ಕ್ರಿಕೆಟ್

ವಿಶ್ವಕಪ್‌ ನಲ್ಲಿ ಭಾರತ ವಿರುದ್ಧ ಬಳಸಿದ್ದ ಬ್ಯಾಟ್‌ ಪ್ರದರ್ಶಿಸಿದ ಪಾಂಟಿಂಗ್

Srinivas Rao BV

ಮೆಲ್ಬೋರ್ನ್: ಕೊರೊನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಕ್ರೀಡಾ ಲೋಕವೇ ಸ್ತಬ್ಧವಾಗಿದೆ. ಈ ವೇಳೆ ನಿತ್ಯ ಒಂದೊಂದೊಂದೇ ನೆನಪಿನಾಳ ಬಿಚ್ಚಿಡುತ್ತಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌, ಟೀಮ್‌ ಇಂಡಿಯಾ ಅಭಿಮಾನಿಗಳ ಕಹಿ ನೆನಪನ್ನು ತಮ್ಮ ವಿಶೇಷ ಬ್ಯಾಟ್‌ ಮೂಲಕ ಕೆದಕಿದ್ದಾರೆ.

ಸೋಷಿಯಲ್‌ ಮೀಡಿಯಾ ಟ್ವಿಟರ್‌ನಲ್ಲಿ ಬಹಳ ಸಕ್ರಿಯರಾಗಿರುವ ಪಂಟರ್‌ ಖ್ಯಾತಿಯ ಬಲಗೈ ಬ್ಯಾಟ್ಸ್‌ಮನ್‌ 2003ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಫೈನಲ್‌ನಲ್ಲಿ ಭಾರತ ವಿರುದ್ಧ ಬಳಸಿದ್ದ ಕೂಕ್ಕಾಬುರಾ ಬ್ಯಾಟ್‌ನ ಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ.

2011ರಲ್ಲಿ ಭಾರತ ತಂಡ ತನ್ನ ಎರಡನೇ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಗೆದ್ದು ಬೀಗಿದ್ದು ಅಭಿಮಾನಿಗಳಿಗೆ ಎಂದೆಂದಿಗೂ ವಿಶೇಷ. ಆದರೆ, 2003ರ ವಿಶ್ವಕಪ್‌ ಫೈನಲ್‌ನಲ್ಲಿ ಅನುಭವಿಸಿದ ಸೋಲು ಈಗಲೂ ಕೂಡ ಬೇಸರ ಉಕ್ಕಿಬರುವಂತೆ ಮಾಡುತ್ತದೆ. ಏಕೆಂದರೆ ಭಾರತೀಯ ಕ್ರಿಕೆಟ್‌ಗೆ ಹೊಸ ದಿಕ್ಕು ತೋರಿಸಿದ ತಂಡವದು. ಟೀಮ್‌ ಇಂಡಿಯಾ ವಿಶ್ವದ ಯಾವುದೇ ತಂಡವನ್ನು ಸೋಲಿಸುವ ಸಾಮರ್ಥ್ಯ ಹೊಂದಿದೆ ಎಂದು ಸೌರವ್‌ ಗಂಗೂಲಿ ಸಾರಥ್ಯದ ಭಾರತ ತಂಡ ಸಾಬೀತುಪಡಿಸಿತ್ತು. 2002ರ ಚಾಂಪಿಯನ್ಸ್‌ ಟ್ರೋಫಿಯಿಂದ ಹಿಡಿದು ಆಫ್ರಿಕಾದಲ್ಲಿ ನಡೆದ 2003ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಯಫೈನಲ್‌ ಪಂದ್ಯದ ವರೆಗೂ ಭಾರತ ತಂಡದ ಆಟ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತ್ತು.

ಆದರೆ ಫೈನಲ್ ಪಂದ್ಯದಲ್ಲಿ ಭಾರತ ತನ್ನ ನೈಜ ಆಟವನ್ನು ಪ್ರದರ್ಶಿಸಲೇ ಇಲ್ಲ. 17 ವರ್ಷಗಳ ಬಳಿಕ ಅಂದು ಆ ಪಂದ್ಯದಲ್ಲಿ ಶತಕ ಬಾರಿಸಲು ಬಳಸಿದ್ದ ಬ್ಯಾಟ್‌ನ ಫೋಟೊವನ್ನು ಪಾಂಟಿಂಗ್‌ ಹಂಚಿಕೊಂಡಿದ್ದಾರೆ. "ಎಲ್ಲರೂ ಮನೆಯಲ್ಲಿ ಉಳಿದಿರುವ ಸಂದರ್ಭದಲ್ಲಿ ಸಿಕ್ಕಿರುವ ಈ ಬಿಡುವಿನಲ್ಲಿ ನನ್ನ ವೃತ್ತಿ ಬದುಕಿನಲ್ಲಿ ಸಂಗ್ರಹಿಸಿಟ್ಟಿರುವ ಕೆಲ ವಿಶೇಷ ನೆನಪುಗಳನ್ನು ತೆರೆದಿದ್ದೇನೆ. ಇದನ್ನು ಒಂದೊಂದಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ಈ ಬ್ಯಾಟ್‌ ನಾನು 2003ರ ಒಡಿಐ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಬಳಸಿದ್ದೆ," ಎಂದು ಪಾಂಟಿಂಗ್‌ ಟ್ವೀಟ್‌ ಮಾಡಿದ್ದಾರೆ.

SCROLL FOR NEXT