ಸಂಗ್ರಹ ಚಿತ್ರ 
ಕ್ರಿಕೆಟ್

ಐಸಿಸಿ ರ್ಯಾಂಕಿಂಗ್: 2016ರಿಂದ ಮೊದಲ ಬಾರಿಗೆ ಅಗ್ರ ಸ್ಥಾನವನ್ನು ಕಳೆದುಕೊಂಡ ಭಾರತ, ಟೆಸ್ಟ್, ಟಿ-20 ಅಗ್ರ ಪಟ್ಟವೇರಿದ ಆಸ್ಟ್ರೇಲಿಯಾ

ಐಸಿಸಿ ಬಿಡುಗಡೆಗೊಳಿಸಿದ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಟೆಸ್ಟ್ ಮತ್ತು ಟಿ 20 ಐ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದ್ದು  ಏಕದಿನ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಮೊದಲ ಸ್ಥಾನ ಉಳಿಸಿಕೊಂಡಿದೆ. ಟೆಸ್ಟ್ ನಲ್ಲಿ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದ್ದು ಆಸ್ಟ್ರೇಲಿಯಾ (116) ಭಾರತದಿಂದ ಅಗ್ರ ಪಟ್ಟ ಕಸಿದುಕೊಂಡಿದೆ. ಇದರೊಡನೆ ಭಾರತ 2016ರ ನಂತರ ಮೊಟ್ಟ ಮೊದ

ದುಬೈ:ಐಸಿಸಿ ಬಿಡುಗಡೆಗೊಳಿಸಿದ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಟೆಸ್ಟ್ ಮತ್ತು ಟಿ 20 ಐ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದ್ದು  ಏಕದಿನ ಶ್ರೇಯಾಂಕದಲ್ಲಿ ಇಂಗ್ಲೆಂಡ್ ಮೊದಲ ಸ್ಥಾನ ಉಳಿಸಿಕೊಂಡಿದೆ. ಟೆಸ್ಟ್ ನಲ್ಲಿ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದ್ದು ಆಸ್ಟ್ರೇಲಿಯಾ (116) ಭಾರತದಿಂದ ಅಗ್ರ ಪಟ್ಟ ಕಸಿದುಕೊಂಡಿದೆ. ಇದರೊಡನೆ ಭಾರತ 2016ರ ನಂತರ ಮೊಟ್ಟ ಮೊದಲ ಬಾರಿಗೆ ಅಗ್ರಸ್ಥಾನ ವಂಚಿತವಾಗಿದೆ.

ಇನ್ನು ಶ್ರೇಯಾಂಕ ಪಟ್ಟಿಯಲ್ಲಿ  ನ್ಯೂಜಿಲೆಂಡ್ (115) ಎರಡನೇ ಸ್ಥಾನದಲ್ಲಿದೆ. ಭಾರತ ಈಗ 114 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಕೇವಲ ಎರಡು ಪಾಯಿಂಟ್‌ ವ್ಯತ್ಯಾಸದಿಂದ ಭಾರತ ಅಗ್ರಪಟ್ಟ ವಂಚಿತವಾಗಿದೆ. 2003 ರಲ್ಲಿ ಟೆಸ್ಟ್ ಶ್ರೇಯಾಂಕ ಪ್ರಾರಂಭಿಸಿದಂದಿನಿಂದ ಅಗ್ರ ಮೂರು ತಂಡಗಳು ಇಷ್ಟು ಕಡಿಮೆ ಅಂಕಗಳ ಅಂತರದಲ್ಲಿ ಸ್ಥಾನಗಳನ್ನು ಹಂಚಿಕೊಂಡಿವೆ. 

ಜನವರಿ 2016ರಲ್ಲಿ ಭಾರತ ಅಗ್ರಸ್ಥಾನ ಹೊಂದಿದ್ದಾಗಲೂ ಕೇವಲ ಒಂದೇ ಅಂಕಗಳ ಅಂತರದಲ್ಲಿ ಆಸ್ಟ್ರೇಲಿಯಾ ಎರಡನೇ ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದ್ದವು.

ಐಸಿಸಿ ಪುರುಷರ ಏಕದಿನ ತಂಡದ ಶ್ರೇಯಾಂಕದಲ್ಲಿ, ವಿಶ್ವ ಚಾಂಪಿಯನ್ ಇಂಗ್ಲೆಂಡ್ (127) ಭಾರತದ ವಿರುದ್ಧ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡಿದೆ.  ನ್ಯೂಜಿಲೆಂಡ್ ಮೂರನೇ ಸ್ಥಾನದಲ್ಲಿದೆ, 

2011 ರಲ್ಲಿ ಟಿ 20 ಐ ಶ್ರೇಯಾಂಕವನ್ನು ಪರಿಚಯಿಸಿದ ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ (278) ಅಗ್ರಸ್ಥಾನಲ್ಲೇರಿದ್ದು 268 ಪಾಯಿಂಟ್‌ಗಳೊಂದಿಗೆ ಇಂಗ್ಲೆಂಡ್ ಎರಡನೇಭಾರತ ಕೇವಲ ಎರಡು ಪಾಯಿಂಟ್‌ಗಳ ಹಿಂದಿದ್ದು ಮೂರನೇ ಸ್ಥಾನದಲ್ಲಿದೆ. ಪಾಕಿಸ್ತಾನ 260 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಟೆಸ್ಟ್​​ ರ್ಯಾಂಕಿಂಗ್
    ಆಸ್ಟ್ರೇಲಿಯಾ-116 ಅಂಕ
    ನ್ಯೂಜಿಲೆಂಡ್-115 ಅಂಕ
    ಭಾರತ-114 ಅಂಕ

ಏಕದಿನ ರ್ಯಾಂಕಿಂಗ್

    ಇಂಗ್ಲೆಂಡ್-127 ಅಂಕ
    ಭಾರತ-119 ಅಂಕ
    ನ್ಯೂಜಿಲೆಂಡ್-116 ಅಂಕ

ಟಿ-20 ರ್ಯಾಂಕಿಂಗ್

    ಆಸ್ಟ್ರೇಲಿಯಾ-278 ಅಂಕ
    ಇಂಗ್ಲೆಂಡ್-268 ಅಂಕ
    ಭಾರತ-266 ಅಂಕ
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT