ರೋಹಿತ್ ಶರ್ಮಾ 
ಕ್ರಿಕೆಟ್

ರೋಹಿತ್ ಶರ್ಮಾಗೆ ಗಾಯ: ಬಿಸಿಸಿಐ ಪಾರದರ್ಶಕತೆಯ ಕೊರತೆ ಬಹಿರಂಗ

ಐಪಿಎಲ್ ನಲ್ಲಿ  ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ  ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ  ಗಾಯದ ಸಮಸ್ಯೆ  ಬಗ್ಗೆ ಈಗಾಗಲೇ ಭಾರಿ ಚರ್ಚೆ ಶುರುವಾಗಿದೆ.

ನವದೆಹಲಿ: ಐಪಿಎಲ್ ನಲ್ಲಿ  ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ  ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ  ಗಾಯದ ಸಮಸ್ಯೆ  ಬಗ್ಗೆ ಈಗಾಗಲೇ ಭಾರಿ ಚರ್ಚೆ ಶುರುವಾಗಿದೆ. ಗಾಯದಿಂದಾಗಿಯೇ ಈ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಎಲ್ಲಾ ಮೂರು ಮಾದರಿಯ ಪಂದ್ಯಗಳಿಂದ ರೋಹಿತ್ ಶರ್ಮಾರನ್ನು ರಾಷ್ಟ್ರೀಯ ಆಯ್ಕೆದಾರರು ನಿರ್ಲಕ್ಷಿಸಿದ್ದಾರೆ.

ರೋಹಿತ್ ಶರ್ಮಾ ಅವರನ್ನು ಏಕೆ ಟೆಸ್ಟ್, ಏಕದಿನ ಮತ್ತು ಟಿ-20 ಪಂದ್ಯಗಳಿಂದ ರೋಹಿತ್ ಶರ್ಮಾ ಅವರನ್ನು ಏಕೆ ಹೊರಗಿಡಲಾಗಿದೆ ಎಂಬುದರ ಬಗ್ಗೆ ಬಿಸಿಸಿಐ ಇಲ್ಲಿಯವರೆಗೂ ವಿವರಿಸಿಲ್ಲ. ತಂಡ ಆಯ್ಕೆ ಬಗ್ಗೆ ಯಾವುದೇ ಬಿಸಿಸಿಐ ಅಧಿಕಾರಿಗಳು ಮಾಧ್ಯಮಗಳೊಂದಿಗೆ ಮಾತನಾಡಿಲ್ಲ.

ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಅವರ ಗಾಯದ ಬಗ್ಗೆ ಬಿಸಿಸಿಐ ವೈದ್ಯಕೀಯ ತಂಡ ನಿಗಾ ವಹಿಸಲಿದೆ ಎಂದು ಅಕ್ಟೋಬರ್ 26 ರಂದು ಬಿಸಿಸಿಐ ಹೇಳಿಕೆ ನೀಡಿತ್ತು. ಇಬ್ಬರು ಆಟಗಾರರಿಗೆ ಯಾವ ರೀತಿಯ ಗಾಯಗಳಾಗಿವೆ ಎಂಬುದನ್ನು ಸ್ಪಷ್ಪಪಡಿಸಿಲ್ಲ.  ಅಲ್ಲದೇ ಗಾಯ ಎಂಬ ಪದವನ್ನೂ ಕೂಡಾ ಉಲ್ಲೇಖಿಸಿಲ್ಲ.  ಇದು ಬಿಸಿಸಿಐನ ಪಾರದರ್ಶಕತೆಯ ಕೊರೆತೆಯಾಗಿದೆ. ಮುಂಬೈ ಇಂಡಿಯನ್ಸ್  ತಂಡದ ನಾಯಕನೊಂದಿಗೆ ಸಂವಹನ ನಡೆಸಿಲ್ಲ, ಇದು ಇದೀಗ ಎಲ್ಲರನ್ನು ಮುಜುಗರಕ್ಕೆ ತಳ್ಳಿದ್ದು, ಏನು ನಡೆದಿದೆ ಎಂಬುದು ಸ್ಪಷ್ಟವಾಗಿ ಕಂಡುಬರುತ್ತಿದೆ.

ಮಂಗಳವಾರ ನಡೆದ ಪಂದ್ಯದ ನಂತರ ಮಾತನಾಡಿದ ರೋಹಿತ್ ಶರ್ಮಾ, ತಾನು ಚೆನ್ನಾಗಿದ್ದು, ಇಲ್ಲಿ ಇನ್ನೊಂದಿಷ್ಟು ಪಂದ್ಯವನ್ನಾಡಲು ಎದುರು ನೋಡುತ್ತಿದ್ದೇನೆ. ಏನಾಗುತ್ತದೆಯೋ ಎಂಬುದನ್ನು ನೋಡೋಣ ಎಂದು ಹೇಳಿದ್ದರು. ಅದೇ ದಿನ ಗಾಯದ ಸಮಸ್ಯೆಯಿಂದ ರೋಹಿತ್ ಶರ್ಮಾ ಅವರನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಲಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ  ಹೇಳಿರುವುದಾಗಿ ಕೆಲ ಮಾಧ್ಯಮಗಳು ವರದಿ ಮಾಡಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT