ಕ್ರಿಕೆಟ್

ಅತಿ ಹೆಚ್ಚು ಸಂಭಾವನೆ ಪಡೆಯುವ ಫೋರ್ಬ್ಸ್ 100 ಅಥ್ಲೀಟ್ ಗಳ ಪಟ್ಟಿಯಲ್ಲಿ ಏಕೈಕ ಭಾರತೀಯ ವಿರಾಟ್ ಕೊಹ್ಲಿ

Lingaraj Badiger

ಮುಂಬೈ: ವಿಶ್ವದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ 100 ಕ್ರೀಡಾಪಟುಗಳ 2020ನೇ ಸಾಲಿನ ಫೋರ್ಬ್ಸ್ ಪಟ್ಟಿ ಬಿಡುಗಡೆಯಾಗಿದ್ದು, ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಆಟಗಾರ ಎಂಬ ಕೀರ್ತಿಗೆ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಅವರು ಭಾಜನರಾಗಿದ್ದಾರೆ.

ವಿರಾಟ್ ಕೊಹ್ಲಿ ಅವರು ಕಳೆದ ಮೂರು ವರ್ಷಗಳಿಂದ ಫೋರ್ಬ್ಸ್ 100 ನೂರರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಿದ್ದಾರೆ. 
2018ರಲ್ಲಿ 83 ಹಾಗೂ 2019ರಲ್ಲಿ ನೂರನೇ ಸ್ಥಾನದಲ್ಲಿದ್ದ ಕೊಹ್ಲಿ ಈ ವರ್ಷ ಭಾರಿ ಏರಿಕೆ ಕಂಡಿದ್ದಾರೆ. ಈ ವರ್ಷ ಕೊಹ್ಲಿ ಫೋರ್ಬ್ಸ್ ಅಗ್ರ ನೂರರ ಪಟ್ಟಿಯಲ್ಲಿ 66ನೇ ಸ್ಥಾನದಲ್ಲಿದ್ದಾರೆ.

ವಿರಾಟ್ ಕೊಹ್ಲಿ ಅವರು ಜಾಹೀರಾತುಗಳಿಂದ 24 ದಶಲಕ್ಷ  ಅಮೆರಿಕನ್ ಡಾಲರ್ ಹಾಗೂ ವೇತನ ಮತ್ತು ಪಂದ್ಯದ ಪ್ರಶಸ್ತಿಗಳಿಂದ 2 ದಶಲಕ್ಷ ಡಾಲರ್‌ ಸೇರಿದಂತೆ ಒಟ್ಟು 26 ದಶಲಕ್ಷ ಡಾಲರ್‌ ಆದಾಯವನ್ನು ಕಳೆದ 12 ತಿಂಗಳಿಂದ ಗಳಿಸಿದ್ದಾರೆ.

ಈ ಬಾರಿ 100 ಕ್ರೀಡಾಪಟುಗಳ ಫೋರ್ಬ್ಸ್ ಪಟ್ಟಿಯಲ್ಲಿ ಸ್ವಿಸ್ ಟೆನ್ನಿಸ್ ದಿಗ್ಗಜ ರೋಜರ್ ಫೆಡರರ್ ಮೊದಲ ಸ್ಥಾನ ಪಡೆದಿದ್ದು, ಕ್ರಿಸ್ಟಿಯಾನೊ ರೊನಾಲ್ಡೊ ಅವರು ಎರಡನೇ ಸ್ಥಾನದಲ್ಲಿದ್ದಾರೆ.

SCROLL FOR NEXT