ಕ್ರಿಕೆಟ್

ಆಸೀಸ್ ಸರಣಿ: 'ಕಠಿಣ, ಆಕ್ರಮಣಕಾರಿ' ಕ್ರಿಕೆಟ್‌ಗೆ ಟೀಂ ಇಂಡಿಯಾ ಸಿದ್ಧ!

Vishwanath S

ನವದೆಹಲಿ: ದೀರ್ಘಾವಧಿ ಅಂತಾರಾಷ್ಟ್ರೀಯ ಸ್ಪರ್ಧೆಯಿಂದ ದೂರ ಉಳಿದಿದ್ದ ಟೀಂ ಇಂಡಿಯಾ ಶುಕ್ರವಾರ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯ ಮೊದಲನೇ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಲು ಸಿದ್ದವಾಗಿದೆ. ಆದರೆ, ಟೀಂ ಇಂಡಿಯಾಗೆ ಪ್ರಮುಖ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ಅನುಪಸ್ಥಿತಿ ಕಾಡುತ್ತಿದೆ. 

ಆರೋನ್‌ ಫಿಂಚ್‌ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದು, ಪ್ಯಾಟ್‌ ಕಮಿನ್ಸ್ ಉಪ ನಾಯಕನಾಗಿ ಕಾರ್ಯನಿರ್ವಹಿಸಲಿದ್ದಾರೆ.  ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್‌ ರಾಹುಲ್‌ ಭಾರತ ತಂಡದ ಉಪ ನಾಯಕನ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. 

ಕಳೆದ ಸೆಪ್ಟೆಂಬರ್‌ ತಿಂಗಳಲ್ಲಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್ ವಿರುದ್ಧ ಕೊನೆಯ ಸೀಮಿತ ಓವರ್‌ಗಳ ಸರಣಿ ಆಡಿತ್ತು ಹಾಗೂ ನಂತರ ತಂಡದ ಬಹುತೇಕ ಆಟಗಾರರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಭಾಗವಹಿಸಿದ್ದರು. ಇನ್ನು ಭಾರತ ತಂಡ ಪ್ರಸಕ್ತ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್‌ ಪ್ರವಾಸ ಕೈಗೊಂಡಿತ್ತು.

ಭಾರತ ಆಸ್ಟ್ರೇಲಿಯಾ ಪ್ರವಾಸ:
ಏಕದಿನ ಸರಣಿ

ನ. 27 - ಮೊದಲ ಏಕದಿನ ಪಂದ್ಯ(ಸಿಡ್ನಿ, ಹಗಲು-ರಾತ್ರಿ ಪಂದ್ಯ)
ನ. 29 - ಎರಡನೇ ಏಕದಿನ ಪಂದ್ಯ(ಸಿಡ್ನಿ, ಹಗಲು-ರಾತ್ರಿ ಪಂದ್ಯ)
ಡಿ. 2 - ಮೂರನೇ ಏಕದಿನ ಪಂದ್ಯ(ಕ್ಯಾನ್ಬೆರಾ, ಹಗಲು-ರಾತ್ರಿ ಪಂದ್ಯ)

ಟಿ20 ಸರಣಿ
ಡಿ. 4 - ಮೊದಲ ಟಿ20 ಪಂದ್ಯ(ಕ್ಯಾನ್ಬೆರಾ, ರಾತ್ರಿ ಪಂದ್ಯ)
ಡಿ. 6 - ಎರಡನೇ ಟಿ20 ಪಂದ್ಯ(ಸಿಡ್ನಿ, ರಾತ್ರಿ ಪಂದ್ಯ)
ಡಿ. 8 - ಮೂರನೇ ಟಿ20 ಪಂದ್ಯ(ಸಿಡ್ನಿ, ರಾತ್ರಿ ಪಂದ್ಯ)

ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ
ಡಿ. 17-21 - ಮೊದಲ ಟೆಸ್ಟ್ ಪಂದ್ಯ(ಅಡಿಲೇಡ್, ಹಗಲು-ರಾತ್ರಿ ಪಂದ್ಯ)
ಡಿ. 26-30 - ಎರಡನೇ ಟೆಸ್ಟ್ ಪಂದ್ಯ(ಮೆಲ್ಬರ್ನ್)
ಜ. 7-11 - ಮೂರನೇ ಟೆಸ್ಟ್ ಪಂದ್ಯ(ಸಿಡ್ನಿ)
ಜ. 15-19 - ನಾಲ್ಕನೇ ಟೆಸ್ಟ್ ಪಂದ್ಯ(ಬ್ರಿಸ್ಬೆನ್)

ಏಕದಿನ ತಂಡ:
ವಿರಾಟ್ ಕೊಹ್ಲಿ (ನಾಯಕ)), ಶಿಖರ್ ಧವನ್, ಶುಭ್ ಮನ್  ಗಿಲ್, ಕೆ.ಎಲ್ ರಾಹುಲ್(ಉಪ ನಾಯಕ ಹಗೂ ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಅಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ವೈ. ಚಹಾಲ್, ಕುಲದೀಪ್ ಯಾದವ್, ಜಸ್ ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದೂಲ್ ಠಾಕೂರ್

ಟಿ20 ತಂಡ:
ವಿರಾಟ್ ಕೊಹ್ಲಿ, ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್, ಎಚ್ ಪಾಂಡ್ಯ, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಡಬ್ಲ್ಯೂ ಸುಂದರ್, ವೈ ಚಹಾಲ್, , ಜೆ ಬುಮ್ರಾ, ಮೊಹಮ್ಮದ್. ಶಮಿ, ನವದೀಪ್ ಸೈನಿ, ಡಿ ಚಹಾರ್, ವರುಣ್ ಚಕ್ರವರ್ತಿ.

ಟೆಸ್ಟ್ ತಂಡ:
ವಿರಾಟ್ ಕೊಹ್ಲಿ (ನಾಯಕ), , ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಕೆ.ಎಲ್ ರಾಹುಲ್ , ಚೇತೇಶ್ವರ್, ಅಜಿಂಕ್ಯಾ (ಉಪನಾಯಕ), ಹನುಮ ವಿಹಾರಿ, ಶುಭ್ ಮನ್ ಗಿಲ್, ಸಹಾ (ವಿಕೆಟ್ ಕೀಪರ್), ರಿಷಬ್ ಪಂತ್ (ವಿಕೆಟ್ ಕೀಪರ್), ಬುಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಮೊಹಮ್ಮದ್ ಸಿರಾಜ್

ನಾಲ್ಕು ಹೆಚ್ಚುವರಿ ಬೌಲರ್‌ಗಳು-ಕಮಲೇಶ್ ನಾಗರ್ ಕೋಟೆ, ಕಾರ್ತಿಕ್ ತ್ಯಾಗಿ, ಇಶಾನ್ ಪೊರೆಲ್ ಮತ್ತು ಟಿ. ನಟರಾಜನ್ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ತಂಡದೊಡನೆ ಸೇರಿದ್ದಾರೆ.

SCROLL FOR NEXT