ಕ್ರಿಕೆಟ್

ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಸೋಲಿಗೆ ಕಾರಣ ತಿಳಿಸಿದ ಭುವನೇಶ್ವರ್‌ ಕುಮಾರ್

Vishwanath S

ನವದೆಹಲಿ: ಲೀಗ್‌ ಹಂತದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿದ್ದ ಟೀಮ್‌ ಇಂಡಿಯಾ, 2017ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಗೆಲ್ಲುವ ಫೇವರಿಟ್‌ ತಂಡವಾಗಿತ್ತು. 

ಆದರೆ, ಯಾರೊಬ್ಬರೂ ಅಂದಾಜಿಸದ ರೀತಿಯಲ್ಲಿ ಪಾಕ್‌ ವಿರುದ್ಧ ವಿರಾಟ್‌ ಕೊಹ್ಲಿ ಪಡೆ ಸೋತು ಸುಣ್ಣವಾಗಿತ್ತು. ರನ್‌ ಚೇಸಿಂಗ್‌ನಲ್ಲಿ ಕೊಹ್ಲಿ ಪಡೆ ಬಲಿಷ್ಠವಾಗಿದ್ದ ಕಾರಣ ಅಂದು ಟಾಸ್‌ ಗೆದ್ದ ಭಾರತ ತಂಡ ಮೊದಲು ಕ್ಷೇತ್ರರಕ್ಷಣೆ ಆಯ್ಕೆ ಮಾಡಿಕೊಂಡಿತ್ತು. 

ಆದರೆ, ಮೊದಲ ವಿಕೆಟ್‌ಗೆ ಅಝರ್‌ ಅಲಿ ಮತ್ತು ಫಖರ್‌ ಝಮಾನ್‌ 128 ರನ್‌ಗಳ ಭರ್ಜರಿ ಜೊತೆಯಾಟವಾಡಿ ತಂಡಕ್ಕೆ ಬೇಕಿದ್ದ ಭದ್ರ ಅಡಿಪಾಯ ಹಾಕಿಕೊಟ್ಟಿದ್ದರು. ಬಳಿಕ ಫಖರ್‌ ದಾಖಲಿಸಿದ ಶತಕದ ನೆರವಿನಿಂದ ಪಾಕ್‌ ಪಡೆ 50 ಓವರ್‌ಗಳಲ್ಲಿ 4 ವಿಕೆಟ್‌ಗೆ 338 ರನ್‌ಗಳ ಬೃಹತ್‌ ಮೊತ್ತ ನಿರ್ಮಿಸಿತ್ತು. ಈ ರನ್ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 158 ರನ್ ಗಳಿಗೆ ಆಲೌಟ್ ಆಗಿ 180 ರನ್ ಗಳ ಹೀನಾಯ ಸೋಲು ಕಾಣಬೇಕಾಯಿತು ಎಂದರು.

ಈ ಬಗ್ಗೆ ಮಾತನಾಡಿರುವ ಭುವನೇಶ್ವರ್‌ ಅಂದು ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ ವಿವರಿಸಿದ್ದಾರೆ. ಶತಕ ವೀರ ಫಖರ್‌ ಝಮಾನ್‌ ಆರಂಭದಲ್ಲೇ ಧೋನಿಗೆ ಕ್ಯಾಚಿತ್ತು ಔಟ್‌ ಆಗಿದ್ದರು. ಆದರೆ ವೇಗಿ ಜಸ್‌ಪ್ರೀತ್‌ ಬುಮ್ರಾ ಎಸೆದಿದ್ದ ಆ ಎಸೆತವು ನೋಬಾಲ್‌ ಆಗಿದ್ದ ಕಾರಣ ಫಖರ್‌ ಜೀವದಾನ ಪಡೆದಿದ್ದರು. ಆ ಒಂದು ತಪ್ಪು ಭಾರತಕ್ಕೆ ಪಂದ್ಯ ಕಳೆದುಕೊಳ್ಳುವಂತಾಯಿತು ಎಂದು ಭುವಿ ಹೇಳಿದ್ದಾರೆ.

"2017ರ ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ನಮ್ಮೆದುರು ಪಾಕ್‌ ತಂಡ ಅಕ್ಷರಶಃ ಪೂರ್ಣ ಪ್ರಾಬಲ್ಯ ಮೆರೆದಿತ್ತು. ಅಂದು ನಮ್ಮ ಸೋಲಿಗೆ ಕಾರಣ ಏನು ಎಂದು ಹೇಳುವುದು ಕಷ್ಟವಾಗಬಹುದು. ಆದರೆ, ಜಸ್‌ಪ್ರೀತ್‌ ಬುಮ್ರಾ ಎಸೆದ ನೋಬಾಲ್‌ ನಮ್ಮಿಂದ ಪಂದ್ಯ ಕೈ ಜಾರುವಂತೆ ಮಾಡಿತ್ತು ಎಂದಿದ್ದಾರೆ.

SCROLL FOR NEXT