ಕ್ರಿಕೆಟ್

ಮ್ಯಾಚ್ ಫಿಕ್ಸಿಂಗ್: ಒಮನ್ ಕ್ರಿಕೆಟಿಗನ 7 ವರ್ಷ ಅಮಾನತು ಮಾಡಿದ ಐಸಿಸಿ

Srinivasamurthy VN

ದುಬೈ: ಮ್ಯಾಚ್ ಫಿಕ್ಸಿಂಗ್ ಆರೋಪದಡಿ ಒಮನ್ ಕ್ರಿಕೆಟಿಗನನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) 6 ವರ್ಷ ಅಮಾನತು ಮಾಡಿದೆ.

ಒಮನ್ ನ ಉದಯೋನ್ಮುಖ ಕ್ರಿಕೆಟಿಗ ಯೂಸುಫ್ ಅಬ್ದುಲ್ ರಹೀಂ ಅಲ್ ಬಲುಶಿ ಐಸಿಸಿಯಿಂದ ಅಮಾನತು ಶಿಕ್ಷೆಗೊಳಗಾಗಿದ್ದು, ಕಳೆದ ತಿಂಗಳು ಯುಎಇಯಲ್ಲಿ ನಡೆದಿದ್ದ 2019ರ ಟಿ 20 ವಿಶ್ವಕಪ್ ಅರ್ಹತಾ ಪಂದ್ಯದ ಅಭ್ಯಾಸದ ವೇಳೆ ಭ್ರಷ್ಟಾಚಾರದಲ್ಲಿ ತೊಡಗಿದ್ದಕ್ಕಾಗಿ ಒಮನ್‌ನ ಯೂಸುಫ್ ಅಬ್ದುಲ್‌ ರಹೀಮ್ ಅಲ್ ಬಲುಶಿ ಅವರನ್ನು ಎಲ್ಲ ಮಾದರಿಯ ಕ್ರಿಕೆಟ್ ನಿಂದ ಏಳು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಷೇಧಿಸಿದೆ.

ಮ್ಯಾಚ್ ಫಿಕ್ಸಿಂಗ್ ಸೇರಿದಂತೆ ನಾಲ್ಕು ಆರೋಪಗಳಲ್ಲಿ ಯೂಸುಫ್ ತಪ್ಪಿತಸ್ಥರೆಂದು ಕಂಡುಹಿಡಿದ ನಂತರ ಜನವರಿಯಲ್ಲಿ ಐಸಿಸಿಯ ಭ್ರಷ್ಟಾಚಾರ ನಿಗ್ರಹ ಘಟಕ (ಎಸಿಯು) ಆರೋಪಗಳನ್ನು ಸಲ್ಲಿಸಿತ್ತು. ಐಸಿಸಿ ಭ್ರಷ್ಟಾಚಾರ ನಿಗ್ರಹ ಸಂಹಿತೆಯನ್ನು ಉಲ್ಲಂಘಿಸಿದ ನಾಲ್ಕು ಆರೋಪಗಳನ್ನು ಯೂಸುಫ್ ಒಪ್ಪಿಕೊಂಡಿದ್ದಾರೆ ಎಂದು ಐಸಿಸಿ ಸೋಮವಾರ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

SCROLL FOR NEXT