ಕ್ರಿಕೆಟ್

'ಈಡಿಯಟ್' ಎಂದು ಕರೆದಿದ್ದ ರೋಹಿತ್‌ ಶರ್ಮಾಗೆ ಶಿಖರ್ ಧವನ್ ತಿರುಗೇಟು

Lingaraj Badiger

ನವದೆಹಲಿ: ಟೀಮ್ ಇಂಡಿಯಾದ ಸ್ಟಾರ್‌ ಓಪನರ್‌ ರೋಹಿತ್‌ ಶರ್ಮಾ ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಮ್‌ ಲೈವ್‌ ಚಾಟ್‌ನಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್‌ ಡೇವಿಡ್‌ ವಾರ್ನರ್‌ ಎದುರು 'ಶಿಖರ್‌ ಧವನ್‌ ಒಬ್ಬ ಈಡಿಯಟ್,‌ ಇನಿಂಗ್ಸ್‌ ಆರಂಭಿಸಿದಾಗ ವೇಗಿಗಳ ಎದುರು ಮೊದಲ ಎಸೆತವನ್ನು ಎದುರಿಸಲು ಹೆದರುತ್ತಾರೆ' ಎಂದು ಹೇಳಿದ್ದರು.

ಇದಕ್ಕೆ ಕೊಂಚ ತಡವಾಗಿಯಾದರೂ 'ಗಬ್ಬರ್‌' ಖ್ಯಾತಿಯ ಎಡಗೈ ಬ್ಯಾಟ್ಸ್‌ಮನ್‌ ದಿಟ್ಟ ಉತ್ತರ ಕೊಟ್ಟಿದ್ದಾರೆ. ಕಳೆದ 8 ವರ್ಷಗಳಿಂದ ಭಾರತ ತಂಡದ ಪರ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಆಡುತ್ತಿದ್ದೇನೆ ವೇಗದ ಬೌಲರ್‌ಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಅಂದಹಾಗೆ ಟೀಮ್‌ ಇಂಡಿಯಾದಲ್ಲಿ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿ ರೋಹಿತ್‌ ಮತ್ತು ವಾರ್ನರ್‌ ಇಬ್ಬರೂ ಕೂಡ ಧವನ್‌ ಜೊತೆಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಆಡಿದ ಅನುಭವ ಹೊಂದಿದ್ದಾರೆ. ಆದ್ದರಿಂದಲೇ ಧವನ್‌ ವೇಗಿಗಳ ಎದುರು ಮೊದಲ ಎಸೆತ ಎದುರಿಸಲು ಹೆದರುತ್ತಾರೆ ಎಂದು ತಮಾಶೆ ಮಾಡಿದ್ದರು.

"ಹರ್ಭಜನ್‌ ಸಿಂಗ್‌ ಮೊದಲ ಓವರ್‌ ಬೌಲಿಂಗ್‌ ಮಾಡಿದಾಗ ಮಾತ್ರ ಧವನ್‌ ಮೊದಲು ಸ್ಟ್ರೈಕ್‌ ತೆಗೆದುಕೊಂಡರು. ಒಂದು ವೇಳೆ ಎಡಗೈ ವೇಗದ ಬೌಲರ್‌ ಬೌಲಿಂಗ್‌ಗೆ ನಿಂತಿದ್ದರೆ ನೀವೇ ಸ್ಟ್ರೈಕ್‌ ತೆಗೆದುಕೊಳ್ಳಿ ಎಂದು ಹೇಳುತ್ತಾರೆ. ಒಳಹೊಕ್ಕುವ ಎಸೆತ ನನಗೆ ಬೇಡ ಎನ್ನುತ್ತಾರೆ," ಎಂದು ವಾರ್ನರ್‌ ಹೇಳಿದ್ದರು. 

ಇದಕ್ಕೆ ಪ್ರತ್ಯುತ್ತರ ನೀಡಿದ್ದ ರೋಹಿತ್‌, "ಅವನೊಬ್ಬ ಈಡಿಯಟ್, ಇನ್ನೇನನ್ನು ಹೇಳಲಿ. ಮೊದಲ ಎಸೆತವನ್ನು ಎದುರಿಸುವುದು ಅವನಿಗೆ ಇಷ್ಟವಿಲ್ಲ. ಸ್ಪಿನ್ನರ್‌ಗಳ ಎದುರು ಬ್ಯಾಟ್‌ ಮಾಡಲು ಬಯಸುತ್ತಾರೆ. ಆದರೆ ವೇಗದ ಬೌಲರ್‌ಗಳನ್ನು ಎದುರಿಸುವುದು ಇಷ್ಟವಿಲ್ಲ," ಎಂದಿದ್ದರು.

SCROLL FOR NEXT