ಜಡೇಜಾ-ಆಸ್ಟನ್ ಅಗರ್ 
ಕ್ರಿಕೆಟ್

ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ ಆಸ್ಟ್ರೇಲಿಯಾ ಬೌಲರ್ ಅಗರ್ ಹೊಗಳಿದ್ದು ಜಡೇಜಾರನ್ನ!

ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ (ರಾಕ್ ಸ್ಟಾರ್) ನನಗೆ ಸ್ಪೂರ್ತಿ ಎಂದು ಹ್ಯಾಟ್ರಿಕ್ ಸಹಿತ 5 ವಿಕೆಟ್ ಪಡೆದ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ಸ್ಪಿನ್ನರ್ ಆಸ್ಟನ್ ಅಗರ್ ಹೇಳಿದ್ದಾರೆ.

ಜೋಹಾನ್ಸ್ ಬರ್ಗ್: ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ (ರಾಕ್ ಸ್ಟಾರ್) ನನಗೆ ಸ್ಪೂರ್ತಿ ಎಂದು ಹ್ಯಾಟ್ರಿಕ್ ಸಹಿತ 5 ವಿಕೆಟ್ ಪಡೆದ ಸಾಧನೆ ಮಾಡಿರುವ ಆಸ್ಟ್ರೇಲಿಯಾದ ಸ್ಪಿನ್ನರ್ ಆಸ್ಟನ್ ಅಗರ್ ಹೇಳಿದ್ದಾರೆ. 

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದಲ್ಲಿ ಆಸ್ಟನ್ ಅಗರ್ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದರು. ಇದರ ಜೊತೆಗೆ ಐದು ವಿಕೆಟ್ ಗೊಂಚಲನ್ನು ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. 

ಇನ್ನು ಪಂದ್ಯದ ಬಳಿಕ ಮಾತನಾಡಿದ ಅಗರ್, ಭಾರತದಲ್ಲಿ ನಡೆದ ಏಕದಿನ ಸರಣಿ ಬಳಿಕ ರವೀಂದ್ರ ಜಡೇಜಾರೊಂದಿಗೆ ಮಾತುಕತೆ ನಡೆಸಿದ್ದೆ, ಆಗ ಅವರು ಆಡಿದ ಮಾತುಗಳೇ ನನಗೆ ಸ್ಪೂರ್ತಿ ಎಂದು ಹೇಳಿಕೊಂಡಿದ್ದಾರೆ. 

ರವೀಂದ್ರ ಜಡೇಜಾ ರಾಕ್ ಸ್ಟಾರ್, ಸ್ಪಿನ್ ಬೌಲಿಂಗ್ ಜೊತೆಗೆ ಧನಾತ್ಮಕ ಆಲೋಚನೆಯೊಂದಿಗೆ ಬ್ಯಾಟಿಂಗ್ ಕೂಡ ನಡೆಸುತ್ತಾರೆ. ಫೀಲ್ಡಿಂಗ್ ನಲ್ಲಿಯೂ ಅದ್ಭುತ ಪ್ರದರ್ಶನ ನೀಡುತ್ತಾರೆ. ಆತ ನನ್ನ ನೆಚ್ಚಿನ ಆಟಗಾರ, ನಾನೂ ಜಡೇಜಾ ರೀತಿ ಆಡಲು ಬಯಸುತ್ತೇವೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ತಪ್ಪಾದ DPR ಸಿದ್ಧಪಡಿಸುವ ಸಲಹೆಗಾರರೇ ಹೆದ್ದಾರಿ ಅಪಘಾತಗಳು ಮತ್ತು ಸಾವುಗಳಿಗೆ 'ತಪ್ಪಿತಸ್ಥರು': ನಿತಿನ್ ಗಡ್ಕರಿ ಕಠಿಣ ಕ್ರಮದ ಎಚ್ಚರಿಕೆ!

ಕೇವಲ 4 ಚಿತ್ರ ಮಾಡಿದ ನಟನಿಗೆ 'ಸರ್' ಅಂತೀರಲ್ಲ ಶಿವಣ್ಣ; ಸೆಂಚೂರಿ ಸ್ಟಾರ್ ವಿರುದ್ಧ ಕನ್ನಡಿಗರ ಬೇಸರ, Video!

ಸಿಎಂ ವಿಜಯ್ ಯು- ಟರ್ನ್: ಮತ್ತೊಂದು ಮಹತ್ವದ ಆದೇಶ ಹಿಂಪಡೆದ ತಮಿಳುನಾಡು ಸರ್ಕಾರ!

ದಾವಣಗೆರೆ-ಹರಿಹರ ಅವಳಿ ನಗರ ಅಭಿವೃದ್ಧಿಗೆ 'ಮಾಸ್ಟರ್ ಪ್ಲಾನ್ 2041' ಕ್ಕೆ ಸರ್ಕಾರದ ಅನುಮೋದನೆ!

'ಮೇಕೆದಾಟು ಅಣೆಕಟ್ಟು ನಿರ್ಮಾಣಕ್ಕೆ ಕರ್ನಾಟಕ ಸರ್ಕಾರ ಒಂದೇ ಒಂದು ಕಲ್ಲು ಇಡೋಕೂ ಬಿಡಲ್ಲ': ತಮಿಳುನಾಡು ಸಚಿವ ಆನಂದ್ ಕ್ಯಾತೆ