ಕ್ರಿಕೆಟ್

ಕ್ಯಾಪ್ಟನ್ ಕೇನ್ ವಿಲಿಯಮ್ಸ್, ಬೆನೆಟ್ ಕಂ ಬ್ಯಾಕ್, ಭಾರತ ವಿರುದ್ಧ ಟಿ20 ಸರಣಿಗೆ ನ್ಯೂಜಿಲೆಂಡ್ ತಂಡ ಪ್ರಕಟ

Raghavendra Adiga

ವೆಲ್ಲಿಂಗ್ಟನ್: ಭಾರತದ ವಿರುದ್ಧ ಮುಂಬರುವ ಐದು ಪಂದ್ಯಗಳ ಟಿ-20 ಸರಣಿಗೆ 14 ಆಟಗಾರರ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ನಾಯಕ ಕೇನ್ ವಿಲಿಯಮ್ಸ್ ತಂಡಕ್ಕೆ ಮರಳಿದ್ದಾರೆ. ಜತೆಗೆ, ದೀರ್ಘ ಅವಧಿಯ ಬಳಿಕ ಬಲಗೈ ವೇಗಿ ಹಮೀಶ್ ಬೆನೆಟ್ ತಂಡದಲ್ಲಿ  ಕಾಣಿಸಿಕೊಂಡಿದ್ದಾರೆ.
 
ನಿಯಮಿತ ವೇಗಿಗಳಾದ ಟ್ರೆಂಟ್‌ ಬೌಲ್ಟ್ ಹಾಗೂ ಲೂಕಿ ಫರ್ಗೂಸನ್ ಅವರು ಗಾಯದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ, ಹಮೀಶ್ ಬೆನೆಟ್ ಗೆ ಅವಕಾಶ ಕಲ್ಪಿಸಲಾಗಿದೆ. 2017ರ ಬಳಿಕ ಇದೇ ಮೊದಲ ಬಾರಿ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಗಾಯದಿಂದಾಗಿ ಕಳೆದ ವರ್ಷ ನವೆಂಬರ್ ನಲ್ಲಿ ಇಂಗ್ಲೆಂಡ್ ಸರಣಿಗೆ ಅಲಭ್ಯರಾಗಿದ್ದ ನಾಯಕ ಕೇನ್ ವಿಲಿಯಮ್ಸನ್ ಅವರು ಇದೀಗ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ. ಸರಣಿಯ ಕೊನೆಯ ಎರಡು ಪಂದ್ಯಗಳಿಗೆ ಕಾಲಿನ್ ಡಿ ಗ್ರಾಂಡ್ಹೋಮ್ ಬದಲು ಟಾಮ್ ಬ್ರೂಸ್ ಅವರಿಗೆ ಅವಕಾಶ ನೀಡಲಾಗಿದೆ.

ದೇಶೀಯ ಕ್ರಿಕೆಟ್ ನಲ್ಲಿ ಆಡುವಾಗ ಗಾಯಕ್ಕೆ ತುತ್ತಾಗಿದ್ದ ಜಿಮ್ಮಿ ನಿಶ್ಯಾಮ್ ಅವರನ್ನು ನ್ಯೂಜಿಲೆಂಡ್ ಎ ತಂಡದ ಮೂರು ಏಕ ಪಂದ್ಯಗಳಿಗೆ ಗುರುತಿಸಲಾಗಿದೆ. ಆದರೆ, ಭಾರತ ವಿರುದ್ಧ ಟಿ-20 ಸರಣಿಗೆ ಪರಿಗಣಿಸಿಲ್ಲ.

ಭಾರತ ಕೂಡ ಈ ಸರಣಿಗೆ 16 ಸದಸ್ಯರ ತಂಡವನ್ನು ಈ ಹಿಂದೆ ಪ್ರಕಟಿಸಿದೆ. ಜನವರಿ 24 ರಂದು ಈಡನ್ ಪಾರ್ಕ್ ನಲ್ಲಿ ಮೊದಲನೇ ಪಂದ್ಯ ನಡೆಯಲಿದೆ.

ನ್ಯೂಜಿಲೆಂಡ್ ತಂಡ: ಕೇನ್ ವಿಲಿಯಮ್ಸನ್ (ನಾಯಕ), ಹಮೀಶ್ ಬೆನೆಟ್, ಟಾಮ್ ಬ್ರೂಸ್ (ಪಂದ್ಯಗಳು 4-5), ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (ಪಂದ್ಯಗಳು -3-3), ಮಾರ್ಟಿನ್ ಗುಪ್ಟಿಲ್, ಸ್ಕಾಟ್ ಕುಗ್ಗೆಲೀಜ್ನ್, ಡ್ಯಾರಿಲ್ ಮಿಚೆಲ್, ಕಾಲಿನ್ ಮನ್ರೊ, ರಾಸ್ ಟೇಲರ್, ಬ್ಲೇರ್ ಟಿಕ್ನರ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೀಫರ್ಟ್ (ವಿ.ಕೀ), ಇಶ್ ಸೋಧಿ, ಟಿಮ್ ಸೌಥ್

SCROLL FOR NEXT