ಕ್ರಿಕೆಟ್

2009ರ ಐಪಿಎಲ್:ವೇಳೆ ಶೇನ್ ವಾರ್ನ್ ನನ್ನನ್ನು 'ಮೂರ್ಖನನ್ನಾಗಿಸಿದ್ದರು: ವಿರಾಟ್ ಕೊಹ್ಲಿ

Raghavendra Adiga

ನವದೆಹಲಿ: 2009 ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಸಂದರ್ಭದಲ್ಲಿ ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್ ತನ್ನನ್ನು ಮೂರ್ಖನನ್ನಾಗಿಸಿದ್ದರು ಎಂದು ಟೀಂ ಇಂಡಿಯಾ ನಾಯಕ  ವಿರಾಟ್ ಕೊಹ್ಲಿ ಹೇಳಿದ್ದಾರೆ

ಭಾರತದ ಫುಟ್ಬಾಲ್ ತಂಡದ ನಾಯಕ ಸುನಿಲ್.ಚೆಟ್ರಿ ಯೊಂದಿಗೆ ಕೊಹ್ಲಿ ಇನ್ಸ್ಟಾಗ್ರಾಮ್ ಲೈವ್ ಸೆಷನ್ ಮಾಡುತ್ತಿದ್ದು ಚಾಟ್ ಸಮಯದಲ್ಲಿ ಕೊಹ್ಲಿಯೊಂದಿಗೆ ಚೆಟ್ರಿ ಕೊಹ್ಲಿಯೊಡನೆ ಫಾಸ್ಟ್ ಫೈರಿಂಗ್ ಸುತ್ತಿನ ಪ್ರಶ್ನೆ ಕೇಳಿದ್ದಾರೆ. "ನಿಮಗೆ ಲಾಸ್ಟ್  ಬಾಲಿನಲ್ಲಿ ಮೂರು ರನ್ನುಗಳು ಬೇಕಾಗಿದೆ, ನೀವು ಬೌಲರ್ ಅನ್ನು ಆಯ್ಕೆ ಮಾಡಬಹುದು, ನಾನು ನಿಮಗೆ ಎರಡು ಆಯ್ಕೆಗಳನ್ನು ನೀಡುತ್ತಿದ್ದೇನೆ - ಶೇನ್ ವಾರ್ನ್ ಅಥವಾ ವಕಾರ್ ಯೂನಿಸ್?""

ಇದಕ್ಕೆ ಉತ್ತರಿಸಿದ ಕೊಹ್ಲಿ  "ಮೊದಲನೆಯದಾಗಿ ಶೇನ್ ವಾರ್ನ್ ಡೆತ್ ಓವರ್‌ಗಳಲ್ಲಿ ಅಷ್ಟೇನೂ ಬೌಲ್ ಮಾಡಲಿಲ್ಲ ಮತ್ತು ಎರಡನೆಯದಾಗಿ ವಕಾರ್ ಯೂನಿಸ್ ಎಸೆದ ಯಾರ್ಕರ್‌ಗಳನ್ನು ಸ್ಕೋರ್ ಮಾಡುವ ನನ್ನ ಸಾಮರ್ಥ್ಯವನ್ನು ನಾನು ನಂಬುತ್ತೇನೆ.

"ಶೇನ್ ವಾರ್ನ್ 2009 ರಲ್ಲಿ ಐಪಿಎಲ್ ಸಮಯದಲ್ಲಿ ನನ್ನನ್ನು ಮೂರ್ಖನನ್ನಾಗಿ ಮಾಡಿದ್ದರು. ನಾನು ಅವರನ್ನು 2011 ರಲ್ಲಿ ರಾಜಾಸ್ಥಾನದೆದುರು ಮತ್ತೆ ಸಂಧಿಸಿದ್ದೆ. ಅಲ್ಲಿ ಗಮನಾರ್ಹವಾದ ಏನೂ ಸಂಭವಿಸಿಲ್ಲ. ಅವರು ನನ್ನನ್ನು ಹೊರಹಾಕಲಿಲ್ಲ, ನಾನು ಅವನ ವಿರುದ್ಧ ಹೆಚ್ಚು ರನ್ ಗಳಿಸಲಿಲ್ಲ. ಪಂದ್ಯದ ನಂತರ ಅವರು ಬಂದು ನನಗೆ ಮತ್ತು ಬೌಲರ್ ಗಳಿಗೆ ಏನನ್ನೂ ಹೇಳುವುದಿಲ್ಲ ಎಂದಿದ್ದರು.  ಆದರೆ ಈ ಬಗ್ಗೆ ನಾನೇನೂ ಅವರನ್ನು ಕೇಳಿರಲಿಲ್ಲ" ಎಂದಿದ್ದಾರೆ/

ಇದೇ ವೇಳೆ ಕೊಹ್ಲಿ  ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಂಟಿ ರೋಡ್ಸ್ ಅವರನ್ನು ಟೀಂ ಹಿಂದುಳಿದಾಗ  ಅತ್ಯುತ್ತಮ ಫೀಲ್ಡರ್ ಎಂದು ಕರೆದಿದ್ದಾರೆ.

ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ನಡುವಿನ ಹೋಲಿಕೆಗಳು ಹೆಚ್ಚುತ್ತಲೇ ಇದ್ದು ತೆಂಡೂಲ್ಕರ್ ಸ್ಥಾಪಿಸಿದ ದಾಖಲೆಗಳನ್ನು ಮುರಿಯಲು ಅನೇಕರು ಕೊಹ್ಲಿ ಸಮರ್ಥರಾಗಿದ್ದಾರೆ ಎನ್ನುತ್ತಿದ್ದಾರೆ. ಪ್ರಸ್ತುತ, ಕೊಹ್ಲಿ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿದ್ದರೆ, ಟೆಸ್ಟ್ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
 

SCROLL FOR NEXT