ಕ್ರಿಕೆಟ್

ಅಂಪೈರ್ ಔಟ್ ನೀಡಿದರೂ ಕ್ರೀಸ್ ತೊರೆಯದ ಶುಭಮನ್ ಗಿಲ್!

Nagaraja AB

ಮೊಹಾಲಿ: ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ದೆಹಲಿ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ವೇಳೆ ಪಂಜಾಬ್ ಆರಂಭಿಕ ಶುಭಮನ್ ಗಿಲ್ ಅಂಪೈರ್‌ ನೀಡಿದ ಔಟ್ ನಿರ್ಧಾರವನ್ನು ತಿರಸ್ಕರಿಸಿ ಮೈದಾನದಿಂದ ಹೊರ ನಡೆಯಲು ನಿರಾಕರಿಸಿದ್ದರಿಂದ ವಿವಾದ ಉಂಟಾಯಿತು

ಆನ್‌ ಫೀಲ್ಡ್ ಅಂಪೈರ್ ನೀಡಿದ್ದ ತೀರ್ಪನ್ನು ಗಿಲ್ ನಿರಾಕರಿಸಿ ಕ್ರೀಸ್‌ ನಲ್ಲಿ ನಿಂತಿದ್ದರು  ಎಂದು ಮೈದಾನದಲ್ಲಿ ನಡೆದ ಘಟನೆಯನ್ನು ಪತ್ರಕರ್ತರೊಬ್ಬರು  ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ದೆಹಲಿ ನಾಯಕ ನಿತೀಶ್ ರಾಣಾ ಹೇಳಿದಂತೆ, "ಚೊಚ್ಚಲ ಪಂದ್ಯದಲ್ಲಿ ಅಂಪೈರ್ ಆಗಿ ಕಣಕ್ಕೆ ಇಳಿದಿದ್ದ ಪಶ್ಚಿಮ್ ಪಠಾಕ್ ಅವರ ಬಳಿ ತೆರಳಿದ ಶುಭಮನ್ ಗಿಲ್ ನಿಂದನೆ ಮಾಡಿದ್ದಾರೆ. ಇದಾದ, ಬಳಿಕ, ಅಂಪೈರ್ ತಮ್ಮ ಔಟ್ ನಿರ್ಧಾರವನ್ನು ವಾಪಾಸ್ ಪಡೆದರು. ಇದರಿಂದಾಗಿ ದೆಹಲಿ ತಂಡವು ಮೈದಾನದಿಂದ ಹೊರ ನಡೆದು ಪಂದ್ಯವನ್ನು ಸ್ವಲ್ಪ ಕಾಲ ನಿಲ್ಲಿಸಲಾಗಿತ್ತು. ನಂತರ ಮ್ಯಾಚ್ ರೆಫರಿ ಪಿ.ರಂಗನಾಥನ್ ಮಧ್ಯಪ್ರವೇಶಿಸಿದ ನಂತರ ಮತ್ತೆ ಪಂದ್ಯ ಆರಂಭವಾಯಿತು.

ಪಂಜಾಬಿನ ಆರಂಭಿಕ ಆಟಗಾರ ಶುಭಮನ್ ಗಿಲ್ 23 ರನ್ ಗಳಿಸಿದಾಗ ಸಿಸಿಮಾರ್ಜೀತ್  ಎಸೆತದಲ್ಲಿ ಅನುಜ್ ರವಾತ್ ಕ್ಯಾಚ್ ಪಡೆದು ಫೆವಿಲಿಯನ್ ಹಾದಿ ತೋರಿಸಿದರು. 

ಎಲೈಟ್ ಗ್ರೂಪ್ ಎ ಮತ್ತು ಬಿ ಸ್ಟ್ಯಾಂಡಿಂಗ್‌ನಲ್ಲಿ ಪಂಜಾಬ್ ಪ್ರಸ್ತುತ 17 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ದೆಹಲಿ ಏಳು ಅಂಕಗಳೊಂದಿಗೆ 11 ನೇ ಸ್ಥಾನದಲ್ಲಿದೆ.ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಮೂರು ಏಕದಿನ ಪಂದ್ಯ ಹಾಗೂ ಎರಡು ಪ್ರವಾಸ ಪಂದ್ಯಗಳಲ್ಲಿ ಗಿಲ್ ಭಾರತ 'ಎ' ತಂಡವನ್ನು ಮುನ್ನಡೆಸಲಿದ್ದಾರೆ. 

SCROLL FOR NEXT