ಕ್ರಿಕೆಟ್

ಒಬ್ಬ ಅಭಿಮಾನಿಯಾಗಿ, ಟಿ20 ವಿಶ್ವಕಪ್ ನಲ್ಲಿ ಧೋನಿ ಆಟ ನೋಡಲು ಇಷ್ಟಪಡುತ್ತೇನೆ: ಕಪಿಲ್ ದೇವ್

Lingaraj Badiger

ನವದೆಹಲಿ: ನಾನು ಒಬ್ಬ ಅಭಿಮಾನಿಯಾಗಿ ಎಂ ಎಸ್ ಧೋನಿ ಅವರು ಟಿ20 ವಿಶ್ವಕಪ್ ನಲ್ಲಿ ಆಡುವುದನ್ನು ನೋಡಲು ಇಷ್ಟಪಡುತ್ತೇನೆ ಎಂದು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಅವರು ಶುಕ್ರವಾರ ಹೇಳಿದ್ದಾರೆ.

ಒಬ್ಬ ಅಭಿಮಾನಿಯಾಗಿ ಧೋನಿ ಟಿ20 ವಿಶ್ವಕಪ್ ನಲ್ಲಿ ಆಡುವುದನ್ನು ಇಷ್ಟಪಡುತ್ತೇನೆ. ಆದರೆ ಒಬ್ಬ ಕ್ರಿಕೆಟಿಗನಾಗಿ ಹೇಳುವುದಾದರೆ ಅದು ಮ್ಯಾನೇಜ್ ಮೆಂಟ್ ಮೇಲೆ ಅವಲಂಬಿಸಿದೆ ಎಂದು 1983ರಲ್ಲಿ ಭಾರತಕ್ಕೆ ಚೊಚ್ಚಲ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದುಕೊಟ್ಟ ಮಾಜಿ ನಾಯಕ ಕಪಿಲ್‌ ದೇವ್ ಅವರು ಹೇಳಿದ್ದಾರೆ.

ಒಂದು ವೇಳೆ ಅವರು ಕಳೆದ ಒಂದು ವರ್ಷದಿಂದ ಆಡಿಲ್ಲ ಎಂದರೆ ಅವರಿಂದ ಏನು ನಿರೀಕ್ಷೆ ಮಾಡಲು ಸಾಧ್ಯ? ಅವರು ಹೆಚ್ಚು ಹೆಚ್ಚು ಪಂದ್ಯಗಳನ್ನು ಆಡಬೇಕು ಎಂದು ಕಪಿಲ್ ದೇವ್ ಹೇಳಿದ್ದಾರೆ.

ತಂಡದಲ್ಲಿ ಉಳಿಯಬೇಕಾದರೆ ಅವರು ಪಂದ್ಯಗಳನ್ನು ಆಡಬೇಕು. ಇಲ್ಲದಿದ್ದರೆ ನೀವು ಇತರ ಆಟಗಾರರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಕಪಿಲ್ ತಿಳಿಸಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ನಡೆದ ವಿಶ್ವಕಪ್ ಸೆಮಿ-ಫೈನಲ್ ಟೀಂ ಇಂಡಿಯಾ ಸೋತ ನಂತರ ಧೋನಿ ಅವರು ಇದುವರೆಗೂ ಯಾವುದೇ ಪಂದ್ಯಗಳನ್ನು ಆಡಿಲ್ಲ. ಸುದೀರ್ಘವಾದ ವಿಶ್ರಾಂತಿಯಲ್ಲಿದ್ದಾರೆ. 

38ರ ಹರೆಯದ ಧೋನಿ ಸೆಪ್ಟೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸುವರೇ ಎಂಬುದು ತಿಳಿದು ಬಂದಿಲ್ಲ. ಆದರೆ ಐಪಿಎಲ್‌ನಲ್ಲಿ ಲಯ ಮರಳಿ ಪಡೆಯುವರೇ ಎಂಬುದನ್ನು ಕಾದು ನೋಡಬೇಕಿದೆ.

SCROLL FOR NEXT