ಕ್ರಿಕೆಟ್

ಟೀಂ ಇಂಡಿಯಾ-ಆಸ್ಟ್ರೇಲಿಯಾ ಪಂದ್ಯ: ವಾಂಖೆಡೆ ಕ್ರೀಡಾಂಗಣದಲ್ಲಿ ಸಿಎಎ-ಎನ್‌ಆರ್‌ಸಿ ಪ್ರತಿಭಟನೆ ಬಿಸಿ, ಫೋಟೋ ವೈರಲ್!

Vishwanath S

ಮುಂಬೈ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದು, ಮಂಗಳವಾರ ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಮಂಗಳವಾರ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲನೇ ಏಕದಿನ ಪಂದ್ಯಕ್ಕೂ ಪ್ರತಿಭಟನೆಯ ಬಿಸಿ ತಟ್ಟಿತ್ತು.

ಗ್ಯಾಲರಿಯಲ್ಲಿದ್ದ ಒಂದು ಗುಂಪಿನ ಅಭಿಮಾನಿಗಳು ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ಘೋಷಣೆ ಕೂಗಿದರು. ವಿಶೇಷ ಜೆರ್ಸಿಯೊಂದಿಗೆ ಬಂದ ಅಭಿಮಾನಿಗಳು ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ಸಿಎಎ ವಿರುದ್ಧ ಘೋಷಣೆಗಳನ್ನು ಕೂಗಿ ಕೇಂದ್ರ ಸರಕಾರಕ್ಕೆೆ ಬಿಸಿ ಮುಟ್ಟಿಸಿದರು.

‘ನೊ ಸಿಎಎ’ ಹಾಗೂ ‘ನೊ ಎನ್‌ಆರ್‌ಸಿ’ ಆಂಗ್ಲ ಭಾಷೆಯಲ್ಲಿ ಮುದ್ರಿತ ಶ್ವೇತ ವರ್ಣದ ಟೀ ಶರ್ಟ್ ಧರಿಸಿದ್ಧ ಅಭಿಮಾನಿಗಳು ಭಾರತದ ಇನಿಂಗ್‌ಸ್‌ ಆದ ಕೂಡಲೇ ಮೈದಾನವನ್ನುತೊರೆದರು. ಸಿಎಎ ಹಾಗೂ ಎನ್‌ಆರ್‌ಸಿ ವಿರುದ್ಧ ದೇಶದ್ಯಾಾಂತ ಪ್ರತಿಭಟನೆಯ ಕಾವು ಜೋರಾಗುತ್ತಿದೆ. ಮುಂಬೈನಲ್ಲೂ ವಿವಿಧ ಸಂಘ ಸಂಸ್ಥೆಗಳಿಂದ ನಿರಂತರ ಪ್ರತಿಭಟನೆ ನಡೆಯುತ್ತಿದೆ. ಬಲ್ಲ ಮೂಲಗಳ ಪ್ರಕಾರ 26ರಷ್ಟು ಮಂದಿ ಗುಂಪಿನಲ್ಲಿ ಕಾಣಿಸಿದ್ದರು.

SCROLL FOR NEXT