ಕ್ರಿಕೆಟ್

ವೀಡಿಯೋ: ನಟಿ ನತಾಶ ಜತೆ  ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಎಂಗೇಜ್ ಮೆಂಟ್

Raghavendra Adiga

ಟೀಂ ಇಂಡಿಯಾದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ದಾಂಪತ್ಯ ಜೀವನಕ್ಕೆ ಕಾಲಿಡಲು ಸಿದ್ದವಾಗಿದ್ದಾರೆ. ತಮ್ಮ ಪ್ರೇಯಸಿ ಸರ್ಬಿಯಾದ ನಟಿ ನತಾಶ ಸ್ಟ್ಯಾನ್ಕೊವಿಚ್ ಅವರೊಂದಿಗೆ ತಾವು ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದಾಗಿ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಮೂಲಕ ಘೋಷಿಸಿಕೊಂಡಿದ್ದಾರೆ.

"ಮೆ ತೇರಾ ತೂ ಮೇರಿ ಜಾನೇ ಸಾರ ಹಿಂದೂಸ್ಥಾನ್ (ನಾನು ನಿನ್ನವನು ನೀನು ನನ್ನವಳು ಎನ್ನುವುದು ಇಡೀ ರಾಷ್ಟ್ರಕ್ಕೆ ಗೊತ್ತಿದೆ) 01.01.2020 #engaged," ಎಂದು ಪಾಂಡ್ಯ ತಮ್ಮ ಪೋಸ್ಟ್ ನಲಿ ಬರೆದುಕೊಂಡಿದ್ದು ಜತೆಗೆ ಜೋಡಿಯು ತಮ್ಮ ನಿಶ್ಚಿತಾರ್ಥವನ್ನು ಸಂಭ್ರಮದಿಂದ ಆಚರಿಸುತ್ತಿರುವ ಚಿತ್ರಗಳೂ ಇದೆ.

ಸಧ್ಯ ಹಾರ್ದಿಕ್ ಬೆನ್ನು ನೋವಿನಿಂದ ಚೇತರಿಸಿಕೊಳ್ಳುತ್ತಿದ್ದು, ಬಾಂಗ್ಲಾದೇಶ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಟ್ವೆಂಟಿ -20 ಇಂಟರ್ನ್ಯಾಷನಲ್ ಹಾಗೂ ಅಂತರಾಷ್ಟ್ರೀಯ ಏಕದಿನ ಸರಣಿಗಳಿಂದ ಹೊರಗುಳಿದಿದ್ದಾರೆ

ನ್ಯೂಜಿಲ್ಯಾಂಡ್ ಪ್ರವಾಸಕ್ಕಾಗಿ ಭಾರತ ಎ ತಂಡದಲ್ಲಿ ಹಾರ್ದಿಕ್ ಸ್ಥಾನ ಪಡೆದಿದ್ದು, ಭಾರತ ತಂಡಕ್ಕೆ ಪುನರಾಗಮನಕ್ಕೆ ಇದು ದಾರಿಯಾಗಲಿದೆ.

SCROLL FOR NEXT