ಕ್ರಿಕೆಟ್

ಮೊದಲ ಟಿ20: ಕಿವೀಸ್ ಕಿವಿ ಹಿಂಡಿದ ಭಾರತ, ಕೊಹ್ಲಿ ಪಡೆಗೆ 6 ವಿಕೆಟ್ ಗಳ ಭರ್ಜರಿ ಜಯ

Srinivasamurthy VN

ಆಕ್ಲೆಂಡ್: ಅತಿಥೇಯ ನ್ಯೂಜಿಲೆಂಡ್ ತಂಡದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 6 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಆಕ್ಲೆಂಡ್ ನಲ್ಲಿ ಈಡನ್ ಪಾರ್ಕ್ ನಲ್ಲಿ ಇಂದು ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ್ದ 203 ರನ್ ಗಳ ಬೃಹತ್ ಗುರಿ ಬೆನ್ನು ಹತ್ತಿದ್ದ ಭಾರತ ತಂಡ ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ 6 ವಿಕೆಟ್ ಕಳೆದುಕೊಂಡು 204ರನ್ ಗಳಿಸಿ ಜಯ ಗಳಿಸಿತು. ಆ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ. 

ಇನ್ನಿಂಗ್ಸ್ ಆರಂಭದಲ್ಲೇ ಭಾರತಕ್ಕೆ ಆರಂಭಿಕ ಆಘಾತ ನೀಡಿದ್ದ ಕಿವೀಸ್ ಪಡೆ, 7 ರನ್ ಗಳಿಸಿದ್ದ ಭಾರತದ ಸ್ಫೋಟಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾರನ್ನು ಔಟ್ ಮಾಡಿತು. ಆದರೆ ನಾಯಕ ವಿರಾಟ್ ಕೊಹ್ಲಿ (45 ರನ್) ಮತ್ತು ಕೆಎಲ್ ರಾಹುಲ್ (56 ರನ್) ಭಾರತ ತಂಡವನ್ನು ಆರಂಭಿಕ ಆಘಾತದಿಂದ ಮೇಲೆತ್ತಿದರು. ಈ ಹಂತದಲ್ಲಿ ಅರ್ಧಶತಕ ಗಳಿಸಿದ್ದ ರಾಹುಲ್ ಮತ್ತು 45 ರನ್ ಗಳಿಸಿ ಅರ್ಧಶತಕದತ್ತ ದಾಪುಗಾಲಿರಿಸಿದ್ದ ಕೊಹ್ಲಿ ಔಟ್ ಆದರು. ಆದರೆ ಬಳಿಕ ಕ್ರೀಸ್ ಗೆ ಆಗಮಿಸಿದ ಶ್ರೇಯಸ್ ಅಯ್ಯರ್(ಅಜೇಯ 58) ಮತ್ತು ಮನೀಷ್ ಪಾಂಡೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಅಂತಿಮ ಹಂತದಲ್ಲಿ ಭಾರತ ತಂಡಕ್ಕೆ ನೆರವಾದ ಶ್ರೇಯಸ್ ಅಯ್ಯರ್ ಅವರು ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಪಾತ್ರರಾದರು.

SCROLL FOR NEXT