ವಿರೇಂದ್ರ ಸೆಹ್ವಾಗ್ 
ಕ್ರಿಕೆಟ್

ಬೆಂಗಳೂರಿನಲ್ಲಿ ನಡೆದ ಭಾರತ-ಪಾಕಿಸ್ತಾನ ಪಂದ್ಯದ ಘಟನೆಯೊಂದನ್ನು ನೆನೆದ ವಿರೇಂದ್ರ ಸೆಹ್ವಾಗ್‌

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿನ ವಿಶೇಷ ಅನುಭವವೊಂದನ್ನು ಟೀಮ್‌ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಿರೇಂದ್ರ ಸೆಹ್ವಾಗ್‌ ಹಂಚಿಕೊಂಡಿದ್ದಾರೆ. 

ನವದೆಹಲಿ: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿನ ವಿಶೇಷ ಅನುಭವವೊಂದನ್ನು ಟೀಮ್‌ ಇಂಡಿಯಾ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಿರೇಂದ್ರ ಸೆಹ್ವಾಗ್‌ ಹಂಚಿಕೊಂಡಿದ್ದಾರೆ. 

ದಿಲ್ಲಿ ಮೂಲದ ವಿರೇಂದ್ರ ಸೆಹ್ವಾಗ್‌ ತಮ್ಮ ಕ್ರಿಕೆಟ್‌ ದಿನಗಳಲ್ಲಿ ವಿಶ್ವದ ಶ್ರೇಷ್ಠ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದರು. ಎದುರಾಳಿ ಬೌಲರ್‌ಗಳು ಯಾರೇ ಇದ್ದರೂ ಅವರಿಗೆ ಮೂಲಜಿಲ್ಲದೆ ಸಿಕ್ಸರ್‌ ಹಾಗೂ ಬೌಂಡರಿಗಳನ್ನು ಸಿಡಿಸುವ ಮೂಲಕ ಬೆವರಿಳಿಸುತ್ತಿದ್ದರು. ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕವೂ ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ. 

ಬ್ಯಾಟಿಂಗ್‌ ಫಾರ್ಮ್‌ ಅನ್ನು ಉಳಿಸಿಕೊಳ್ಳಲು ವಿಭಿನ್ನ ಹಾಡುಗಳನ್ನು ಹಾಡುತ್ತಿದ್ದ ಬಗ್ಗೆ ಕ್ರಿಕ್‌ಬಝ್‌ ಚಾಟ್‌ ಶೋ ಜತೆ ಸೆಹ್ವಾಗ್‌ ಹೇಳಿಕೊಂಡಿದ್ದಾರೆ. ಸಂಗೀತ ದಿಗ್ಗಜ ಕಿಶೋರ್‌ ಕುಮಾರ್‌ ಹಾಡಿರುವ 'ಚಲಾ ಜಾತ ಹೂ' ಸೆಹ್ವಾಗ್‌ ಅವರ ನೆಚ್ಚಿನ ಗೀತೆಯಾಗಿದೆ. ಹಲವು ಬಾಲಿವುಡ್‌ ಗೀತೆಗಳನ್ನು ಹಾಡಿರುವ ಬಗ್ಗೆಯೂ ಮಾಜಿ ಸ್ಪೋಟಕ ಬ್ಯಾಟ್ಸ್‌ಮನ್‌ ತಿಳಿಸಿದ್ದಾರೆ. 

