರಲ್ಲಿ ಬೌಲಿಂಗ್‌ ವಿಭಾಗ ನಿರ್ವಹಿಸಲು ಅದ್ಭುತ ಬೌಲರ್‌ಗಳಿದ್ದಾರೆ. ಮುಂಬರುವ ಆವೃತ್ತಿಯಲ್ಲಿ ಮುಂಬೈ ಪರಿಗಣಿಸಲಿರುವ ಬೌಲಿಂಗ್ ಸಂಯೋಜನೆ ಬಗ್ಗೆ ಕ್ರಿಕೆಟ್‌ ಪಂಡಿತರಿಂದ ಚರ್ಚೆಗಳು ನಡೆಯುತ್ತಿವೆ.

ಪಾಂಡ್ಯ ಸಹೋದರರ ಬಲ: ಭಾರತ ತಂಡದ ಯಶಸ್ವಿ ಆಲ್ ರೌಂಡರ್ ಗಳಲ್ಲಿ  ಹಾರ್ದಿಕ್ ಪಾಂಡ್ಯ ಹಾಗೂ ಕೃನಾಲ್ ಪಾಂಡ್ಯ ಮುಂಚೂಣಿಯಲ್ಲಿದ್ದಾರೆ. ಪಾಂಡ್ಯ ಸಹೋದರರಿಲ್ಲದೆ ಮುಂಬೈ ಇಂಡಿಯನ್ಸ್‌ ಅಂತಿಮ 11ರ ಕಲ್ಪನೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ, ಬೆನ್ನು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಟೂರ್ನಿ ಆರಂಭಕ್ಕೂ ಮುನ್ನ ಫಿಟ್‌ ಆಗಲು ಪ್ರಯತ್ನಿಸುತ್ತಿದ್ದು, ಲಭ್ಯತೆ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ. 

ರಾಷ್ಟ್ರೀಯ ತಂಡದ ಹಲವು ಸರಣಿಗಳನ್ನು ಅವರು ವಂಚಿತರಾಗಿದ್ದಾರೆ. ಇನ್ನು, ಕಳೆದ ಆವೃತ್ತಿಯಲ್ಲಿ ಮುಂಬೈ ತಂಡದಲ್ಲಿ ಗಮನಾರ್ಹ ಪ್ರದರ್ಶನ ತೋರಿದ್ದ ಕೃನಾಲ್‌ ಪಾಂಡ್ಯ ಅದೇ ಲಯವನ್ನು ಮುಂದುವರಿಸುವ ತುಡಿತದಲ್ಲಿದ್ದಾರೆ.ಕೃನಾಲ್ ಕಳೆದ ವರ್ಷ ಬ್ಯಾಟಿಂಗ್‌ನಲ್ಲಿ ವಿಫಲರಾಗಿದ್ದರು. ಆದರೆ, ಬೌಲಿಂಗ್‌ನಲ್ಲಿ ಮಿಂಚಿದ್ದರು. ಮುಂಬೈ ತಂಡದಲ್ಲಿ ಕೃನಾಲ್ ಮುಂಚೂಣಿ ಸ್ಪಿನ್ನರ್‌ ಆಗಿದ್ದಾರೆ. ಡೆತ್ ಓವರ್‌ಗಳಲ್ಲಿ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸುವ ಮೂಲಕ ನಾಯಕ ರೋಹಿತ್‌ಗೆ ನೆರವಾಗಬಲ್ಲರು.


