ಕ್ರಿಕೆಟ್

ಐಪಿಎಲ್‌ನಲ್ಲಿ ಚೀನಾದ ಪ್ರಾಯೋಜಕತ್ವ 'ಕ್ರಿಕೆಟ್ ಮತ್ತು ದೇಶದ ಹಿತಾಸಕ್ತಿ' ಗಮನಿಸಿ ಬಿಸಿಸಿಐ ನಿರ್ಧಾರ ಕೈಗೊಳ್ಳುತ್ತೆ!

Vishwanath S

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೀನಾದ ಪ್ರಾಯೋಜಕತ್ವಕ್ಕೆ ಸಂಬಂಧಿಸಿದಂತೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ನಿರ್ಧಾರವನ್ನು 'ಕ್ರಿಕೆಟ್ ಮತ್ತು ದೇಶದ ಹಿತಾಸಕ್ತಿ' ಯನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದು ಮೂಲವೊಂದು ತಿಳಿಸಿದೆ.

ಐಪಿಎಲ್ ಪರಿಶೀಲನಾ ಸಭೆಗೆ ಯಾವುದೇ ದಿನಾಂಕವನ್ನು ನಿರ್ಧರಿಸಲಾಗಿಲ್ಲ. ಬಿಸಿಸಿಐ ಪರಿಶೀಲಿಸುತ್ತಿರುವ ಇತರ ಸಮಸ್ಯೆಗಳಿವೆ. ಫ್ರಾಂಚೈಸಿಗಳು ತಮ್ಮ ಅಭಿಪ್ರಾಯಕ್ಕೆ ಅರ್ಹರಾಗಿದ್ದಾರೆ. ಕ್ರಿಕೆಟ್ ಮತ್ತು ದೇಶದ ಹಿತದೃಷ್ಟಿಯಿಂದ ನಿರ್ಧಾರವೊಂದನ್ನು ತೆಗೆದುಕೊಳ್ಳುತ್ತೇವೆ. ಐಪಿಎಲ್ ಎಲ್ಲಾ ಸಮಸ್ಯೆಗಳ ಬಗ್ಗೆ ನಾವು ಕೆಲಸ ಮಾಡಿದ ನಂತರ ಸಭೆ ನಡೆಯಲಿದೆ ಎಂದು ಮೂಲವು ತಿಳಿಸಿದೆ.

ಪೂರ್ವ ಲಡಾಕ್‌ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಗಡಿ ಉದ್ವಿಗ್ನತೆ ಐಪಿಎಲ್‌ನಲ್ಲಿ ಚೀನಾದ ಪ್ರಾಯೋಜಕತ್ವದ ಬಗ್ಗೆ ಪ್ರಶ್ನೆ ಎದ್ದಿದೆ. ಇದಕ್ಕೂ ಮುನ್ನ ಸೋಮವಾರ, ಟಿಕ್ ಟಾಕ್ ಮತ್ತು ಯುಸಿ ಬ್ರೌಸರ್ ಸೇರಿದಂತೆ 59 ಚೀನಾ ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು.

ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಪೂರ್ವಾಗ್ರಹ ಪೀಡಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಆದೇಶ ಗಮನದಲ್ಲಿಟ್ಟುಕೊಂಡು 59 ಆ್ಯಪ್ ಗಳನ್ನು ನಿರ್ಬಂಧಿಸಿರುವುದಾಗಿ ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿತ್ತು.

SCROLL FOR NEXT