ಕ್ರಿಕೆಟ್

ರಿಷಬ್ ಪಂತ್ ಗೆ ವಿಶೇಷ ಪ್ರತಿಭೆ ಇದೆ: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

Vishwanath S

ನವದೆಹಲಿ: 2011ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ನೇತೃತ್ವ ವಹಿಸಿದ್ದ  ಮಹೇಂದ್ರ ಸಿಂಗ್ ಧೋನಿ ಯಾವ ಸಮಯದಲ್ಲೂ ಬೇಕಾದರೂ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಬಹುದು. ಹಾಗಾಗಿ, ವಿಕೆಟ್ ಕೀಪಿಂಗ್ ಉತ್ತರಾಧಿಕಾರಿಯಾಗುವವರಲ್ಲಿ ರಿಷಭ್ ಪಂತ್ ಮುಂಚೂಣಿ ಆಟಗಾರರಾಗಿದ್ದಾರೆ ಎಂಬುದನ್ನು ಟೀಮ್ ಮ್ಯಾನೇಜ್‌ಮೆಂಟ್ ಪರಿಗಣಿಸಿದೆ ಎಂಬುದು ಎಲ್ಲರಿಗೂ ಗೊತ್ತಿದೆ.

ಇತ್ತೀಚಿನ ದಿನಗಳಲ್ಲಿ ರಿಷಭ್ ಪಂತ್ ಅವರು ಬ್ಯಾಟಿಂಗ್ ನಲ್ಲಿ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಜತೆಗೆ, ವಿಕೆಟ್ ಕೀಪಿಂಗ್ ಕೌಶಲದಲ್ಲೂ ವೈಫಲ್ಯ ಅನುಭವಿಸುತ್ತಿದ್ದಾರೆ. ಇದರಿಂದ ಸಾಕಷ್ಟು ಟೀಕೆಗಳಿಗೆ ಎಡಗೈ ಬ್ಯಾಟ್ಸ್‌‌ಮನ್ ಒಳಗಾಗಿದ್ದಾರೆ. ಈ ಕಾರಣದಿಂದ ಕೇರಳ ಸಂಜು ಸ್ಯಾಮ್ಸನ್ ಅವರನ್ನು ಬ್ಯಾಾಕ್ ಅಪ್ ಆಟಗಾರನಾಗಿ ಕರೆತರಲಾಗಿದೆ. ಆದಾಗ್ಯೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಅವರು ರಿಷಭ್ ಪಂತ್ ಅವರನ್ನು ವಿಶೇಷ ಪ್ರತಿಭೆ ಎಂದು ಉಲ್ಲೇಖಿಸುವ ಮೂಲಕ ಯುವ ಆಟಗಾರನ ಪರ ಬ್ಯಾಟ್ ಬೀಸಿದ್ದಾರೆ.

ಆಯ್ಕೆ ವಿಚಾರಗಳ ಬಗ್ಗೆ ಆಯ್ಕೆದಾರರ ಬಗ್ಗೆ ಚರ್ಚೆ ನಡೆಸಲಾಗಿದೆ. ಆದರೆ, ವೆಸ್ಟ್‌ ಇಂಡೀಸ್ ವಿರುದ್ಧದ ಕೊನೆಯ ಎರಡು ಏಕದಿನ ಪಂದ್ಯಗಳಲ್ಲಿ ರಿಷಭ್ ಪಂತ್ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಇದನ್ನು ಗಮನಿಸಿದಾಗ ಅವರಲ್ಲಿ ವಿಶೇಷ ಪ್ರತಿಭೆ ಇರುವುದು ಅನಾವರಣವಾಗಿದೆ ಎಂದು ದಾದಾ ಹೇಳಿದರು.

SCROLL FOR NEXT