ಕ್ರಿಕೆಟ್

ಹಿಟ್ ಮ್ಯಾನ್ 'ರೋಹಿತ್ ಶರ್ಮಾ'ರ ಸೂಪರ್ ಸೆಂಚುರಿ- ವಿಡಿಯೋ

Nagaraja AB

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ದದ ಏಕದಿನ ಕ್ರಿಕೆಟ್ ಸರಣಿಯ ಅಂತಿಮ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಶತಕ ಸಿಡಿಸಿದ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ನಲ್ಲಿ 9 ಸಾವಿರ ರನ್ ಪೂರೈಸಿದರು.

ರೋಹಿತ್ ರೋಹಿತ್ ಶರ್ಮಾ 128 ಎಸೆತಗಳಲ್ಲಿ  8 ಬೌಂಡರಿ , 6 ಸಿಕ್ಸರ್ ಮೂಲಕ 119ರನ್ ಬಾರಿಸಿದರು.  ಏಳು ವರ್ಷಗಳ ಹಿಂದೆ ಇದೇ ಅಂಗಳದಲ್ಲಿ ತಾವು ಬಾರಿಸಿದ್ದ ದ್ವಿಶತಕವನ್ನು ನೆನಪಿಗೆ ತರುವಂತೆ ಆಡಿದ ರೋಹಿತ್ ಶರ್ಮಾ, ಸಿಕ್ಸರ್ ಗಳ ಸಿಕ್ಸರ್ ಸಾಧನೆ ಮಾಡಿದರು.

56 ಎಸೆತಗಳಲ್ಲಿ ಅರ್ಧಶತಕ ಹೊಡೆದ ಅವರು, ಒಟ್ಟು 110 ಎಸೆತಗಳಲ್ಲಿ ಏಕದಿನ ಕ್ರಿಕೆಟ್ ನಲ್ಲಿ ತಮ್ಮ 29 ನೇ ಶತಕವನ್ನು ದಾಖಲಿಸಿದರು. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ ಕೈ ವಶ ಮಾಡಿಕೊಳ್ಳುವಲ್ಲಿ ರೋಹಿತ್ ಶರ್ಮಾ ಬಹು ಮುಖ್ಯ ಕೊಡುಗೆ ನೀಡಿದರು.

SCROLL FOR NEXT