ಕ್ರಿಕೆಟ್

ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ದೊಡ್ಡಣನಂತೆ ನಿರ್ಧಾರ ಕೈಗೊಳ್ಳಬೇಕು: ಗೌತಮ್ ಗಂಭೀರ್

Vishwanath S

ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆಯಾಗಿರುವ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಯು ಮಹಾಮಾರಿ ಕೊರೋನಾ ವಿರುದ್ಧದ ಹೋರಾಟದಲ್ಲಿ ದೊಡ್ಡಣ್ಣನ ಪಾತ್ರವನ್ನು ನಿರ್ವಹಿಸುವ ಅಗತ್ಯವಿದೆ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಕ್ರಿಕೆಟ್ ಸಂಪರ್ಕಿತ ಕಾರ್ಯಕ್ರಮದಲ್ಲಿ ಮಾತನಾಡಿದ ಗಂಭೀರ್, ಆಸ್ಟ್ರೇಲಿಯಾ ಪ್ರವಾಸದ ವೇಳೆ ಟೀಂ ಇಂಡಿಯಾ ಕ್ಯಾರೆಂಟೈನ್ಗೆ ಹೋಗಲು ಬಿಸಿಸಿಐ ಇಚ್ಛಿಸಿರುವ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಬಿಸಿಸಿಐ ಇಚ್ಛೆ ಒಳ್ಳೆಯದು. ಅದ್ಭುತವಾಗಿದೆ. ಇದು ತುಂಬಾ ಸಕಾರಾತ್ಮಕ ಸಂಕೇತವಾಗಿದೆ. ಅವರು ಬಹುಶಃ ದೊಡ್ಡದ್ದನ್ನೆ ಯೋಜಿಸಿದ್ದಾರೆ. ಇದು ದೇಶದ ಮನಸ್ಥಿತಿಯನ್ನು ಬದಲಾಯಿಸುತ್ತದೆ. ಸರಣಿ ಗೆಲ್ಲುವುದು ವಿಭಿನ್ನ ವಿಷಯ, ಆದರೆ ಆಡುವ ಇಚ್ಛೆ ಇದು ಬಹಳ ಮುಖ್ಯ. ಅದು ಬಹುಶಃ ಎರಡೂ ದೇಶಗಳ ಮನಸ್ಥಿತಿಯನ್ನು ಬದಲಾಯಿಸತ್ತದೆ ಎಂದು ಗಂಭೀರ್ ಹೇಳಿದರು.

ಬಿಸಿಸಿಐ ಜಗತ್ತಿನ ಶ್ರೀಮಂತರ ಕ್ರಿಕೆಟ್ ಮಂಡಳಿ ಆಗಿರುವುದರಿಂದ ದೊಡ್ಡಣ್ಣನ ರೀತಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಭಾರತ ತಂಡ ಆಸ್ಟ್ರೇಲಿಯಾಕ್ಕೆ ತೆರಳಿದರೆ, ನನಗೆ ಬಿಸಿಸಿಐ ಬಗ್ಗೆ ಇನ್ನಷ್ಟು ಗೌರವ ಹೆಚ್ಚಾಗಲಿದೆ ಎಂದರು.

ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಅವರು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಮತ್ತು ದಿ ಏಜ್ ಜೊತೆ ಮಾತನಾಡುವಾಗ ಆಸ್ಟ್ರೇಲಿಯಾ ನೆಲದಲ್ಲಿ ಇಳಿದ ನಂತರ ಎರಡು ವಾರ ಕ್ವಾರಂಟೈನ್ ನಲ್ಲಿದ್ದು ಸಹಜ ಸ್ಥಿತಿಗೆ ಮರಳಿದ ನಂತರ ಟೂರ್ನಿ ಆರಂಭಿಸುವುದು ದೊಡ್ಡ ವಿಷಯವಲ್ಲ ಎಂದು ಹೇಳಿದ್ದರು. 

SCROLL FOR NEXT