ಕ್ರಿಕೆಟ್

ಪಾಕಿಸ್ತಾನಿ ಮಾಜಿ ಕ್ರಿಕೆಟರ್ ಗೆ ಕೊರೋನಾ ಸೋಂಕು

Srinivas Rao BV

ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತೌಫಿಕ್ ಉಮರ್ ಅವರಿಗೆ ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿದೆ. ಜ್ವರದಿಂದಾಗಿ ಭಾನುವಾರ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ನಡೆಸಲಾದ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ.

ಇದರೊಂದಿಗೆ ಮಜೀದ್ ಹಕ್ (ಸ್ಕಾಟ್ಲೆಂಡ್), ಜಾಫರ್ ಸರ್ಫರಾಜ್ (ಪಾಕಿಸ್ತಾನ) ಮತ್ತು ಸೊಲೊ ಎಂಕಿ (ದಕ್ಷಿಣ ಆಫ್ರಿಕಾ) ನಂತರ ಕೋವಿಡ್ -19 ಸೋಂಕಿಗೆ ಒಳಗಾದ ನಾಲ್ಕನೇ ಕ್ರಿಕೆಟಿಗರಾಗಿದ್ದಾರೆ. "ಕಳೆದ ರಾತ್ರಿ ನಡೆಸಿದ ಪರೀಕ್ಷೆಯಲ್ಲಿ ನನಗೆ ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದೆ. ನನ್ನಲ್ಲಿ ವೈರಸ್ ಲಕ್ಷಣಗಳು ಅಷ್ಟೊಂದು ತೀವ್ರವಾಗಿಲ್ಲ. 

ಹಾಗಾಗಿ ನನ್ನ ಮನೆಯಲ್ಲಿ ಐಸೋಲೇಷನ್ ನಲ್ಲಿದ್ದೇನೆ. ನನ್ನ ಆರೋಗ್ಯ ತ್ವರಿತವಾಗಿ ಸುಧಾರಿಸಲಿ ಎಂದ ಎಲ್ಲರೂ ಪ್ರಾರ್ಥಿಸಬೇಕು ಎಂದು ಜಿಯೋ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಉಮರ್ ಹೇಳಿದ್ದಾರೆ. ಉಮರ್ 2001 ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಪ್ರವೇಶಿಸಿದ ಉಮರ್, ಈವರೆಗೆ 44 ಟೆಸ್ಟ್ ಪಂದ್ಯ ಆಡಿದ್ದಾರೆ. ಆದರೆ, 2006 ರಿಂದ 2010 ರವರೆಗೆ ತಂಡದಲ್ಲಿ ಸ್ಥಾನಕಲ್ಪಿಸಿರಲಿಲ್ಲ ಉಮರ್ ಏಕದಿನ ಕ್ರಿಕೆಟ್ ನಲ್ಲಿ ಉತ್ತಮ ಸಾಧನೆ ಮಾಡಲಿಲ್ಲ. 2014 ರಲ್ಲಿ ಅವರು ತಮ್ಮ ಕೊನೆಯ ಅಂತರರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

SCROLL FOR NEXT