ಕ್ರಿಕೆಟ್

ವಿರಾಟ್, ರವಿ ಶಾಸ್ತ್ರಿ ಮುಕ್ತವಾಗಿ ಆಡುವ ಅವಕಾಶ ನೀಡಿದರು: ಹಾರ್ದಿಕ್ ಪಾಂಡ್ಯ

Lingaraj Badiger

ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿ ಅವರು ನನಗೆ ಮುಕ್ತವಾಗಿ ಆಡಲು ಅವಕಾಶ ನೀಡಿದರು ಎಂದು ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.

ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಪಾಂಡ್ಯ ತಂಡ ಸೇರಿಕೊಂಡರು. ಆದರೆ ಅವರ ವೃತ್ತಿಜೀವನದ ಬಹುಪಾಲು ವಿರಾಟ್ ಮತ್ತು ಶಾಸ್ತ್ರಿ ಅವರ ಅಡಿಯಲ್ಲಿ ಕಳೆದಿದ್ದಾರೆ. 

ಕ್ರಿಕ್‌ ಬಜ್ ಪ್ರದರ್ಶನದಲ್ಲಿ ಪಾಂಡ್ಯ, "ಧೋನಿ ಅವರ ಅನುಭವದಿಂದ ನಾನು ಕಲಿಯಬೇಕೆಂದು ಬಯಸುತ್ತೇನೆ" ಎಂದು ಹೇಳಿದರು. ವಿರಾಟ್ ಮತ್ತು ಶಾಸ್ತ್ರಿ ನನಗೆ ಅದರ ಸ್ವಾತಂತ್ರ್ಯವನ್ನು ನೀಡಿದರು. ನನಗೆ ಮಾತ್ರವಲ್ಲ ತಂಡದ ಪ್ರತಿಯೊಬ್ಬ ಆಟಗಾರನಿಗೂ ಈ ಸ್ವಾತಂತ್ರ್ಯವಿದೆ. ಇದು ಈ ತಂಡದ ವಿಶೇಷತೆ. ನಾವೆಲ್ಲರೂ ತಪ್ಪುಗಳನ್ನು ಮಾಡುತ್ತೇವೆ ಆದರೆ ಆ ತಪ್ಪುಗಳಿಂದಲೂ ಕಲಿಯುತ್ತೇವೆ” ಎಂದಿದ್ದಾರೆ. 

“ನಾನು ಎಸೆದ ಮೊದಲ ಎಂಟು ಎಸೆತಗಳಲ್ಲಿ ನಾನು 26 ರನ್ ನೀಡಿದ್ದೆ. ಇಲ್ಲಿಂದ ನನ್ನ ವೃತ್ತಿಜೀವನ ಮುಗಿಯಿತು ಎಂದು ನಾನು ಭಾವಿಸಿದ್ದೆ. ನನ್ನ ಎಸೆತದಲ್ಲಿ 105-110 ಮೀಟರ್ ಸಿಕ್ಸ್‌ ಹೊಡೆದಾಗ, ಬೇಸರವಾಗುತ್ತಿತ್ತು. ಏನು ಕೆಟ್ಟದಾಗಿದೆ ಎಂದು ನಾನು ಭಾವಿಸಿದ್ದೆ. ಆದರೆ ಅದೃಷ್ಟವಶಾತ್ ನಾನು ಕೆಲವು ವಿಕೆಟ್ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದೆ” ಎಂದಿದ್ದಾರೆ. 

ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದಲ್ಲಿ ಪಾಂಡ್ಯ ಅವರು ಭಾರತ ಎ ಪರ ಆಡುವ ಅವಕಾಶ ಪಡೆದಿದ್ದರು. “ದ್ರಾವಿಡ್ ಯಾವಾಗಲೂ ನನ್ನನ್ನು ನನ್ನಂತೆ ಆಡುವದನ್ನು ನೋಡಲು ಇಷ್ಟ ಪಡುತ್ತಿದ್ದರು. ಅವರ ಬ್ಯಾಟಿಂಗ್ ಸುಧಾರಣೆಗೆ ಸಲಹೆ ನೀಡುತ್ತಿದ್ದರು” ಎಂದು ತಿಳಿಸಿದ್ದಾರೆ. 

"ನಾನು ನನ್ನ ಜೀವನದಲ್ಲಿ ತಪ್ಪು ಮಾಡಿದ್ದೇನೆ ಮತ್ತು ನನ್ನ ತಪ್ಪನ್ನು ನಾನು ಒಪ್ಪಿಕೊಂಡಿದ್ದೇನೆ. ಉತ್ತಮ ವಿಷಯವೆಂದರೆ ನಾನು ಅದನ್ನು ಸ್ವೀಕರಿಸಿದ್ದೇನೆ" ಎಂದಿದ್ದಾರೆ.

SCROLL FOR NEXT