ಕ್ರಿಕೆಟ್

ಮೊದಲ ಟಿ20: ವಿಲಿಯಮ್ಸನ್, ಟೇಲರ್ ಭರ್ಜರಿ ಆಟ, ಭಾರತಕ್ಕೆ ಬೃಹತ್ ಗುರಿ ನೀಡಿದ ಕಿವೀಸ್!

Srinivasamurthy VN

ಆಕ್ಲೆಂಡ್: ನಾಯಕ ಕೇನ್ ವಿಲಿಯಮ್ಸನ್ ಮತ್ತು ಟೇಲರ್ ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ ಅತಿಥೇಯ ನ್ಯೂಜಿಲೆಂಡ್ ತಂಡ ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ಭಾರತಕ್ಕೆ ಗೆಲ್ಲಲು 204 ರನ್ ಗಳ ಬೃಹತ್ ಗುರಿ ನೀಡಿದೆ.

ನ್ಯೂಜಿಲೆಂಡ್ ಆಕ್ಲೆಂಡ್ ನಲ್ಲಿರುವ ಈಡನ್ ಪಾರ್ಕ್ ನಲ್ಲಿ ಇಂದು ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ವಿಲಿಯಮ್ಸನ್ ಪಡೆ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಗಳನ್ನು ಪೇರಿಸುವ ಮೂಲಕ ಭಾರತಕ್ಕೆ ಗೆಲ್ಲಲು 204 ರನ್ ಗಳ ಬೃಹತ್ ಗುರಿ ನೀಡಿದೆ.

ನ್ಯೂಜಿಲೆಂಜ್ ಪರ ಬ್ಯಾಟಿಂಗ್ ಆರಂಭಿಸಿದ ಮಾರ್ಟಿನ್ ಗಪ್ಟಿಲ್ (30 ರನ್, 19 ಎಸೆತ) ಮತ್ತು ಕೊಲಿನ್ ಮನ್ರೋ (59 ರನ್, 42 ಎಸೆತ) ಭರ್ಜರಿ ಆರಂಭ ಒದಗಿಸಿದರು. ಬಳಿಕ ಬಂದ ನಾಯಕ ಕೇನ್ ವಿಲಿಯಮ್ಸನ್ (51 ರನ್, 26 ಎಸೆತ) ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ರಾಸ್ ಟೇಲರ್ ಜೊತೆ ಗೂಡಿದ ವಿಲಿಯಮ್ಸನ್ ಕೇವಲ 26 ಎಸೆತಗಳಲ್ಲೇ ಅರ್ಧಶತಕ ಸಿಡಿಸಿ, ಚಹಲ್ ಬೌಲಿಂಗ್ ನಲ್ಲಿ ಔಟಾದರು. ಬಳಿಕ ಕ್ರೀಸ್ ಗೆ ಬಂದ ರಾಸ್ ಟೇಲರ್ ಕಿವೀಸ್  ರನ್ ಮಿತಿಯನ್ನು 200ರ ಗಡಿ ದಾಟಿಸಿದರು. ಕೇವಲ 27 ಎಸೆತಗಳಲ್ಲಿ 54ರನ್ ಸಿಡಿಸಿದ ಟೇಲರ್, ಕಿವೀಸ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.

ಅಂತಿಮವಾಗಿ ನ್ಯೂಜಿಲೆಂಡ್ ಪಡೆ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಗಳನ್ನು ಪೇರಿಸುವ ಮೂಲಕ ಭಾರತಕ್ಕೆ ಗೆಲ್ಲಲು 204 ರನ್ ಗಳ ಬೃಹತ್ ಗುರಿ ನೀಡಿದೆ. ಭಾರತದ ಪರ ಜಸ್ ಪ್ರೀತ್ ಬುಮ್ರಾ, ಶಾರ್ದುಲ್ ಠಾಕೂರ್, ಚಹಲ್, ಶಿವಂ ದುಬೆ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು.

ಲೈವ್ ಸ್ಕೋರ್ LIVE

SCROLL FOR NEXT