ಕ್ರಿಕ್‌ಬಝ್‌ಲೈವ್‌ನಲ್ಲಿ ಮಾತನಾಡುತ್ತಾ, "ಬ್ಯಾಟಿಂಗ್‌ ಮಾಡುವಾಗ ತುಂಬಾ ಹಾಡುಗಳನ್ನು ಹಾಡುತ್ತಿದ್ದೆ. ಆದರೆ, 'ಚಲಾ ಜಾತ ಹೂ ಕಿಸಿ ಕೆ ಧಮ್‌ ಮೇ, ಧಡಕ್ತೆ ದಿಲ್‌ ಕೆ, ತರಾನೆ ಲಿ' ಇದು ನನ್ನ ನೆಚ್ಚಿನ ಗೀತೆಯಾಗಿದೆ. ಏಕೆಂದರೆ, ಯಾಕೆಂದರೆ ಇದು ನಾನು ಯಾವುದೇ ಮನಸ್ಥಿತಿಯನ್ನು ಲೆಕ್ಕಿಸದೆ ಹಾಡಬಲ್ಲ ಒಂದು ಹಾಡು ಮತ್ತು ಅದು ನನ್ನ ಮನಸ್ಥಿತಿಯನ್ನು ಎತ್ತಿ ಹಿಡಿಯುತ್ತದೆ," ಎಂದು ಹೇಳಿದ್ದಾರೆ. 

"ಕೆಲವೊಮ್ಮೆ ಹೆಚ್ಚಿನ ರನ್‌ಗಳನ್ನು ಗಳಿಸುತ್ತಿದ್ದರೆ, 'ಚಿಟ್ಟಿಯನ್‌ಕಲೈಯಾನ್‌' ಸೇರಿದಂತೆ ಕೆಲ ಬಾಲಿವುಡ್‌ ಗೀತೆಗಳನ್ನೂ ಹಾಡುತ್ತಿರುತ್ತೇನೆ. ಒಂದು ವೇಳೆ ರನ್‌ ಗಳಿಸಲು ಸಾಧ್ಯವಾಗದೇ ಇದ್ದಾಗ 'ಭಗವಾನ್‌ ಕೆ ಭಜನ್‌' ಗೀತೆಯನ್ನು ನೆನಪಿಸಿಕೊಳ್ಳುತ್ತೇನೆ," ಎಂದು ತಿಳಿಸಿದರು.
 
ಬ್ಯಾಟಿಂಗ್‌ ವೇಳೆ ಯಾವುದಾದರೂ ಸನ್ನಿವೇಶವನ್ನು ನೆನಪಿಸಿಕೊಳ್ಳಲು ಬಯಸುತ್ತೀರಾ ಎಂದು ಕಾರ್ಯಕ್ರಮದ ಅರ್ಜುನ್‌ ಪಂಡಿತ್‌ ಕೇಳಿದ ಪ್ರಶ್ನೆಗೆ ಉತ್ತರಿಸಿ, ಪಾಕಿಸ್ತಾನದ ವಿರುದ್ಧ ಬೆಂಗಳೂರಿನಲ್ಲಿ ಶತಕ ಸಿಡಿಸಿದಾಗ 'ನವಾಬ್‌ ಆಫ್‌ ನಜಫ್‌ಗರ್‌' ಹಾಡು ಹೇಳಿದ್ದನ್ನು ವೀರು ಸ್ಮರಿಸಿಕೊಂಡರು. 

"ನಾನು ಕ್ರಿಕೆಟ್‌ ಆಡುವಾಗ ಹಾಡು ಹಾಡುತ್ತೇನೆ ಎಂಬ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಬೆಂಗಳೂರಿನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ 150 ರನ್‌ಗಳನ್ನು ಗಳಿಸಿದ ಬಳಿಕ ಈ ಘಟನೆ ನಡೆಯಿತು. ಶಾರ್ಟ್ ಲೆಗ್‌ನಲ್ಲಿ ನಿಂತಿದ್ದ ಯಾಸೀರ್ ಹಮೀದ್‌, 'ವೀರು ಭಾಯ್‌ ನೀವು ಬ್ಯಾಟಿಂಗ್‌ ವೇಳೆ ಚೆನ್ನಾಗಿ ಹಾಡು ಹಾಡುತ್ತೀರಿ, ಹೌದು, ಹಾಡುತ್ತೇನೆ.; ಆಗ ಅವರು ಕಿಶೋರ್‌ ಕುಮಾರ್‌ ಹಾಡು ಹಾಡುವಂತೆ ಮನವಿ ಮಾಡಿದ್ದರು," ಎಂಬುದನ್ನು ವಿರೇಂದ್ರ ಸೆಹ್ವಾಗ್‌ ಬಹಿರಂಗಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!