ಕ್ರಿಕೆಟ್

ಕೋವಿಡ್-19 ನಿರ್ಬಂಧ: ಕುಟುಂಬದ ಕಡೆ ಮೊದಲ ಆದ್ಯತೆ, ವೃತ್ತಿ ಭವಿಷ್ಯದ ಬಗ್ಗೆ ಮರು ಚಿಂತನೆ- ವಾರ್ನರ್

Nagaraja AB

ಮೆಲ್ಬರ್ನ್: ಜಾಗತಿಕ ಕೋವಿಡ್-19 ನಿರ್ಬಂಧದಿಂದಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರನಾಗಿ ತನ್ನ ಭವಿಷ್ಯದ ಬಗ್ಗೆ ಮರು ಚಿಂತಿಸಬೇಕಾಗುತ್ತದೆ ಎಂದು ಆಸ್ಟ್ರೇಲಿಯಾ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಹೇಳಿದ್ದಾರೆ.

ಚೆಂಡು ವಿರೂಪ ಪ್ರಕರಣದಿಂದಾಗಿ ಒಂದು ವರ್ಷ ನಿಷೇಧದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಯಶಸ್ವಿಯಾಗಿ ಮರಳಿರುವ ವಾರ್ನರ್ , ಪತ್ನಿಯೊಂದಿಗೆ ಮೂವರು ಪುತ್ರಿಯರನ್ನು ಹೊಂದಿದ್ದಾರೆ.

ಕುಟುಂಬದಿಂದ ದೂರ ಉಳಿಯುವುದು ಸುಲಭದ ಕೆಲಸವಲ್ಲ, ನನ್ನ ಹೆಂಡತಿ ಹಾಗೂ ಮೂವರು ಪುತ್ರಿಯರು ನನ್ನ ವೃತ್ತಿ ಜೀವನದ ದೊಡ್ಡ ಭಾಗಗಳು, ಕ್ರಿಕೆಟ್ ನೊಂದಿಗೆ ಕುಟುಂಬಕ್ಕೆ ಮೊದಲ ಆದ್ಯತೆ ನೀಡಬೇಕು. ಇದು ಮಹತ್ವಪೂರ್ಣ ಸಮಯವಾಗಿದ್ದು, ಯೋಚಿಸಿ ನಿರ್ಧಾರ ಕೈಗೊಳ್ಳಬೇಕಾಗಿದೆ ಎಂದು ವಾರ್ನರ್ ಇಎಸ್ ಪಿಎನ್ ಕ್ರಿಕ್ ಇನ್ಫೋಗೆ ಹೇಳಿದ್ದಾರೆ.

ಈ ಸಂದರ್ಭದಲ್ಲಿ ಟಿ-20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲ್ಲ, ಅದು ಭಾರತದಲ್ಲಿ ನಡೆದರೆ ವೃತ್ತಿ ಜೀವನದ ಬಗ್ಗೆ ಚಿಂತಿಸಬೇಕಾಗುತ್ತದೆ. ನಾನು ಏಲ್ಲಿ ಇರುತ್ತೇನೆ, ಮಕ್ಕಳು ಏಲ್ಲಿ ಶಿಕ್ಷಣ ಪಡೆಯುತ್ತಾರೆ ಎಂಬುದರ ಬಗ್ಗೆ ನೋಡುತ್ತೇನೆ. ನನ್ನ ನಿರ್ಧಾರಗಳಲ್ಲಿ ಇವೆಲ್ಲವೂ ದೊಡ್ಡ ಭಾಗಗಳಾಗಿರುತ್ತವೆ. ಇದೊಂದು ಕುಟುಂಬದ ದೊಡ್ಡ ನಿರ್ಧಾರವಾಗಿದೆ ಎಂದು ಅವರು ತಿಳಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಲಾಕ್ ಡೌನ್ ಇದ್ದು, ಸರ್ಕಾರದ ನಿರ್ಬಂಧಗಳನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ
ವಾರ್ನರ್, ಮುಂಬರುವ ಅಪ್ಘಾನಿಸ್ತಾನ ಮತ್ತು ಭಾರತ ವಿರುದ್ಧದ ಟೆಸ್ಟ್ ಸರಣಿಯ ಸಿದ್ಧತೆ ಕೊರತೆ ಬಗ್ಗೆ ಆತಂಕ
ವ್ಯಕ್ತಪಡಿಸಿದ್ದಾರೆ.

SCROLL FOR NEXT