ಕ್ರಿಕೆಟ್

ಸದ್ಯದ ಟೀಂ ಇಂಡಿಯಾ ದೊಡ್ಡ ಪಂದ್ಯಗಳ ಒತ್ತಡವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲ: ಗೌತಮ್ ಗಂಭೀರ್

Vishwanath S

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಆಯೋಜಿತ ದೊಡ್ಡ ಪಂದ್ಯಗಳಲ್ಲಿ ಟೀಂ ಇಂಡಿಯಾ ಒತ್ತಡವನ್ನು ಮೆಟ್ಟಿನಿಲ್ಲುವಲ್ಲಿ ವಿಫಲವಾಗುತ್ತಿದೆ ಮತ್ತು ಅದಕ್ಕಾಗಿಯೇ ಇದು ಅನೇಕ ನಿರ್ಣಾಯಕ ಪಂದ್ಯಗಳನ್ನು ಕಳೆದುಕೊಂಡಿದೆ ಎಂದು ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಕ್ರಿಕೆಟ್ ಕನೆಕ್ಟೆಡ್ ಎಂಬ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಗಂಭೀರ್, ನನ್ನ ದೃಷ್ಟಿಯಲ್ಲಿ, ಈ ಪಂದ್ಯಗಳಲ್ಲಿನ ಒತ್ತಡವನ್ನು ತಡೆದುಕೊಳ್ಳಲು ಭಾರತೀಯ ತಂಡಕ್ಕೆ ಸಾಧ್ಯವಿಲ್ಲ. ಆದರೆ ಇತರ ತಂಡಗಳು ಒತ್ತಡ ಮೆಟ್ಟಿನಿಲ್ಲುವಲ್ಲಿ ಸಫಲವಾಗುತ್ತಿದೆ ಎಂದಿದ್ದಾರೆ.

ನೀವು ಎಲ್ಲಾ ಸೆಮಿಫೈನಲ್ ಮತ್ತು ಫೈನಲ್‌ಗಳನ್ನು ನೋಡಿದರೆ, ಲೀಗ್ ಹಂತದಲ್ಲಿ ನಿಜವಾಗಿಯೂ ಉತ್ತಮವಾಗಿ ಆಡುವ ತಂಡ ಸೆಮಿಫೈನಲ್ ಅಥವಾ ನಾಕೌಟ್‌ಗಳಲ್ಲಿ ಉತ್ತಮವಾಗಿ ಆಡುವುದಿಲ್ಲ ಇದು ಪ್ರಸ್ತುತ ತಂಡ ಮಾನಸಿಕ ಸ್ಥಿರತೆ ಇಲ್ಲದಿರುವುದನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

28 ವರ್ಷಗಳ ನಂತರ ದೇಶ ಗೆದ್ದ 2011 ರ ವಿಶ್ವಕಪ್‌ನ ಭಾಗವಾಗಿದ್ದ ಗಂಭೀರ್ ಅವರು ತಮ್ಮನ್ನು ತಾವು ಸಾಬೀತುಪಡಿಸದ ಹೊರತು ಭಾರತವನ್ನು ವಿಶ್ವ ಚಾಂಪಿಯನ್ ಎಂದು ಕರೆಯಲು ಸಾಧ್ಯವಿಲ್ಲ ಎಂದು ಹೇಳಿದರು.

SCROLL FOR NEXT