ಕ್ರಿಕೆಟ್

ಕ್ರೀಡಾಂಗಣದಲ್ಲಿ ಅಭಿಮಾನಿಗಳಿಲ್ಲದೆ ಟೂರ್ನಿಗಳು ನಡೆಯಬಹುದು, ಆದರೆ ಮ್ಯಾಜಿಕ್ ಇರಲ್ಲ: ವಿರಾಟ್ ಕೊಹ್ಲಿ

Vishwanath S

ನವದೆಹಲಿ: ಕೋವಿಡ್-19 ನಂತರ ಜಗತ್ತಿನಲ್ಲಿ ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯುವ ಸಾಧ್ಯತೆಗಳು ಹೆಚ್ಚಿದ್ದು ಆಟಗಾರರ ಪ್ರದರ್ಶನಕ್ಕೆ ಅಡ್ಡಿಯಾಗದಿದ್ದರೂ ಅಭಿಮಾನಿಗಳಿಲ್ಲದ ಕಾರಣ ಮ್ಯಾಜಿಕ್ ಖಂಡಿತವಾಗಿಯೂ ಇರುವುದಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ. 

ಎಲ್ಲಾ ಕ್ರಿಕೆಟ್ ಮಂಡಳಿಗಳು ಖಾಲಿ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ಪುನರಾರಂಭಿಸುವ ಆಯ್ಕೆಯನ್ನು ಅನ್ವೇಷಿಸುತ್ತಿವೆ. ಕೊರೋನಾ ಮಹಾಮಾರಿ ಜಾಗತಿಕ ಆರೋಗ್ಯ ಬಿಕ್ಕಟ್ಟಾಗಿ ಪರಿಣಮಿಸಿದೆ. ಇನ್ನು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯನ್ನು ಜೀವಂತವಾಗಿರಿಸಬೇಕಾದರೆ ಖಾಲಿ ಕ್ರೀಡಾಂಗಣದಲ್ಲಿ ನಡೆಸಬೇಕಾಗಬಹುದು ಎಂದು ಹೇಳಿದ್ದಾರೆ. 

ಇದು ಸಾಕಷ್ಟು ಸಂಭವನೀಯ ಪರಿಸ್ಥಿತಿ, ಅದು ಸಂಭವಿಸಬಹುದು, ಪ್ರತಿಯೊಬ್ಬರೂ ಅದನ್ನು ಹೇಗೆ ತೆಗೆದುಕೊಳ್ಳಲಿದ್ದಾರೆಂದು ನನಗೆ ಪ್ರಾಮಾಣಿಕವಾಗಿ ತಿಳಿದಿಲ್ಲ, ಏಕೆಂದರೆ ನಾವೆಲ್ಲರೂ ಅನೇಕ ಭಾವೋದ್ರಿಕ್ತ ಅಭಿಮಾನಿಗಳ ಮುಂದೆ ಆಟವಾಡಲು ಬಯಸುತ್ತೇವೆ ಎಂದು ಕೊಹ್ಲಿ ಸ್ಟಾರ್ ಸ್ಪೋರ್ಟ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. 

ಅಭಿಮಾನಿಗಳು ಪ್ರೋತ್ಸಾಹದಿಂದ ಕ್ರೀಡಾಂಗಣದಲ್ಲಿ ಘಟಿಸಬಹುದಾದ ಹಲವು ಕ್ಷಣಗಳು ಕಾಣೆಯಾಗುತ್ತವೆ ಎಂದು ಕೊಹ್ಲಿ ಹೇಳಿದ್ದಾರೆ. 

SCROLL FOR NEXT