ಕ್ರಿಕೆಟ್

ಕೊಹ್ಲಿ ನೇತೃತ್ವದ ಭಾರತ ತಂಡ ಟಿ-20 ವಿಶ್ವಕಪ್ ಗೆಲ್ಲಲಿದೆ: ಬ್ರಿಯಾನ್ ಲಾರಾ

Srinivasamurthy VN

ನವದೆಹಲಿ: ವಿರಾಟ್ ಕೊಹ್ಲಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಮುಂಬರುವ 2020ರ ಟಿ20 ವಿಶ್ವಕಪ್ ಗೆಲ್ಲಲಿದೆ ಎಂದು ವೆಸ್ಟ್ ಇಂಡೀಸ್ ಲೆಜೆಂಡ್ ಆಟಗಾರ ಬ್ರಿಯಾನ್ ಲಾರಾ ಹೇಳಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡ ಟೆಸ್ಟ್‌ ಹಾಗೂ ಏಕದಿನ ಮಾದರಿಗೆ ಹೋಲಿಸಿದರೆ ಟಿ-20 ಶ್ರೇಯಾಂಕದಲ್ಲಿ ಹಿಂದೆ ಬಿದ್ದಿದೆ. ಆದಾಗ್ಯೂ ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಸಿ ಟಿ-20 ವಿಶ್ವಕಪ್ ಗೆಲ್ಲುವ ಸಾಮಾರ್ಥ್ಯ ಹೊಂದಿದೆ ಎಂದು ವೆಸ್ಟ್‌ ಇಂಡೀಸ್ ದಂತಕತೆ ಹಾಗೂ ಮಾಜಿ ನಾಯಕ ಬ್ರಿಯಾನ್ ಲಾರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಐಸಿಸಿ ಆಯೋಜಿಸುವ ಮಹತ್ವದ ಟೂರ್ನಿಗಳಲ್ಲಿ ಭಾರತ ಸ್ಥಿರವಾಗಿ ಸೆಮಿಫೈನಲ್ ಹಂತವನ್ನು ತಲುಪುತ್ತಿದೆ. ಆದರೆ, ಅಲ್ಲಿಂದ ಮುಂದಕ್ಕೆೆ ಸಾಗಿ ಟ್ರೋಫಿ ಗೆಲ್ಲುವಲ್ಲಿ ಎಡವುತ್ತಿದೆ. ಭಾರತ ಕೊನೆಯದಾಗಿ 2013ರಲ್ಲಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿತ್ತು. ಇದುವೇ ಐಸಿಸಿ ಟೂರ್ನಿಯಲ್ಲಿ ಕೊನೆಯ ಗೆಲುವುವಾಗಿದೆ.

ಭಾರತ ಆಡುವ ಪ್ರತಿಯೊಂದು ಟೂರ್ನಿಯಲ್ಲೂ ಗೆಲ್ಲುವ ಸಾಮರ್ಥ್ಯವನ್ನು ಹೊಂದಿದೆ. ಎಲ್ಲ ತಂಡಗಳು ಒಂದಲ್ಲ ಒಂದು ಹಂತದಲ್ಲಿ ಭಾರತವನ್ನು ಗುರಿಯಾಗಿಸಿವೆ ಎಂಬುದು ವಿರಾಟ್ ಕೊಹ್ಲಿ ಪಡೆಯ ಸಾಮಾರ್ಥ್ಯ ಏನೆಂಬುದು ಅರಿವಾಗಲಿದೆ. ಯಾವುದೇ ಒಂದು ಹಂತದಲ್ಲಿ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಅಥವಾ ಫೈನಲ್‌ನಲ್ಲಿ ಭಾರತದ ಸವಾಲನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಎದುರಾಳಿಗಳು ಅರಿತುಕೊಂಡಿದ್ದಾರೆ ಎಂದು ಲಾರಾ ವಿವರಿಸಿದರು.

SCROLL FOR NEXT