ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್ 
ಕ್ರಿಕೆಟ್

ಖಲೀಲ್ ಗೆ ಗಾಯ: ನ್ಯೂಜಿಲೆಂಡ್ ಪ್ರವಾಸದಿಂದ ಹೊರಕ್ಕೆ

ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್ ಅವರ ಎಡ ಮಣಿಕಟ್ಟಿಗೆ ಗಾಯವಾಗಿದ್ದು ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ “ಎ” ತಂಡದಿಂದ ಹೊರಗುಳಿದಿದ್ದಾರೆ.

ನವದೆಹಲಿ: ಎಡಗೈ ವೇಗದ ಬೌಲರ್ ಖಲೀಲ್ ಅಹ್ಮದ್ ಅವರ ಎಡ ಮಣಿಕಟ್ಟಿಗೆ ಗಾಯವಾಗಿದ್ದು ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ “ಎ” ತಂಡದಿಂದ ಹೊರಗುಳಿದಿದ್ದಾರೆ.

ಜನವರಿ 22 ರಂದು ಲಿಂಕನ್‌ನಲ್ಲಿ ನಡೆದ ನ್ಯೂಜಿಲೆಂಡ್ ಎ ವಿರುದ್ಧದ ಮೊದಲ ಅಧಿಕೃತೇತರ ಏಕದಿನ ಪಂದ್ಯದ ವೇಳೆ ಖಲೀಲ್ ಅವರ ಮಣಿಕಟ್ಟಿನ ಗಾಯವಾಗಿದ್ದು ಫ್ಯಾಕ್ಚರ್ ಆಗಿದೆ.

ಖಲೀಲ್ ಅವರ ಎಡ ಮಣಿಕಟ್ಟಿಗೆ ಗಾಯವಾಗಿರುವುದರಿಂದ ಅವರು ಭಾರತ ಎ ತಂಡದಿಂದ ಹೊರಗುಳಿದಿದ್ದಾರೆ. ಅವರಿಗೆ ಪುನರ್ವಸತಿ ಯನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ನಿರ್ವಹಿಸಲಿದೆ ಎಂದು ಬಿಸಿಸಿಐ ತಿಳಿಸಿದೆ. ಆದಾಗ್ಯೂ, ಅವರ ಬದಲಿ ಆಟಗಾರನ ಹೆಸರನ್ನು ಬಿಸಿಸಿಐ ತಿಳಿಸಿಲ್ಲ.

ಖಲೀಲ್ ಭಾರತದ ಪರ 11 ಅಂತಾರಾಷ್ಟ್ರೀಯ ಏಕದಿನ ಪಂದ್ಯ ಹಾಗೂ 14 ಟಿ-20 ಪಂದ್ಯಗಳನ್ನಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ 8 ಓವರ್ ಗಳಲ್ಲಿ 46 ರನ್ ನೀಡಿ 2 ವಿಕೆಟ್ ಪಡೆದುಕೊಂಡಿದ್ದರು. 

ಮೂರು ಅನಧಿಕೃತ ಏಕದಿನ ಪಂದ್ಯದ ಸರಣಿ ಹಾಗೂ ಎರಡು ಟೆಸ್ಟ್  ಪಂದ್ಯಕ್ಕಾಗಿ ಭಾರತ ಎ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಭಾರತ ಮೊದಲ ಪಂದ್ಯ ಗೆದ್ದ ಬಳಿಕ ಅನಧಿಕೃತ ಏಕದಿನ ಸರಣಿ 1-1 ಅಂತರಿಂದ ಸಮಬಲದಿಂದ ಕೂಡಿದೆ.  ನಾಳೆ ನಡೆಯಲಿರುವ ಪಂದ್ಯ ಸರಣಿ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದ ಯುವಕ ದಾರುಣ ಅಂತ್ಯ

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel