ಕ್ರಿಕೆಟ್

ಭಾರತಕ್ಕಾಗಿ ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಲು ಸಿದ್ಧ ಎಂದ ಹರ್ಭಜನ್ ಸಿಂಗ್

Vishwanath S

ಬೆಂಗಳೂರು: ತಾವು ಇನ್ನೂ ಫಿಟ್ ಆಗಿದ್ದು, ಭಾರತಕ್ಕಾಗಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಆಡಲು ಸಿದ್ಧರಿರುವುದಾಗಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದ್ದಾರೆ.

2016ರಲ್ಲಿ ಕೊನೆಯ ಬಾರಿ ಭಾರತ ತಂಡದ ಪರ ಆಡಿರುವ ಆಫ್ ಸ್ಪಿನ್ನರ್, ಏಷ್ಯಾ ಕಪ್ ನಲ್ಲಿ ಟಿ20 (ಅಂತಾರಾಷ್ಟ್ರೀಯ) ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.

ನಾನು ಸಿದ್ಧ. ಐಪಿಎಲ್ ನಲ್ಲಿ ನಾನು ಉತ್ತಮವಾಗಿ ಬೌಲಿಂಗ್ ಮಾಡಲು ಸಾಧ್ಯವಾದರೆ, ಬೌಲರ್ ಗಳಿಗೆ ಇದು ತುಂಬಾ ಕಷ್ಟಕರವಾದ ಟೂರ್ನಿಯಾಗಿದೆ. ಏಕೆಂದರೆ ಮೈದಾನಗಳು ಚಿಕ್ಕದಾಗಿವೆ ಮತ್ತು ವಿಶ್ವ ಕ್ರಿಕೆಟ್ ನ ಎಲ್ಲ ಉನ್ನತ ಆಟಗಾರರು ಐಪಿಎಲ್ ನಲ್ಲಿ ಆಡುತ್ತಿರುತ್ತಾರೆ ಎಂದು ಇಎಸ್ ಪಿಎನ್ ಕ್ರಿಕ್ ಇನ್ಫೋ  ಹರ್ಭಜನ್ ಅವರ ಹೇಳಿಕೆಯನ್ನು ಉಲ್ಲೇಖಿಸಿದೆ.

ವಿಶ್ವ ದರ್ಜೆಯ ಆಟಗಾರರ ವಿರುದ್ಧ ಬೌಲಿಂಗ್ ಮಾಡುವುದು ತುಂಬಾ ಸವಾಲಿನ ಸಂಗತಿ ಮತ್ತು ಐಪಿಎಲ್ ನಲ್ಲಿ ನೀವು ಅವರ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸಬಹುದಾದರೆ, ನೀವು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಉತ್ತಮ ಸಾಧನೆ ಮಾಡಬಹುದು. ನಾನು ಪವರ್ ಪ್ಲೇ ಮತ್ತು ಮಿಡಲ್ ಓವರ್ ಗಳಲ್ಲಿ ಪ್ರಧಾನವಾಗಿ ಬೌಲಿಂಗ್ ಮಾಡಿದ್ದೇನೆ ಮತ್ತು ವಿಕೆಟ್ ಪಡೆದಿದ್ದೇನೆ ಎಂದು ಅವರು ಹೇಳಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ತಂಡಗಳನ್ನು ಪ್ರತಿನಿಧಿಸಿದ್ದಾರೆ.

SCROLL FOR NEXT