ಕ್ರಿಕೆಟ್

ಫೈನಲ್‌ಗೆ ಭಾರತ ಎಂಟ್ರಿ, ಐಸಿಸಿ ವಿರುದ್ಧ ಗುಡುಗಿದ್ದ ಮೈಕಲ್‌ ವಾನ್‌ಗೆ 'ಇದು ನಿಮ್ಮ ಕರ್ಮ' ಎಂದು ಕಿಚಾಯಿಸಿದ ನೆಟಿಗರು!

Vishwanath S

ನವದೆಹಲಿ: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ಫೈನಲ್‌ಗೆ ಲಗ್ಗೆಯಿಟ್ಟಿದ್ದು ಐಸಿಸಿ ನಿಯಮದ ವಿರುದ್ಧ ಗುಡುಗಿದ್ದ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಗೆ ನೆಟಿಗರು ಕಿಚಾಯಿಸಿದ್ದಾರೆ. 

ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಸೆಣೆಸಬೇಕಿತ್ತು. ನಿನ್ನೆ ನಡೆಯಬೇಕಿದ್ದ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಪಂದ್ಯವನ್ನು ರದ್ದುಗೊಳಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಭಾರತ ತಂಡ ಫೈನಲ್ ಗೆ ತಲುಪಿತ್ತು. ಇದರಿಂದ ಆಕ್ರೋಶಗೊಂಡಿದ್ದ ಮೈಕಲ್ ವಾನ್ ಸೆಮಿಫೈನಲ್ ಪಂದ್ಯಕ್ಕೆ ರಿಸರ್ವ್ ಡೇ ಇಡದಕ್ಕೆ ಐಸಿಸಿ ವಿರುದ್ಧ ಕೆಂಡಕಾರಿದ್ದರು. 

ಈ ಬಗ್ಗೆ ಟ್ವೀಟ್ ಮಾಡಿದ್ದ ಮೈಕಲ್ ವಾನ್ ವಿಶ್ವಕಪ್ ಕ್ರಿಕೆಟ್ ಟೂರ್ನಿ ಆಡುವುದು ಹಲವರಿಗೆ ಜೀವನದ ಕನಸಾಗಿರುತ್ತದೆ. ಇತಂಹ ಸಂದರ್ಭದಲ್ಲಿ ನಾಕೌಟ್ ಪಂದ್ಯದಲ್ಲಿ ಆಡುವುದು ಆಟಗಾರರಿಗೆ ಹೆಮ್ಮೆಯ ಸಂಗತಿ. ಇತಂಹ ಪಂದ್ಯಗಳಿಗೆ ರಿಸರ್ವ್ ಡೇ ಇಲ್ಲ ಎಂದರೇ ಹೇಗೆ ಎಂದು ಪ್ರಶ್ನಿಸಿದ್ದರು. 

ಮೈಕಲ್ ವಾನ್ ಟ್ವೀಟ್ ವೈರಲ್ ಆಗುತ್ತಿದ್ದಂತೆ ಅವರ ಕಾಲೆದಿರುವ ನೆಟಿಗರು ಇದು ನಿಮ್ಮ ಕರ್ಮ ಎಂದು ಟ್ವೀಟಿಸುತ್ತಿದ್ದಾರೆ. 

SCROLL FOR NEXT