ಕ್ರಿಕೆಟ್

ಕೊರೋನಾ ಎಫೆಕ್ಟ್: ಇರಾನಿ ಕಪ್ ಸೇರಿದಂತೆ ದೇಶಿಯ ಟೂರ್ನಿಗಳಿಗೆ ಬಿಸಿಸಿಐ ಕೊಕ್

Vishwanath S

ನವದೆಹಲಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಮುಂದೂಡಿದ ಬೆನ್ನಲ್ಲೆ ದೇಶಿಯ ಟೂರ್ನಿಗಳನ್ನು ನಡೆಸದಂತೆ ಶನಿವಾರ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.

ಕೊರೊನಾ ವೈರಸ ಹಿನ್ನೆಲೆ, ಪೇಟಿಎಂ ಇರಾನಿ ಕಪ್, ಹಿರಿಯ ಮಹಿಳಾ ಏಕದಿನ ನಾಕೌಟ್, ವಿಜಿ ಟ್ರೋಫಿ, ಹಿರಿಯ ಮಹಿಳಾ ಏಕದಿನ ಚಾಲೆಂಜರ್, ಮಹಿಳಾ ಅಂಡರ್ -19 ಏಕದಿನ ನಾಕೌಟ್ಸ್, ಮಹಿಳಾ ಅಂಡರ್ -19 ಟಿ-20 ಲೀಗ್, ಸೂಪರ್ ಲೀಗ್ ಮತ್ತು ನಾಕೌಟ್, ಮಹಿಳಾ ಅಂಡರ್ -19 ಟಿ-20 ಚಾಲೆಂಜರ್ ಟ್ರೋಫಿ, ಮಹಿಳಾ ಅಂಡರ್ -23 ನಾಕೌಟ್ ಮತ್ತು ಮಹಿಳಾ ಅಂಡರ್ -23 ಏಕದಿನ ಚಾಲೆಂಜರ್ಸ್ ಟೂರ್ನಿಗಳನ್ನು ಮುಂದಿನ ಆದೇಶದವರೆಗೆ ಮುಂದೂಡಲು ನಿರ್ಧರಿಸಿದೆ.

ಇದಕ್ಕೂ ಮುನ್ನ ಬಿಸಿಸಿಐ ಐಪಿಎಲ್ ಅನ್ನು ಏಪ್ರಿಲ್ 15 ರವರೆಗೆ ಮುಂದೂಡಲು ನಿರ್ಧರಿಸಿತ್ತು ಮತ್ತು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯನ್ನು ರದ್ದು ಗೊಳಿಸಿತ್ತು.

SCROLL FOR NEXT