ಕ್ರಿಕೆಟ್

ವಿಶ್ವ ದಾಖಲೆ: 175 ಕಿ.ಮೀ ವೇಗವಾಗಿ ಬೌಲಿಂಗ್ ಮಾಡಿದ 17ರ ಯುವ ವೇಗಿ, ವಿಡಿಯೋ ವೈರಲ್!

Vishwanath S

ನವದೆಹಲಿ: ದಕ್ಷಿಣ ಆಫ್ರಿಕಾ ಆತಿಥ್ಯದಲ್ಲಿ ನಡೆಯುತ್ತಿರುವ 19 ವಯೋಮಿತಿ ಕ್ರಿಕೆಟ್ ಟೂರ್ನಿಯಲ್ಲಿ ಪ್ರಿಯಮ್ ಗರ್ಗ್ ನಾಯಕತ್ವದ ಭಾರತ ಕಿರಿಯರ ತಂಡ ಶ್ರೀಲಂಕಾ ವಿರುದ್ಧ 90 ರನ್ ಗಳಿಂದ ಭರ್ಜರಿ ಜಯ ಸಾಧಿಸಿತ್ತು. ಆದರೆ, ಈ ಪಂದ್ಯದಲ್ಲಿ 17ರ ಪ್ರಾಯದ ವೇಗಿ ತಮ್ಮ ವೇಗದ ಬೌಲಿಂಗ್ ನಿಂದ ಅಂಗಳದಲ್ಲಿ ನೆರೆದಿದ್ದವರ ಗಮನ ಸೆಳೆದರು.

ಶ್ರೀಲಂಕಾ ಹಿರಿಯರ ತಂಡದ ಲಸಿತ್ ಮಲಿಂಗಾ ಅವರ ಶೈಲಿಯನ್ನೇ ಹೋಲುವ ಲಂಕಾ ಕಿರಿಯರ ತಂಡದ ಮತೀಶ ಪಥಿರಣ ಅವರು ಭಾನುವಾರದ ಪಂದ್ಯದಲ್ಲಿ ಒಂದೂ ವಿಕೆಟ್ ಪಡೆದಿರಲಿಲ್ಲ. ಎಂಟು ಓವರ್ ಬೌಲಿಂಗ್ ಮಾಡಿದ್ದ ಅವರು 49 ರನ್ ನೀಡಿದ್ದರು. ಆದರೆ, ಪಂದ್ಯದಲ್ಲಿ ಅವರ ಒಂದೇ-ಒಂದು ಎಸೆತ ಎಲ್ಲರ ಆಶ್ವರ್ಯಕ್ಕೆ ಕಾರಣವಾಗಿತ್ತು.

ಭಾರತದ ಆರಂಭಿಕ ಬ್ಯಾಟ್ಸ್‌‌ಮನ್ ಯಶಸ್ವಿ ಜೈಸ್ವಾಲ್ ಅವರಿಗೆ ಎಸೆದ ನಾಲ್ಕನೇ ಓವರ್ ಕೊನೆಯ ಎಸೆತ ಬರೋಬ್ಬರಿ ಗಂಟೆಗೆ 175 ವೇಗವಾಗಿ ವಿಕೆಟ್ ಕೀಪರ್ ಸೇರಿತ್ತು. ಈ ಎಸೆತ ವೈಡ್ ಆಗಿತ್ತು. ಈ ಎಸೆತ ಒಂದು ಗಂಟೆಗೆ 108 ಮೈಲು ದಾಖಲಾಗಿತ್ತು.

ಅಂಗಳದಲ್ಲಿ ನೆರೆದಿದ್ದ ತಾಂತ್ರಿಕ ಸಿಬ್ಬಂದಿ ತಂತ್ರದಲ್ಲಿನ ದೋಷವಾಗಿದೆಯೇ ಎಂದು ಪರಿಶೀಲಿಸಲಾಯಿತು. ಬಳಿಕ ಸರಿಯಾದ ಎಸೆತ ಎಂದು ಅರಿತುಕೊಳ್ಳಲಾಯಿತು. ಕ್ರಿಕೆಟ್ ಇತಿಹಾಸದಲ್ಲೇ ಅತಿ ವೇಗದ ಎಸೆತ ಇದಾಯಿತು. 2003ರ ಐಸಿಸಿ ಏಕದಿನ ವಿಶ್ವಕಪ್ ವೇಳೆ ಪಾಕಿಸ್ತಾನದ ಮಾಜಿ ವೇಗಿ ಶೊಯೆಬ್ ಅಖ್ತರ್ ಇಂಗ್ಲೆಂಡ್ ವಿರುದ್ಧ ನ್ಯೂಲ್ಯಾಂಡ್ಸ್  ವಿರುದ್ಧ 161.3 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು. ಆಸ್ಟ್ರೇಲಿಯಾದ ಮಾಜಿ ವೇಗಿಗಳಾದ  ಶಾನ್ ಟೈಟ್ ಹಾಗೂ ಬ್ರೆಟ್ ಲೀ ಕೂಡ 160 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು.

SCROLL FOR NEXT