ಕ್ರಿಕೆಟ್

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಟೆಸ್ಟ್: 27 ಸಾವಿರ ಪ್ರೇಕ್ಷಕರಿಗೆ ಅವಕಾಶ

Srinivasamurthy VN

ಅಡಿಲೇಡ್: ಕೊರೊನಾ ಸೋಂಕಿನ ನಡುವೆಯೂ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯಕ್ಕೆ ಅಡಿಲೇಡ್ ನ ಒಟ್ಟು ಪ್ರೇಕ್ಷಕರ ಸಾಮರ್ಥ್ಯದ ಅರ್ಧದಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ.

ಡಿಸೆಂಬರ್ 17ರಿಂದ 21ರವರೆಗೆ ನಡೆಯಲಿರುವ ಹಗಲು-ರಾತ್ರಿ ಟೆಸ್ಟ್ ಗೆ ಅಡಿಲೇಡ್ ಆತಿಥ್ಯವಹಿಸಿದೆ. ಈ ಟೆಸ್ಟ್ ಬಳಿಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತವರಿಗೆ ಮರಳಲಿದ್ದಾರೆ. ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕಾರಣ ಕೊಹ್ಲಿ ಕೊನೆಯ ಮೂರು ಟೆಸ್ಟ್ ಗಳಿಗೆ  ಅಲಭ್ಯರಾಗಲಿದ್ದಾರೆ.

ಆಸ್ಟ್ರೇಲಿಯಾ ಮತ್ತು ಭಾರತ ನಡುವೆ ನಡೆಯುತ್ತಿರುವ ಮೊದಲ ಹಗಲು -ರಾತ್ರಿ ಟೆಸ್ಟ್ ಪಂದ್ಯವಾಗಿದೆ. ಉಭಯ ತಂಡಗಳು ಈ ಹಿಂದಿನ ಟೆಸ್ಟ್ ಪಂದ್ಯಗಳಲ್ಲಿ ಸೋಲರಿಯದ ತಂಡಗಳಾಗಿವೆ. ಆಸ್ಟ್ರೇಲಿಯಾ ತಂಡ ಅಡಿಲೇಡ್ ನಲ್ಲಿ ಆಡಿದ ನಾಲ್ಕು ಹಗಲು-ರಾತ್ರಿ ಟೆಸ್ಟ್ ಗಳಲ್ಲಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ,  ಇಂಗ್ಲೆಂಡ್ ಮತ್ತು ಪಾಕಿಸ್ತಾನ ವಿರುದ್ಧ ಜಯ ಸಾಧಿಸಿದರೆ, ಭಾರತ ತಂಡ 2019ರಲ್ಲಿ ಕೋಲ್ಕೊತಾದಲ್ಲಿ ನಡೆದ ಹಗಲು-ರಾತ್ರಿ ಟೆಸ್ಟ್ ನಲ್ಲಿ ಬಾಂಗ್ಲಾದೇಶಧ ವಿರುದ್ಧ ಜಯ ಸಾಧಿಸಿದೆ.

ಟೆಸ್ಟ್ ಸರಣಿಗೂ ಮುನ್ನ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮೂರು ಏಕದಿನ ಮತ್ತು ಮೂರು ಟಿ20 ಪಂದ್ಯಗಳನ್ನು ಆಡಲಿದ್ದು, ಸರಣಿಯ ನವೆಂಬರ್ 27ರಂದು ಆರಂಭವಾಗಲಿದೆ.

SCROLL FOR NEXT