ಜಸ್ಪ್ರಿತ್ ಬುಮ್ರಾ 
ಕ್ರಿಕೆಟ್

ದ್ವಿತೀಯ ಟೆಸ್ಟ್ : ತಂಡದ ಬ್ಯಾಟಿಂಗ್ ವಿಫಲತೆ ಬಗ್ಗೆ ಬುಮ್ರಾ ಪ್ರತಿಕ್ರಿಯೆ ಹೀಗಿದೆ

ದ್ವಿತೀಯ ಟೆಸ್ಟ್‌ ಪಂದ್ಯದಲ್ಲೂ  ಸೋಲಿನ ಭೀತಿಗೆ ಸಿಲುಕಿರುವ ಭಾರತ ತಂಡ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಆದರೂ, ವೇಗಿ ಜಸ್ಪ್ರಿತ್ ಬುಮ್ರಾ ತಮ್ಮ ಬ್ಯಾಟಿಂಗ್ ವಿಭಾಗವನ್ನು ದೂರುವಲ್ಲಿ ನಿರಾಕರಿಸಿದ್ದಾರೆ.

ಕ್ರೈಸ್ಟ್‌ಚರ್ಚ್ : ದ್ವಿತೀಯ ಟೆಸ್ಟ್‌ ಪಂದ್ಯದಲ್ಲೂ  ಸೋಲಿನ ಭೀತಿಗೆ ಸಿಲುಕಿರುವ ಭಾರತ ತಂಡ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಆದರೂ, ವೇಗಿ ಜಸ್ಪ್ರಿತ್ ಬುಮ್ರಾ ತಮ್ಮ ಬ್ಯಾಟಿಂಗ್ ವಿಭಾಗವನ್ನು ದೂರುವಲ್ಲಿ ನಿರಾಕರಿಸಿದ್ದಾರೆ.

ಪ್ರಥಮ ಇನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು 235 ರನ್‌ಗಳಿಗೆ ಕಟ್ಟಿ ಹಾಕಿದ ಟೀಮ್ ಇಂಡಿಯಾ ಏಳು ರನ್‌ಗಳ ಮುನ್ನಡೆ ಗಳಿಸಿತ್ತು. ಬಳಿಕ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಎರಡನೇ ದಿನದಂತ್ಯಕ್ಕೆ ಕೇವಲ 90 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 

ನೋಡಿ ಇನ್ನೊಬ್ಬರನ್ನು ದೂರುವುದು ನಮ್ಮ ಸಂಸ್ಕೃತಿಯಲ್ಲ. ಕ್ರೀಡೆಯು ಹೇಗೆ ನಿರ್ವಹಿಸುತ್ತದೆ ಎಂಬುದು ತಿಳಿದಿದೆ. ಕೆಲವೊಂದು ಬಾರಿ ಹೀಗಾಗುತ್ತದೆ. ಒಂದು ವೇಳೆ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿ ಬೌಲರ್‌ಗಳು ವಿಫಲವಾದರೆ ದೂರುವ ಸ್ವಾತಂತ್ರ್ಯವಿರುವುದಿಲ್ಲ ಎಂದಿದ್ದಾರೆ.

ಹಾಗೆಯೇ ನಾವೊಂದು ತಂಡವಾಗಿ ಕಠಿಣ ಪ್ರಯತ್ನವನ್ನು ಮಾಡುತ್ತಿದ್ದೇವೆ. ನಿಜ, ನಾವು ಬಯಸಿದಕ್ಕಿಂತಲೂ ಹೆಚ್ಚಿನ ವಿಕೆಟ್‌ಗಳನ್ನು ಕಳೆದುಕೊಂಡಿದ್ದೇವೆ. ಆದರೆ ಒಂದು ತಂಡವಾಗಿ ಒಬ್ಬರನ್ನೊಬ್ಬರನ್ನು ದೂರಲು ಇಷ್ಟಪಡುವುದಿಲ್ಲ" ಎಂದು ಬುಮ್ರಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

1 ಓವರ್‌ನಲ್ಲಿ 29 ರನ್ ಹೊಡೆಸಿಕೊಂಡ ಬಿಷ್ಣೋಯ್: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯ ಕೈಚೆಲ್ಲಿದ ಭಾರತ

ನಾನು ಸೋತಿದ್ದೇನೆ, ಸತ್ತಿಲ್ಲ: TMC ಕೇಂದ್ರ ಕಚೇರಿಗೆ ಬಿಗ... ಬಂಡಾಯ ನಾಯಕರ ವಿರುದ್ಧ ಮಮತಾ ಬ್ಯಾನರ್ಜಿ ಗರಂ

E20 Petrol: ವೈಜ್ಞಾನಿಕ ಪರೀಕ್ಷೆಗಳಲ್ಲಿ ಸುರಕ್ಷಿತ, ವಾಹನಗಳಿಗೆ ಅತ್ಯುತ್ತಮ; ತಜ್ಞರ ಸಮರ್ಥನೆ

ಮೆಲ್ಬೋರ್ನ್ ಭೇಟಿಗೂ ಮುನ್ನ ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ; ಆಸ್ಟ್ರೇಲಿಯಾದಿಂದ ತನಿಖೆ