ಮುಂಬೈ ತಂಡದ ವೇಗದ ಬೌಲಿಂಗ್‌ ವಿಭಾಗದಲ್ಲಿ ಜಸ್ಪ್ರಿತ್‌ ಬಮ್ರಾ, ಟ್ರೆಂಟ್‌ ಬೌಲ್ಟ್‌ ಹಾಗೂ ಲಸಿತ್‌ ಮಲಿಂಗಾ ಪ್ರಮುಖ ಅಸ್ತ್ರಗಳಾಗಿವೆ. ಪಿಚ್‌ ಹಾಗೂ ವಾತಾವರಣಕ್ಕೆ ತಕ್ಕಂತೆ ಬೌಲರ್‌ಗಳನ್ನು ನಾಯಕ ರೋಹಿತ್‌ ಶರ್ಮಾ ಉಪಯೋಗಿಸಿಕೊಳ್ಳಲಿದ್ದಾರೆ.ಬುಮ್ರಾ ಹಾಗೂ ಲಸಿತ್ ಮಲಿಂಗಾ ಅವರ ಜತೆ ಕಿವೀಸ್‌ ಹಿರಿಯ ವೇಗಿ ಟ್ರೆಂಟ್‌ ಬೌಲ್ಟ್‌ ಅವರು ಹೊಸ ಚೆಂಡಿನಲ್ಲಿ ಅತ್ಯುತ್ತಮ ಬೌಲಿಂಗ್ ಮಾಡಬಲ್ಲರು. ಹಾಗಾಗಿ, ಅವರಿಗೆ ಪವರ್‌ ಪ್ಲೇನಲ್ಲಿ ಎಲ್ಲ ನಾಲ್ಕು ಓವರ್‌ಗಳನ್ನು ಬೌಲಿಂಗ್‌ ಮಾಡಿಸುವ ಸಾಧ್ಯತೆ ಇದೆ. ಆದರೆ, ಮಲಿಂಗಾ ಹಾಗೂ ಬುಮ್ರಾ ಅವರನ್ನು ಡೆತ್‌ ಓವರ್‌ಗಳವರೆಗೂ ಉಳಿಸಿಕೊಳ್ಳಬಹುದು.

ರಾಹುಲ್‌ ಚಾಹರ್‌ 2020ರ ಆವೃತ್ತಿಗೆ ಮುಂಬೈ ಇಂಡಿಯನ್ಸ್‌ ತಂಡದ ಮುಂಚೂಣಿ ಸ್ಪಿನ್ನರ್ ಆಗಿದ್ದಾರೆ. ಕಳೆದ ಆವೃತ್ತಿ ಆಡಿದ್ದ ಮಯಾಂಕ್‌ ಮರ್ಕಂಡೆ ಅವರ ಸ್ಥಾನದಲ್ಲಿ ಯುವ ಸ್ಪಿನ್ನರ್ ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ಐಪಿಎಲ್‌ನಲ್ಲಿ ರಾಹುಲ್ ಚಾಹರ್ ಗಮನಾರ್ಹ ಪ್ರದರ್ಶನ ತೋರಿದ್ದರು. ಇದರ ಫಲವಾಗಿ ಅವರು ಟೀಮ್‌ ಇಂಡಿಯಾಗೆ ಅವಕಾಶ ಪಡೆದಿದ್ದರು. ಇದೇ ವರ್ಷ ಐಸಿಸಿ ಟಿ-20 ವಿಶ್ವಕಪ್‌ ಇರುವ ಹಿನ್ನೆಲೆಯಲ್ಲಿ ಅವರು ಮುಂಬೈ ಪರ ಈ ಬಾರಿ ಐಪಿಎಲ್‌ನಲ್ಲಿ ಸ್ಪಿನ್‌ ಮೋಡಿ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ.
 
ರಾಹುಲ್‌ ಚಾಹರ್‌ ಸಾಂಪ್ರದಾಯಿಕ ಸ್ಪಿನ್ನರ್ ಆಗಿದ್ದು, ಲೆಗ್‌ ಸ್ಪಿನ್ನರ್‌ಗಳಿಗಿಂತಲೂ ಚೆಂಡನ್ನು ಹೆಚ್ಚು ಗೂಗ್ಲಿ ಮಾಡಬಲ್ಲರು. ಎರಡೂ ದಿಕ್ಕಿನಲ್ಲಿ ಚೆಂಡನ್ನು ತಿರುಗಿಸುವ ಚಾಕಚಕ್ಯತೆಯನ್ನು ಅವರು ಮೈಗೂಡಿಸಿಕೊಂಡಿದ್ದಾರೆ. ಕಳೆದ ಆವೃತ್ತಿಯ ಲಯವನ್ನೇ ಮುಂದುವರಿಸಲು ಎದುರು ನೋಡಿತ್ತಿದ್ದಾರೆ. ಒತ್ತಡದ ಸಮಯದಲ್ಲಿ ಅವರು ಹೇಗೆ ಬೌಲಿಂಗ್‌ ಮಾಡಲಿದ್ದಾರೆಂಬ ಬಗ್ಗೆ ಕಾದುನೋಡಬೇಕಾಗಿದೆ.

SCROLL FOR NEXT