ಇರ್ಫಾನ್ ಪಠಾಣ್ 
ಕ್ರಿಕೆಟ್

ವೇಗದ ಬೌಲರ್‌ಗಳು ಫಾರ್ಮ್ ಗೆ ಮರಳುವ ಮುನ್ನ ಹೆಚ್ಚು ಜಾಗೃತರಾಗಬೇಕು: ಇರ್ಫಾನ್ ಪಠಾಣ್

ಕೊರೋನಾವೈರಸ್ ಲಾಕ್ ಡೌನ್ ನಂತರ ವೇಗದ ಬೌಲರ್‌ಗಳು ಅಂಕಣಕ್ಕೆ ಆಗಮಿಸಿದಾಗ ಮತ್ತೆ ಲಯಕ್ಕೆ ಬರಲು ಕನಿಷ್ಠ ನಾಲ್ಕರಿಂದ ಆರು ವಾರಗಳು ಬೇಕಾಗುತ್ತದೆ ಎಂದು ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಕೊರೋನಾವೈರಸ್ ಲಾಕ್ ಡೌನ್ ನಂತರ ವೇಗದ ಬೌಲರ್‌ಗಳು ಅಂಕಣಕ್ಕೆ ಆಗಮಿಸಿದಾಗ ಮತ್ತೆ ಲಯಕ್ಕೆ ಬರಲು ಕನಿಷ್ಠ ನಾಲ್ಕರಿಂದ ಆರು ವಾರಗಳು ಬೇಕಾಗುತ್ತದೆ ಎಂದು ಭಾರತದ ಮಾಜಿ ವೇಗಿ ಇರ್ಫಾನ್ ಪಠಾಣ್ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ ಡೌನ್ ಆಗಿದ್ದರಿಂದ ಭಾರತದ ಹೆಚ್ಚಿನ ಕ್ರಿಕೆಟಿಗರಿಗೆ ಮಾರ್ಚ್‌ನಿಂದ ಅಭ್ಯಾಸ ನಡೆಸಲಾಗಿಲ್ಲ. ವೇಗಿ ಶಾರ್ದೂಲ್  ಠಾಕೂರ್ ಕಳೆದ ತಿಂಗಳು ಮಹಾರಾಷ್ಟ್ರದ ಬೋಯಿಸಾರ್‌ನಲ್ಲಿ ಮೇ ತಿಂಗಳಲ್ಲಿ ತರಬೇತಿಯನ್ನು ಪುನರಾರಂಭಿಸಿದರೆ, ರಿಷಭ್ ಪಂತ್, ಸುರೇಶ್ ರೈನಾ ಕೂಡ ಇತ್ತೀಚೆಗೆ ಗಾಜಿಯಾಬಾದ್‌ನಲ್ಲಿ  ತಮ್ಮ ಅಭ್ಯಾಸ ನಡೆಸಲು ಪ್ರಾರಂಭಿಸಿದ್ದಾರೆ.

ಚೇತೇಶ್ವರ ಪೂಜಾರ, ಉಮೇಶ್ ಯಾದವ್, ಮೊಹಮ್ಮದ್ ಶಮಿ ಮತ್ತು ಇಶಾಂತ್ ಶರ್ಮಾ ಕೂಡ ತರಬೇತಿಯನ್ನು ಪುನರಾರಂಭಿಸಿದ್ದಾರೆ. "ನಿಜ ಹೇಳಬೇಕೆಂದರೆ, ವೇಗದ ಬೌಲರ್‌ಗಳ ಬಗ್ಗೆ ನನಗೆ ನಿಜಕ್ಕೂ ಆತಂಕವಿದೆ" ಭಾರತಕ್ಕಾಗಿ 29 ಟೆಸ್ಟ್ ಮತ್ತು 120 ಏಕದಿನ ಪಂದ್ಯಗಳನ್ನು ಆಡಿದ ಪಠಾಣ್ ಹೇಳಿದ್ದಾರೆ.

ವೇಗದ ಬೌಲರ್ ಗಳು ಮತ್ತೆ ಫಾರ್ಮ್ ಗೆ ಬರಲು 4-6 ವಾರಗಳು ಬೇಕಾಗಬಹುದು. ಇದು ಕಠಿಣ ಕೆಲಸ ಮತ್ತು ಅವರು 140-150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದವರಾದಲ್ಲಿ ಒನ್ ಟೈಂ ನಲ್ಲಿ ಒಂದು ಚೆಂಡನ್ನು ಬೌಲ್ ಮಾಡಲು ಸುಮಾರು 25 ಗಜಗಳಷ್ಟು ಓಡಿ ನಂತರ ಬೌಲ್ ಮಾಡಬೇಕಾಗುತ್ತದೆ. ದೇಹದ ಮೇಲಾದ ಗಾಯದ ನಿರ್ವಹಣೆ ಕೂಡ ಮುಖ್ಯವಾಗಿರುತ್ತದೆ ಏಕೆಂದರೆ ಯಾವುದೇ ವೇಗದ ಬೌಲರ್ ಮತ್ತೆ ಲಯಕ್ಕೆ ಬರಲು  ಇದು ಅಗತ್ಯವೆಂದು ಭಾವಿಸುತ್ತೇನೆ,  ಹಾಗಾಗಿ  ಇದು ಕನಿಷ್ಠ 4-6 ವಾರಗಳನ್ನು ತೆಗೆದುಕೊಳ್ಳುತ್ತದೆ, ಆದ್ದರಿಂದ ವೇಗದ ಬೌಲರ್‌ಗಳು ಸ್ವಲ್ಪ ಹೆಚ್ಚು ಜಾಗರೂಕರಾಗಿರಬೇಕು ಎಂದು ನಾನು  ಹೇಳುತ್ತೇನೆ. ಸ್ಪಿನ್ನರ್‌ಗಳು ಅಥವಾ ಬ್ಯಾಟ್ಸ್‌ಮನ್‌ಗಳಿಗಿಂತಲೂ ಇವರ ಮೇಲೆ ಹೆಚ್ಚಿನ ಒತ್ತಡವಿರಲಿದೆ" ಅವರು ಹೇಳಿದರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT