ಕ್ರಿಕೆಟ್

ಸ್ಥಳೀಯ ಯುವ ಪ್ರತಿಭೆಗಳು ಹೆಚ್ಚಾದರೆ ಐಪಿಎಲ್ ವಿಸ್ತರಣೆಗೆ ಸಿದ್ಧವಾಗಲಿದೆ: ಎನ್ ಸಿಎ ನಿರ್ದೇಶಕ ರಾಹುಲ್ ದ್ರಾವಿಡ್

Vishwanath S

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದೇಶದಲ್ಲಿ ಲಭ್ಯವಿರುವ ಪ್ರತಿಭೆಗಳ ಗುಣಮಟ್ಟ ಮತ್ತು ಪ್ರಮಾಣಕ್ಕೆ ಧಕ್ಕೆಯಾಗದಂತೆ ತಂಡಗಳ ಸಂಖ್ಯೆಯ ದೃಷ್ಟಿಯಿಂದ 'ವಿಸ್ತರಣೆಗೆ ಸಿದ್ಧವಾಗಿದೆ' ಎಂದು ಭಾರತದ ಮಾಜಿ ನಾಯಕ ರಾಹುಲ್ ದ್ರಾವಿಡ್ ಹೇಳಿದ್ದಾರೆ. 

2021ರ ಐಪಿಎಲ್ ಎಂಟು ತಂಡಗಳ ಬದಲು ಒಂಬತ್ತು ತಂಡಗಳನ್ನು ಒಳಗೊಂಡಿರುತ್ತದೆ. ಮುಂದೆ 2023ರ ವೇಳೆಗೆ 10 ತಂಡಗಳಿಗೆ ಹೆಚ್ಚಿಸುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಇದು ಯಾವಾಗಲೂ ಬಿಸಿಸಿಐನ ದೀರ್ಘಕಾಲೀನ ಯೋಜನೆಯಾಗಿದೆ.

ಈಗ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ(ಎನ್‌ಸಿಎ) ನಿರ್ದೇಶಕರಾಗಿರುವ ದ್ರಾವಿಡ್ ಅವರ ಅಭಿಪ್ರಾಯಗಳನ್ನು ರಾಜಸ್ಥಾನ್ ರಾಯಲ್ಸ್ ಸಹ-ಮಾಲೀಕ ಮನೋಜ್ ಬಡಲೆ ಅವರು ಧ್ವನಿಗೂಡಿಸಿದರು. 2021ರಲ್ಲಿ ಒಂಬತ್ತು ತಂಡಗಳ ಐಪಿಎಲ್ 'ಖಂಡಿತವಾಗಿಯೂ ಸಾಧ್ಯ' ಎಂದು ಅಭಿಪ್ರಾಯಪಟ್ಟರು.

ನೀವು ಪ್ರತಿಭೆಯ ದೃಷ್ಟಿಕೋನದಿಂದ ನೋಡಿದರೆ ಐಪಿಎಲ್ ವಿಸ್ತರಣೆಗೆ ಸಿದ್ಧವಾಗಿದೆ ಎಂದು ನಾನು ಭಾವಿಸುತ್ತೇನೆ. ಸಾಕಷ್ಟು ಪ್ರತಿಭಾವಂತ ಆಟಗಾರರು ಆಡಲು ಅವಕಾಶ ಸಿಗುತ್ತಿಲ್ಲ. ಹೆಚ್ಚಿನ ತಂಡಗಳಿದ್ದರೆ, ಎಲ್ಲಾ ಪ್ರತಿಭಾವಂತ ಆಟಗಾರರನ್ನು ಆಡಿಸಬಹುದಾಗಿದೆ ಮತ್ತು ಗುಣಮಟ್ಟ ಸಹ ಇಳಿಯುವುದಿಲ್ಲ ಎಂದು ದ್ರಾವಿಡ್ ಹೇಳಿದರು.

SCROLL FOR NEXT