ಕ್ರಿಕೆಟ್

ಭಾರತಕ್ಕೆ ಅದೃಷ್ಟ: ಸೆಮಿಫೈನಲ್ ಆಡದೇ ಮಹಿಳಾ ಟಿ20 ವಿಶ್ವಕಪ್ ಫೈನಲ್ ಪ್ರವೇಶಿಸಿದ ಟೀಂ ಇಂಡಿಯಾ!

Vishwanath S

ನವದೆಹಲಿ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಮಹಿಳಾ ತಂಡ ಸೆಮಿಫೈನಲ್ ಆಡದೇ ಚೊಚ್ಚಚ ಬಾರಿಗೆ ಫೈನಲ್ ಪ್ರವೇಶಿಸಿದೆ.

ಟೂರ್ನಿಯ ಲೀಗ್ ಹಂತದಲ್ಲಿ ಸತತ ನಾಲ್ಕು ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಇದೀಗ ನಿರ್ಣಾಯಕ ಹಂತಕ್ಕೆ ಬಂದಿತ್ತು. ಇಂದು ಸಿಡ್ನಿಯಲ್ಲಿ ಕ್ರಿಕೆಟ್ ಮೈದಾನದಲ್ಲಿ ಮೊಲದ ಸೆಮಿಫೈನಲ್ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ತಂಡಗಳ  ನಡುವೆ ನಡೆಯಲಿತ್ತು. 

ಆದರೆ ಈ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದರಿಂದ ಪಂದ್ಯವನ್ನು ರದ್ದು ಪಡಿಸಲಾಗಿದ್ದು ಟೂರ್ನಿಯಲ್ಲಿ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿದೆ.

ಐಸಿಸಿ ನಿಯಮದ ಪ್ರಕಾರ ವಿಶ್ವಕಪ್ ನಲ್ಲಿ ಕನಿಷ್ಠ 10 ಓವರ್ ಪಂದ್ಯ ನಡೆಯಬೇಕಿದೆ. ಇದು ಕೂಡ ನಡೆಯದಿದ್ದರಿಂದ ಭಾರತ ತಂಡಕ್ಕೆ ಜಾಕ್ ಪಾಟ್ ಹೊಡೆದಿದೆ.

ಸೆಮಿಫೈನಲ್ ಪಂದ್ಯಕ್ಕೆ ಮೀಸಲು ದಿನವಿರುವುದಿಲ್ಲ. ಹೀಗಾಗಿ ಟೂರ್ನಿಯಲ್ಲಿ ಅತೀ ಹೆಚ್ಚು ಪಂದ್ಯ ಗೆದ್ದಿರುವ ಭಾರತ ತಂಡ ನೇರವಾಗಿ ಫೈನಲ್ ಪ್ರವೇಶಿಸಿದೆ. ಇನ್ನು ಟೂರ್ನಿಯಲ್ಲಿ ಭಾರತ 4 ಪಂದ್ಯಗಳಲ್ಲೂ ಗೆಲುವು ಸಾಧಿಸಿದೆ.

SCROLL FOR NEXT