ಕ್ರಿಕೆಟ್

ಮಹಿಳಾ ಕ್ರಿಕೆಟ್ ಇತಿಹಾಸದಲ್ಲೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ-20 ವಿಶ್ವಕಪ್ ಅತಿ ಹೆಚ್ಚು ವೀಕ್ಷಣೆ: ಐಸಿಸಿ

Nagaraja AB

ದುಬೈ: ಆಸ್ಟ್ರೇಲಿಯಾದಲ್ಲಿ ನಡೆದ  2020  ಮಹಿಳಾ ಟಿ 20 ವಿಶ್ವಕಪ್‌  ದಾಖಲೆ ಮಟ್ಟದ ವೀಕ್ಷಕರನ್ನು ಪಡೆದುಕೊಂಡಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಸೋಮವಾರ ಹೇಳಿದೆ. 

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಡಿಜಿಟಲ್ ಚಾನೆಲ್‌ಗಳ ಮೂಲಕ 1.1 ಬಿಲಿಯನ್ ವೀಡಿಯೊ ವೀಕ್ಷಣೆಗಳನ್ನು ಪಡೆದುಕೊಂಡಿದೆ.ಈ ಸಂಖ್ಯೆ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ 20 ಪಟ್ಟು ಹೆಚ್ಚಿದೆ.

ಫೆಬ್ರವರಿ- ಮಾರ್ಚ್ ತಿಂಗಳಿನಲ್ಲಿ ನಡೆದ ಪಂದ್ಯಾವಳಿ 2017ರಲ್ಲಿ ನಡೆದ ಮಹಿಳಾ ಯಶಸ್ವಿ ಕ್ರಿಕೆಟ್ ಏಕದಿನ ವಿಶ್ವಕಪ್ ವಿಡಿಯೋ ವೀಕ್ಷಣೆಗಳಿಗಿಂತ 10 ಪಟ್ಟು ಹೆಚ್ಚಿದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.ಎರಡು ಟೂರ್ನಿಗಳಲ್ಲೂ ಭಾರತ ರನ್ನರ್ ಆಫ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೂ, ಭಾರತೀಯ ಆಟಗಾರರ ಅದ್ಬುತ ಪ್ರದರ್ಶನ ವೀಕ್ಷಕರ ಸಂಖ್ಯೆ ಹೆಚ್ಚುವಲ್ಲಿ ಮಹತ್ವದ ಪಾತ್ರ ವಹಿಸಿದೆ.

2019 ವಿಶ್ವಕಪ್ ನಂತರ ಮಹಿಳಾ ಟಿ-20 ವಿಶ್ವಕಪ್ ಐಸಿಸಿ ಆಯೋಜಿಸಿದ್ದ ಟೂರ್ನಿಗಳಲ್ಲಿ ಎರಡನೇ ಯಶಸ್ವಿ  ಪಂದ್ಯಾವಳಿಯಾಗಿದೆ.ವಿಶ್ವದಾದ್ಯಂತ ದಾಖಲೆ ಮಟ್ಟದ ವೀಕ್ಷಕರನ್ನು ಪಡೆದುಕೊಂಡಿದೆ.ಫೈನಲ್ ಪಂದ್ಯದಲ್ಲಿ ವೀಕ್ಷಕರನ್ನು ಸೆಳೆಯುವಲ್ಲಿ ಭಾರತ ಯಶಸ್ವಿಯಾಗಿದ್ದು, ನೌಕ್ ಔಟ್ ಹಂತದಲ್ಲಿ 2018ಗಿಂತಲೂ ಶೇ 423ರಷ್ಟು ಒಟ್ಟಾರೇ ವೀಕ್ಷಕರನ್ನು ಪಡೆದುಕೊಂಡಿದೆ ಎಂದು ಐಸಿಸಿ ತಿಳಿಸಿದೆ.

ಭಾರತದಲ್ಲಿ ಇಂಗ್ಲೀಷ್, ಹಿಂದಿ, ತಮಿಳು, ತೆಲುಗು ಮತ್ತು ಕನ್ನಡ ಭಾಷೆಗಳ ಮೂಲಕ ಯಶಸ್ವಿಯಾಗಿ ಪಂದ್ಯಾವಳಿಯ
ನೇರ ಪ್ರಸಾರ ಮಾಡಲಾಗಿದೆ ಎಂದು ಐಸಿಸಿ ಹೇಳಿದೆ.

SCROLL FOR NEXT