ಕ್ರಿಕೆಟ್

ಹುತಾತ್ಮ ಯೋಧರ ಬಗ್ಗೆ ಕೇಂದ್ರ ಸರ್ಕಾರವನ್ನು ಅಣಕಿಸಿ ಟ್ವೀಟ್: ಚೆನ್ನೈ ಸೂಪರ್ ಕಿಂಗ್ಸ್ ತಂಡ ವೈದ್ಯ ಅಮಾನತು!

Sumana Upadhyaya

ನವದೆಹಲಿ: ಭಾರತ-ಚೀನಾ ಸಂಘರ್ಷದಲ್ಲಿ 20 ಮಂದಿ ಭಾರತೀಯ ಸೈನಿಕರು ಹುತಾತ್ಮರಾದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ ಪೋಸ್ಟ್ ನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೈದ್ಯ ಮಧು ತೊಟ್ಟಪ್ಪಿಲ್ಲಿಲ್ ಅವರನ್ನು ಅಮಾನತು ಮಾಡಲಾಗಿದೆ.
ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಈ ವಿಷಯವನ್ನು ಚೆನ್ನೈ ಸೂಪರ್ ಕಿಂಗ್ಸ್ ನ ಟ್ವಿಟ್ಟರ್ ಪೇಜ್ ನಲ್ಲಿ ಖಚಿತಪಡಿಸಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಲೀಕರು ಬಿಸಿಸಿಐ ಮಾಜಿ ಅಧ್ಯಕ್ಷ ಎನ್ ಶ್ರೀನಿವಾಸನ್ ಅವರ ಇಂಡಿಯಾ ಸಿಮೆಂಟ್ಸ್ ಹೊಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗಮನಕ್ಕೆ ತಾರದೆ ವೈದ್ಯ ಮಧು ತೊಟ್ಟಪ್ಪಿಲ್ಲಿಲ್ ಟ್ವೀಟ್ ಮಾಡಿದ್ದರು. ಅದು ಕೆಟ್ಟ ಅಭಿರುಚಿಯಿಂದ ಕೂಡಿತ್ತು ಎಂದು ಅವರನ್ನು ತಂಡದ ವೈದ್ಯ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ಮಧು ತೊಟ್ಟಪ್ಪಿಲ್ಲಿಲ್ ತಂಡ ಆರಂಭವಾದಾಗಿನಿಂದಲೂ ಕ್ರೀಡಾ ವೈದ್ಯಕೀಯ ವಿಭಾಗದಲ್ಲಿ ವಿಶೇಷ ತಜ್ಞರಾಗಿದ್ದರು. ನಿನ್ನೆ ಭಾರತ-ಚೀನಾ ಸೇನಾ ಘರ್ಷಣೆಯಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದ ಸುದ್ದಿ ಹೊರಬರುತ್ತಿದ್ದಂತೆ ಕೇಂದ್ರ ಸರ್ಕಾರವನ್ನು ಅಣಕಿಸಿ ಟ್ವೀಟ್ ಮಾಡಿದ್ದರು. ನಂತರ ಅದನ್ನು ಡಿಲೀಟ್ ಮಾಡಿ ಅಕೌಂಟ್ ನ್ನು ಪ್ರೊಟೆಕ್ಟ್ ಮಾಡಿದ್ದರು.

SCROLL FOR NEXT