ಕ್ರಿಕೆಟ್

1 ಶತಕದಿಂದ 3 ದಾಖಲೆಗಳು ಧೂಳಿಪಟ, ಪಾಂಟಿಂಗ್, ಸಚಿನ್ ದಾಖಲೆ ಮೇಲೆ ಕೊಹ್ಲಿ ಕಣ್ಣು!

Vishwanath S

ರಾಜ್‌ಕೋಟ್: ಜಾಗತಿಕ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಪುಡಿ-ಪುಡಿ ಮಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ನಾಳೆ ನಡೆಯುವ ಎರಡನೇ ಏಕದಿನ ಪಂದ್ಯದಲ್ಲಿ ಮತ್ತೊಂದು ದಾಖಲೆ ನಿರ್ಮಿಸುವ ಹಾದಿಯಲ್ಲಿದ್ದಾರೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ 10 ವಿಕೆಟ್‌ಗಳ ಹೀನಾಯ ಸೋಲು ಅನುಭವಿಸಿದ್ದ ಭಾರತ ತಂಡ ತವರು ಅಭಿಮಾನಿಗಳ ಎದುರು ಮುಖಭಂಗ ಅನುಭವಿಸಿತ್ತು. ಅಲ್ಲದೇ ಈ ಪಂದ್ಯದಲ್ಲಿ ಬ್ಯಾಟಿಂಗ್ ಕ್ರಮಾಂಕದಲ್ಲಿ ಹಲವು ಬದಲಾವಣೆ ಮಾಡಲಾಗಿತ್ತು. ಇದು ಪಂದ್ಯದ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿತ್ತು.

ಆಸ್ಟ್ರೇಲಿಯಾ ವಿರುದ್ಧ ರಾಜ್ ಕೋಟ್ ನಲ್ಲಿ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಯ 2ನೇ ಹಣಾಹಣಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಎಂದಿನ 3ನೇ ಬ್ಯಾಟಿಂಗ್ ಕ್ರಮಾಂಕಕ್ಕೆ ಮರಳುವುದು ಖಾತ್ರಿಯಾಗಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಆಡುವ ರಣತಂತ್ರ ಕಿಂಗ್ ಕೊಹ್ಲಿ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿತ್ತು. ಆದರೆ, ನಾಳೆ ಇಂಥದ್ದೇ ತಪ್ಪು ನಡೆಯದಂತೆ ಟೀಮ್ ಇಂಡಿಯಾ ಎಚ್ಚರ ವಹಿಸಲಿದೆ.

ರಿಕಿ ಪಾಂಟಿಂಗ್ 41 ಶತಕ ಸಿಡಿಸಿದ್ದು ವಿರಾಟ್ ಕೊಹ್ಲಿ ಸಹ 41 ಶತಕ ಸಿಡಿಸಿ ಸಮಬಲ ಸಾಧಿಸಿದ್ದಾರೆ. ಇನ್ನು ರಾಜ್ ಕೋಟ್ ನಲ್ಲಿ ಕೊಹ್ಲಿ ಒಂದು ಶತಕ ಸಿಡಿಸಿದರೆ ಪಾಂಟಿಂಗ್ ದಾಖಲೆ ಧೂಳಿಪಟವಾಗಲಿದೆ. ಇದರ ಜೊತೆಗೆ ಅತೀ ವೇಗವಾಗಿ 42 ಶತಕ ಸಿಡಿಸಿದ ಖ್ಯಾತಿಗೂ ಕೊಹ್ಲಿ ಭಾಜನರಾಗಲಿದ್ದಾರೆ. 

ಇದೇ ವೇಳೆ ಆಸ್ಟ್ರೇಲಿಯಾ ವಿರುದ್ಧ ವಿರಾಟ್ ಕೊಹ್ಲಿ ಶತಕ ಸಿಡಿಸಿದರೆ ಸಚಿನ್ ದಾಖಲೆಯನ್ನು ಸಮಗೈಯಲಿದ್ದಾರೆ. ಸಚಿನ್ ಆಸ್ಟ್ರೇಲಿಯಾ ವಿರುದ್ಧ 9 ಶತಕ ಸಿಡಿಸಿ ಮುಂದಿದ್ದರೆ. ಕೊಹ್ಲಿ 8 ಶತಕ ಸಿಡಿಸಿ ಎರಡನೇ ಸ್ಥಾನದಲ್ಲಿದ್ದಾರೆ.

SCROLL FOR NEXT