ಕ್ರಿಕೆಟ್

ನ್ಯೂಜಿಲೆಂಡ್ ಎದುರು ಭಾರತಕ್ಕೆ 10 ವಿಕೆಟ್‌ಗಳ ಹೀನಾಯ ಸೋಲು

Nagaraja AB

ವೆಲ್ಲಿಂಗ್ಟನ್: ಟಿಮ್ ಸೌಥಿ ಹಾಗೂ ಟ್ರೆಂಟ್ ಬೌಲ್ಟ್ ಅವರ ಮಾರಕ ದಾಳಿಯ ನೆರವಿನಿಂದ ನ್ಯೂಜಿಲೆಂಡ್ ತಂಡ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತದ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಆ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಆತಿಥೇಯರು 1-0 ಮುನ್ನಡೆ ಗಳಿಸಿದರು.

ಇಲ್ಲಿನ ಬೇಸಿನ್ ರಿವರ್‌ ಅಂಗಳದಲ್ಲಿ ನಾಲ್ಕನೇ ದಿನವಾದ ಇಂದು,  ಟಿಮ್ ಸೌಥಿ(61 ಕ್ಕೆ 5) ಹಾಗೂ ಟ್ರೆಂಟ್ ಬೌಲ್ಟ್(39 ಕ್ಕೆ 4)  ಅವರ ಮಾರಕ ಬೌಲಿಂಗ್ ದಾಳಿಯಿಂದ  ಭಾರತ ತಂಡವನ್ನು ದ್ವಿತೀಯ ಇನಿಂಗ್ಸ್‌ನಲ್ಲಿ 191 ರನ್‌ಗಳಿಗೆ ಆತಿಥೇಯರು ಆಲೌಟ್‌ ಮಾಡಿದರು.

ಆ ಮೂಲಕ ಕೊಹ್ಲಿ ಪಡೆ ನೀಡಿದ್ದ ಕೇವಲ ಒಂಬತ್ತು ರನ್ ಗುರಿ ಮುಟ್ಟಿದ ನ್ಯೂಜಿಲೆಂಡ್‌ ಟೆಸ್ಟ್ ಕ್ರಿಕೆಟ್‌ ಇತಿಹಾಸದಲ್ಲಿಯೇ 100ನೇ ಪಂದ್ಯ ಗೆದ್ದು ಬೀಗಿತು. 

100 ಟೆಸ್ಟ್‌ ಪಂದ್ಯಗಳು ಗೆದ್ದ ವಿಶ್ವದ ಏಳನೇ ತಂಡ ಎಂಬ ಸಾಧನೆಗೆ ಕೇನ್‌ ವಿಲಿಯಮ್ಸನ್ ಪಡೆ ಭಾಜನವಾಯಿತು.ಆರಂಭಿಕರಾದ ಟಾಮ್ ಬ್ಲಂಡೆಲ್ ಮತ್ತು ಟಾಮ್ ಲಥಾಮ್ ಜೋಡಿಯು  1.4 ಓವರ್‌ಗಳಲ್ಲಿಯೇ ತಂಡವನ್ನು ಗೆಲುವಿನ ದಡ ಸೇರಿಸಿತು

SCROLL FOR NEXT