ಕ್ರಿಕೆಟ್

ಬೌಂಡರಿಯಲ್ಲಿ ಹಾರಿ ಕ್ಯಾಚ್ ಹಿಡಿದ ಫೀಲ್ಡರ್ಸ್, ಔಟಾ-ನಾಟೌಟಾ ಈ ವಿಡಿಯೋ ನೋಡಿ!

Vishwanath S

ಒಂದು ಅದ್ಭುತ ಕ್ಯಾಚ್ ಪಂದ್ಯದ ಗತಿಯನ್ನೇ ಬದಲಿಸುತ್ತದೆ. ಅದೇ ರೀತಿ ಬೌಂಡರಿಯಲ್ಲಿ ಇಬ್ಬರು ಆಟಗಾರರು ಕ್ಯಾಚ್ ವೊಂದನ್ನು ಹಿಡಿದಿದ್ದು ಇದು ಔಟಾ ಅಥವಾ ನಾಟೌಟಾ ಎಂಬ ಗೊಂದಲ ಪ್ರೇಕ್ಷಕರಲ್ಲಿ ಕಂಡು ಬಂದಿತ್ತು.

ಬಿಗ್ ಬ್ಯಾಷ್ ಲೀಗ್ ನ ಹೋಬಾರ್ಟ್ ಹುರ್ರಿಕೇನ್ಸ್ ಹಾಗೂ ಬ್ರಿಸ್ಬೇನ್ ಹೀಟ್ ನಡುವಣ ಪಂದ್ಯದಲ್ಲಿ ಈ ಕ್ಯಾಚ್ ಆಫ್ ದಿ ಇಯರ್ ಎಂಬ ಖ್ಯಾತಿಗೆ ಭಾಜನವಾಗಿದೆ. ಆದರೆ ಮೂರನೇ ಅಂಪೈರ್ ತೀರ್ಪು ನೀಡುವ ಮುನ್ನ ಎಲ್ಲರಲ್ಲೂ ಏನಾಗಬಹುದು ಎಂಬ ನಿರೀಕ್ಷೆ ಹೆಚ್ಚಿಸಿತ್ತು. 

ಬೆನ್ ಕಟ್ಟಿಂಗ್ ಎಸೆತದಲ್ಲಿ ಮ್ಯಾಥ್ಯೂ ಹೇಡ್ ಬಿರುಸಾಗಿ ಹೊಡೆದಿದ್ದರು. ಇನ್ನು ಚೆಂಡು ಸಿಕ್ಸರ್ ಹೋಗುತ್ತದೆ ಎಂಬ ಭಾವಿಸಿದ್ದಾಗ ಓಡಿ ಬಂದ ರೇನ್ ಶಾ ಅದ್ಭುತವಾಗಿ ಕ್ಯಾಚ್ ಹಿಡಿದರು. ಆದರೆ ನಿಯಂತ್ರಣ ತಪ್ಪಿ ಶಾ ಬೌಂಡರಿಯೊಳಗೆ ಹೋದರು. ಆದರೆ ಅಷ್ಟರಲ್ಲಿ ಚೆಂಡನ್ನು ಮೇಲಕ್ಕೆ ಎಸೆದಿದ್ದರು. ಬಳಿಕ ಮತ್ತೆ ಚೆಂಡನ್ನು ಗಾಳಿಯಲ್ಲಿ ಹಾರಿ ಹಿಡಿದು ಮತ್ತೊಬ್ಬ ಫೀಲ್ಡರ್ ಗೆ ಎಸೆತದರು. ಆತ ಸುಲಭವಾಗಿ ಕ್ಯಾಚ್ ಹಿಡಿದಿದ್ದರು. 

ಮೈದಾನದ ಅಂಪೈರ್ ಯಾವುದೇ ತೀರ್ಪು ನೀಡದೆ ಮೂರನೇ ಅಂಪೈರ್ ಗೆ ಮನವಿ ಮಾಡಿದರು. ನಂತರ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಐಸಿಸಿ ನಿಮಯಗಳ ಪ್ರಕಾರ ಮ್ಯಾಥ್ಯೂ ವೇಡ್ ಔಟಾಗಿದ್ದರು.

SCROLL FOR NEXT