ಕ್ರಿಕೆಟ್

ವಿವಾಹವಾಗುವುದಾಗಿ ನಂಬಿಸಿ ಲೈಂಗಿಕ ಕಿರುಕುಳ: ಪಾಕ್ ಕ್ರಿಕೆಟ್ ಟೀಂ ನಾಯಕ ಬಾಬರ್ ವಿರುದ್ಧ ಮಹಿಳೆ ಆರೋಪ

Raghavendra Adiga

ಪಾಕಿಸ್ತಾನ ಕ್ರಿಕೆಟ್ ಟೀಂನ ನಾಯಕ ಬಾಬರ್ ಅಜಮ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ 10 ವರ್ಷಗಳ ಕಾಲ ಲೈಂಗಿಕವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. 

ಬಾಬರ್ ಕ್ರೀಡಾ ಜೀವನ ಪ್ರಾರಂಭಕ್ಕೆ ಮುನ್ನವೇ ನನಗೆ ಅವರ ಪರಿಚಯವಿದ್ದದ್ದಾಗಿ ಹೇಳಿರುವ ಮಹಿಳೆ ನಾನು ಯಾವಾಗಲೂ ಆತನಿಗೆ ಬೆಂಬಲವಾಗಿದ್ದೆ ಎನ್ನುತ್ತಾರೆ.  ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಮಹಿಳೆ ತಾವಿಬ್ಬರೂ ಪ್ರೀತಿಸುತ್ತಿದ್ದದ್ದಾಗಿಯೂ ಶಾಲಾ ದಿನಗಳಿಂದ ಪರಸ್ಪರ ತಿಳಿದಿದ್ದಾಗಿಯೂ ಹೇಳಿಕೆ ನಿಡಿದ್ದಾರೆ. 

2010 ರಲ್ಲಿ ಬಾಬರ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಅದಾಗಿ ಮುಂದಿನ ವರ್ಷ ನಾವಿಬ್ಬರೂ ಕೋರ್ಟ್ ನಲ್ಲಿ ವಿವಾಹವಾಗುವುದಕ್ಕೆ ಮನೆ ಬಿಟ್ಟು ಓಡಿ ಹೋಗಿದ್ದೆವು. ಆದರೆ ಬಾಬರ್ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾದ ನಂತರ ಅವರ ಖ್ಯಾತಿ ಉತ್ತುಂಗಕ್ಕೇರಿತ್ತು.  ಆಗ ಆತನ ಮನಸ್ಸು ಬದಲಾಯಿತು ಎಂದು ಮಹಿಳೆ ಆರೋಪಿಸಿದ್ದಾರೆ.

ಬಾಬರ್ ತನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದು ಇದನ್ನು ಬಹಿರಂಗಪಡಿಸಿದ್ದಾದರೆ ನನ್ನನ್ನು ಕೊಲ್ಲುವುದಾಗಿಯೂ ಬೆದರಿಕೆ ಹಾಕಿದ್ದ.ರೆಂದು ಮಹಿಳೆ ಆರೋಪಿಸಿದ್ದಾರೆ. ಬಾಬರ್ ಒಳ್ಳೆಯ ಕೌಟುಂಬಿಕ ಹಿನ್ನೆಲೆಯಿರುವ ಕುಟುಂಬಕ್ಕೆ ಸೇರಿಲ್ಲದ ಕಾರಣ ಅವರ ವೃತ್ತಿಜೀವನ ಪ್ರಾರಂಬದಲ್ಲಿ ಅವರ ಹಣಕಾಸಿನ ಖರ್ಚುವೆಚ್ಚವನ್ನೂ ಣಾನು ನೋಡಿಕೊಂಡಿದ್ದೆ ಎಂದು ಆಕೆ ಬಹಿರಂಗಪಡಿಸಿದ್ದಾರೆ.

ಸಾರ್ವಜನಿಕ ವೇದಿಕೆಯಲ್ಲಿ ಆರೋಪಗಳು ಕೇಳಿಬಂದ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಾಬರ್ ವಿರುದ್ಧ ಯಾವುದೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆಯೇ ಅಥವಾ ಇಲ್ಲವೆ ಎನ್ನುವುದು ಇದೀಗ ಕುತೂಹಲಕಾರಿ ಸಂಗತಿಯಾಗಿದೆ. 

ಏತನ್ಮಧ್ಯೆ, ಪಾಕಿಸ್ತಾನ ಕ್ರಿಕೆಟ್ ತಂಡವು ಸರಣಿ ಪ್ರ್‍ಆರಂಬಕ್ಕೆ ಮುನ್ನ ನ್ಯೂಜಿಲ್ಯಾಂಡ್ ನಲ್ಲಿ 14 ದಿನಗಳ ಸೆಲ್ಫ್ ಐಸೋಲೇಷನ್ ನಲ್ಲಿದೆ. ತಂಡದ ಏಳು ಕ್ರಿಕೆಟಿಗರುಕೊರೋನಾವೈರಸ್  ಗೆ ಪಾಸಿಟಿವ್ ವರದಿ ಪಡೆದಿದ್ದು ಇದುವರೆಗೆ ವೈರಸ್ ಗೆ ತುತ್ತಾದ ಕ್ರಿಕೆಟಿಗರ ಹೆಸರು ಬಹಿರಂಗವಾಗಿಲ್ಲ. 
 

SCROLL FOR NEXT