ಕ್ರಿಕೆಟ್

ಟೀಂ ಇಂಡಿಯಾದಲ್ಲಿ ವೇಗದ ಬೌಲರ್‌ಗಳೇ ಇರಲಿಲ್ಲ: ಕಪಿಲ್ ದೇವ್

Vishwanath S

ನವದೆಹಲಿ: ಭಾರತ ತಂಡ ಸದ್ಯ ವಿಶ್ವದ ನಂ.1 ಬೌಲಿಂಗ್‌ ವಿಭಾಗವನ್ನು ಹೊಂದಿದೆ. ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ ಹಾಗೂ ಇಶಾಂತ್ ಶರ್ಮಾ ಅವರನ್ನು ಒಳಗೊಂಡ ಭಾರತ ಟೆಸ್ಟ್‌ ತಂಡದ ಬೌಲಿಂಗ್‌ ವಿಭಾಗ ವಿಶ್ವದ ಯಾವುದೇ ತಂಡವನ್ನು ಅಲ್ಪ ಮೊತ್ತಕ್ಕೆ ಆಲ್‌ಔಟ್‌ ಮಾಡುವ ಸಾಮರ್ಥ್ಯ ಹೊಂದಿದೆ ಎಂಬುದು ಪರಿಣತರ ಅಭಿಪ್ರಾಯವಾಗಿದೆ.

ಆದರೆ, ಹಿಂದೆಲ್ಲಾ ಟೀಮ್‌ ಇಂಡಿಯಾದ ಪರಿಸ್ಥಿತಿ ಬಹಳ ಕಷ್ಟಕರವಾಗಿತ್ತು. ಆಗ ಭಾರತ ತಂಡದಲ್ಲಿ ವಿಶ್ವ ಶ್ರೇಷ್ಠ ವೇಗಿಗಳು ಇಲ್ಲವೇ ಇಲ್ಲ ಎನ್ನಲಾಗುತ್ತಿತ್ತು. ಒಬ್ಬ ಬೌಲರ್‌ಗೂ ಭಾರತ ತಂಡದಲ್ಲಿ ವಿಶ್ವ ಶ್ರೇಷ್ಠ ಎನಿಸಿಕೊಳ್ಳು ಸಾಮರ್ಥ್ಯ ಇರಲಿಲ್ಲ ಎಂಬುದು ವಿಪರ್ಯಾಸವೇ ಸರಿ. ಹೀಗಾಗಿ ಹೆಚ್ಚು ಸ್ಪಿನ್‌ ಬೌಲರ್‌ಗಳನ್ನೇ ಭಾರತ ತಂಡ ಆಧರಿಸುವಂತಾಗಿತ್ತು.

1970ರ ದಶಕದಲ್ಲಿ ಭಾರತ ತಂಡ ತನ್ನ ಬಲಿಷ್ಠ ಬ್ಯಾಟಿಂಗ್‌ ಮತ್ತು ಸ್ಪಿನ್‌ ಬೌಲರ್‌ಗಳ ಬಲದಿಂದಲೇ ಹೆಚ್ಚು ಪಂದ್ಯಗಳನ್ನು ಗೆದ್ದಿತ್ತು. ಅಂದೆಲ್ಲಾ ಹೆಸರಿಗಷ್ಟೇ ಒಬ್ಬ ವೇಗದ ಬೌಲರ್‌ನನ್ನು ತಂಡದಲ್ಲಿ ಆಡಿಸಲಾಗುತ್ತಿತ್ತು. ಆ ಸಂದರ್ಭದಲ್ಲಿ ಟೀಮ್‌ ಇಂಡಿಯಾಗೆ ಹರಿಯಾಣ ಹರಿಕೇನ್‌ ಪ್ರವೇಶವಾಗಿತ್ತು.

ವಿಶ್ವ ಶ್ರೇಷ್ಠ ಫಾಸ್ಟ್‌ಬೌಲಿಂಗ್‌ ಆಲ್‌ರೌಂಡರ್‌ ಆಗಿ ಹೊರಹೊಮ್ಮಿದ ಕಪಿಲ್‌ ದೇವ್‌ ಆ ಕಾಲಕ್ಕೆ ನ್ಯೂಜಿಲೆಂಡ್‌ನ ದಿಗ್ಗಜ ರಿಚರ್ಡ್‌ ಹ್ಯಾಡ್ಲಿ ಅವರ ಹೆಸರಲ್ಲಿದ್ದ ಅತಿ ಹೆಚ್ಚು ಟೆಸ್ಟ್‌ ವಿಕೆಟ್‌ ಪಡೆದ ಬೌಲರ್‌ ಎಂಬ ವಿಶ್ವ ದಾಖಲೆಯನ್ನು ಮುರಿದಿದ್ದರು. ಭಾರತ ಕೂಡ ವಿಶ್ವ ಶ್ರೇಷ್ಠ ಫಾಸ್ಟ್‌ ಬೌಲರ್‌ಗಳನ್ನು ತರಬಲ್ಲದು ಎಂಬುದನ್ನು ತೋರಿಸಿಕೊಟ್ಟಿದ್ದೆ ಕಪಿಲ್‌ ದೇವ್‌ ಎಂದು ಮಾಜಿ ನಾಯಕ ಸುನಿಲ್‌ ಗವಾಸ್ಕರ್‌ ಗುಣಗಾನ ಮಾಡಿದ್ದರು.

ಈ ಬಗ್ಗೆ ತಮ್ಮ ನೆನಪಿನಾಳ ಕೆದಕಿರುವ ಭಾರತಕ್ಕೆ ಚೊಚ್ಚಲ (1983) ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಕಪಿಲ್‌ ದೇವ್‌, ತಾವು ವೇಗದ ಬೌಲರ್‌ ಆಗಲೇ ಬೇಕೆಂದು ಹಠ ಹಿಡಿದದ್ದು ಯಾವಾಗ ಎಂದು ವಿವರಿಸಿದ್ದಾರೆ.

SCROLL FOR NEXT